ಶ್ರಾವಣ ಮಾಸದಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಮಾಡುವುದೆ ಶ್ರೇಷ್ಠ:  ಜಿ. ಆರ್ ಸೋನೆರ್

Ravi Talawar
ಶ್ರಾವಣ ಮಾಸದಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಮಾಡುವುದೆ ಶ್ರೇಷ್ಠ:  ಜಿ. ಆರ್ ಸೋನೆರ್
WhatsApp Group Join Now
Telegram Group Join Now

ಬೆಳಗಾವಿ:  ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಗ್ರಾಮಾಭಿವೃದ್ಧಿ ಯೋಜನೆ ಮುಖೇನ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಜನರಿಗೆ ಯಾವುದೆ ಆಸ್ತಿ ಪತ್ರಗಳಿಲ್ಲದೆ ಬ್ಯಾಂಕ್ ಗಳಿಗೆ ತಾನು ಜವಾಬ್ದಾರಿಯಾಗಿ ನಿಂತು ಜನರ ಆರ್ಥಿಕ ಅಭಿವೃದ್ಧಿಗೆ ಆರ್ಥಿಕ ಸಹಕಾರ ನೀಡುತ್ತಿರುವುದು ಶ್ಲಾಘನೀಯವಾದ್ದು ಇವತ್ತಿನ ಜನ ಮಾನದಲ್ಲಿ ಒಡಹುಟ್ಟಿದವರೆ ಜವಾಬ್ದಾರಿ ತಗೆದುಕೊಳ್ಳದಿರುವಾಗ ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದ್ದಾರೆ ಎಂದು ಹಿರಿಯ ವಕೀಲರಾದ  ಜಿ ಆರ್  ಸೋನೆರ್‌   ಹೇಳಿದರು.

ತಾಲೂಕಿನ ಹಿಂಡಲಗಾ ಗಣೇಶ ಸಭಾಭವನದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ಮೂಖೇನ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಪದಗ್ರಹಣ ಕಾರ್ಯಕ್ರಮ ಹಾಗೂ ನೂತನ ಒಕ್ಕೂಟದ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾಡಿನ ಒಳಿತಿಗಾಗಿ, ಸಕಲ ಏಳಿಗೆಗಾಗಿ ಶ್ರಾವಣ ಮಾಸದಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಮಾಡುವುದೆ ಶ್ರೇಷ್ಠವಾಗಿದೆ.  ಇದೊಂದು ಪವಿತ್ರ ಮಾಸ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಗಾವಿ ತಾಲೂಕಿನ ಯೋಜನಾಧಿಕಾರಿ ನಾಗರಾಜ್ ಹದ್ಲಿ ಮಾತನಾಡಿ, ನಮ್ಮ ಆರೋಗ್ಯ ಆಯುಷ್ಯ ಶಾಂತಿ ನೆಮ್ಮದಿ  ಸಂತಾನ ಪ್ರಾಪ್ತಿಗಾಗಿ ಹಾಗೂ ಸಕಲ ಸಂಪತ್ತು ಕರುಣಿಸಲೆಂದು ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಮಾಡುವಂತದ್ದು ಭಾರತೀಯ ಹಿಂದೂಗಳ ನಂಬಿಕೆ,  ಎಲ್ಲರೂ ಇಂಥ ಧಾರ್ಮಿಕ  ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇದರಿಂದ ಧಾರ್ಮಿಕ ಭಾವನೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾತನಾಡಿ,    ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳಿಗೆ ಜವಾಬ್ದಾರಿಯ ಹಸ್ತಾಂತರ ಮಾಡಿ ನೂತನ ಪದಾಧಿಕಾರಿಗಳಿಗೆ ನೂತನ ಪದಾಧಿಕಾರಿಗಳಿಗೆ ತಮ್ಮ ಕರ್ತವ್ಯ  ಮತ್ತು ಜವಾಬ್ದಾರಿಯ ಬಗ್ಗೆ ತಿಳಿಸಿದರು.

ಬೆಳಗಾವಿಯ ಜೆ ಎನ್ ಮೆಡಿಕಲ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ  ಡಾಕ್ಟರ್ ಆರತಿ ಕೆ ಹನ್ನೂರ್ಕರ್ ಮಾತನಾಡಿ,   ಯಾವುದೇ ದೇವರ  ಪೂಜೆ ವ್ರತ ಮಾಡಿದರು ಅದು ನೇರವಾಗಿ ಶಿವನ ಪಾದಕ್ಕೆ ಅರ್ಪಣೆಯಾಗುತ್ತದೆ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಜೊತೆಗೆ ದೈಹಿಕ ಮತ್ತು ಆರೋಗ್ಯದ ಹಿತ ದೃಷ್ಟಿ ಗಾಗಿ ಪೌಷ್ಟಿಕ ಆಹಾರವನ್ನು ಸೇವನೆ ಮಾಡಿ ಆರೋಗ್ಯ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.

ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷ   ರವಿಕುಮಾರ್ ಕಲ್ಲಪ್ಪ ಕೊಕಿತಕರ್  ಮಾತನಾಡಿ , ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಇಂತಹ ಹಲವಾರು ಕಾರ್ಯಕ್ರಮಗಳನ್ನ ನಡೆಸುತ್ತಿದ್ದಾರೆ ಇಂತಹ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿ ಉತ್ತಮ ಸಂಸ್ಕಾರ ಬೆಳೆಯುತ್ತದೆ ಧರ್ಮದ ಹಾದಿಯಲ್ಲಿ ನಡೆದು ನಮ್ಮ ಮಕ್ಕಳನ್ನು ಉತ್ತಮ ಸಂಸ್ಕಾರದಲ್ಲಿ ಬೆಳೆಸಿದಾಗ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದು ತಿಳಿಸಿದರು.

ಮಣ್ಣೂರು ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷರಾದ  ಮುಕುಂದ ಭಾವಕು ತರಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಬೆಳಗಾವಿ ಮರಾಠ ಮಂದಿರ  ಟ್ರಸ್ಟ್  ಅಧ್ಯಕ್ಷರಾದ  ಅಪ್ಪಾ ಸಾಹೇಬ ಬೀ ಗುರವ,  ಹಿಂಡಲದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ರಾಮಚಂದ್ರ ಅಣ್ಣಪ್ಪ ಮನ್ನೋಳಕರ್ ,  ಗೋಜಗ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಶಿವಾಜಿ ಸುಬ್ಬರಾವ್ ಯಳಗೆ , ಕೃಷಿ ಮೇಲ್ವಿಚಾರಕರಾದ ಶ್ ನಾಗರಾಜ್ ಅಬ್ಬಿಗೇರಿ,   ಮೇಲ್ವಿಚಾರಕಿ  ಸಂಗೀತಾ ಪೂಜಾರ,  ಸ್ವಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷರು,  ಸೇವಾ ಪ್ರತಿನಿಧಿಗಳಾದ ಕವಿತಾ ಕದಂ, ಜಯಶ್ರೀ ನಾಯ್ಕ, ಲಕ್ಷ್ಮೀ ಕಾಂಬ್ಳೆ, ರೇಣುಕಾ ಕಾಂಬ್ಳೆ, ಅನ್ನಪೂರ್ಣ, ರಾಜಶ್ರೀ  ಉಪಸ್ಥಿತರಿದ್ದರು ಸಂತೋಷ್  ವಂದಿಸಿದರು.

WhatsApp Group Join Now
Telegram Group Join Now
Share This Article