ಸಾಮೂಹಿಕ ವಿವಾಹಗಳು ಬಡವರ ಮದುವೆಗಳಲ್ಲಾ ಇವು ಭಾಗ್ಯವಂತರ ಮದುವೆ : ಕುಡಗುಂಟಿ,,

MK HasiruKranti
ಸಾಮೂಹಿಕ ವಿವಾಹಗಳು ಬಡವರ ಮದುವೆಗಳಲ್ಲಾ ಇವು ಭಾಗ್ಯವಂತರ ಮದುವೆ : ಕುಡಗುಂಟಿ,,
WhatsApp Group Join Now
Telegram Group Join Now
ಕುಕನೂರು : ಸಾಮೂಹಿಕ ವಿವಾಹಗಳು ಬಡವರ ಮದುವೆಗಳಲ್ಲಾ ಇವು ಭಾಗ್ಯವಂತರ ಮದುವೆಗಳಾಗಿದ್ದು, ಸಾಮೂಹಿಕ ವಿವಾಹದಲ್ಲಿ ಮದುವೆಯಾದರೇ ದುಂದುವೆಚ್ಚಕ್ಕೆ ಕಡಿವಾಣ ಹಾಕುವುದಲ್ಲದೇ, ಬಡ ಜನತೆಯ ಆರ್ಥಿಕ ಹೊರೆ ತಗ್ಗಿಸಲು ಸಹಕಾರಿಯಾಗಿವೆ ಎಂದು ಜಿಪಂ ಮಾಜಿ ಸದಸ್ಯ ಈರಪ್ಪ ಕುಡುಗುಂಟಿ ಹೇಳಿದರು.
ಅವರು ಪಟ್ಟಣದ ಗುದ್ನೇಪ್ಪನಮಠದ ಶ್ರೀ ನೀಲಗುಂದ ಗುದ್ನೇಶ್ವರ ಸೇವಾ ಸಮಿತಿಯಿಂದ ಆಯೋಜಿಸಿದ್ದ ಧಾರ್ಮಿಕ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ
ನೂತನ ದಂಪತಿಗಳು ಸಾಮರಸ್ಯದಿಂದ ಹಿರಿಯೊರೊಂದಿಗೆ ಬೆರೆತು ನಡೆಯಬೇಕು ಎಂದು ಕಿವಿ ಮಾತನ್ನು ಹೇಳಿದರು.
ನಂತರ ಕಾರ್ಯಕ್ರಮದ ಸಾನಿಧ್ಯ ವಹಿಸಿದ ನೀಲಗುಂದ ಗುದ್ನೇಶ್ವರ ಪ್ರಭು ಲಿಂಗದೇವರು ಆಶಿರ್ವಚನ ನೀಡಿ ಮಾತನಾಡಿ ಪ್ರಭುಲಿಂಗ ದೇವರು ಮಾತನಾಡಿ ಈ ಭೂಮಿಯಲ್ಲಿ ಜನಿಸಿರುವ ನೀವೆಲ್ಲರೂ  ಪುಣ್ಯವಂತರಾಗಿದ್ದು, ಭಗವಂತ ಕೊಟ್ಟ ಈ ಕಾಯವನ್ನು ಪುಣ್ಯ ಕಾರ್ಯಗಳಿಗೆ ಬಳಸಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನವ ಜೀವನಕ್ಕೆ ಪಾದಾರ್ಪಣೆ ಮಾಡಿದ ದಂಪತಿಗಳು ಹಿರಿಯರಲ್ಲಿ ಗೌರವ ಮನೋಭಾವನೆ ಬೆಳಸಿಕೊಳ್ಳುವ ಜೊತೆಗೆ ಪುರುಷರು ಇಂದಿನಿಂದ ತ್ಯಾಗ ಜೀವನದೊಂದಿಗೆ ದುಶ್ಟಟಕ್ಕೆ ಬಲಿಯಾಗದೇ ಸಮಾಜದಲ್ಲಿ ಮಾದರಿ ಸಂಸಾರ ನಡೆಸಬೇಕು ಎಂದು ಹೇಳಿದರು.
ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುವುದು ಸಾಮಾನ್ಯ ಕೆಲಸವಲ್ಲಾ, ಆದರೆ ತಿಂಗಳ ಪರ್ಯಂತರ ಇಲ್ಲಿನ ಗ್ರಾಮಸ್ಥರ ಶ್ರಮದಿಂದ, ದಾನಿಗಳ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಕುದ್ರಿಮೋತಿ ವಿಜಯಮಹಾಂತೇಶ್ವರ ಸ್ವಾಮಿಗಳು, ಯಲಬುರ್ಗಾ ಶ್ರೀಧರ ಮುರುಡಿಮಠದ ಬಸವಲಿಂಗೇಶ್ವರ ಸ್ವಾಮೀಗಳು, ಮಲ್ಲನಕೇರಿ ಸ್ವಾಮೀಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದರು.
ಈ ಸಂದರ್ಭದಲ್ಲಿ ಚನ್ನಬಸಯ್ಯ ಧೂಪದ, ಸಿದ್ದಲಿಂಗಯ್ಯ ಹಿರೇಮಠ, ಸುರೇಶ ಬಳೂಟಗಿ, ಶರಣಯ್ಯ ಹುಣಸಿಮರದ, ಸಿದ್ದಲಿಂಗಯ್ಯ ಬಂಡಿ, ಚನ್ನಬಸಯ್ಯ ಪೂಜಾರ, ಶಿವರಾಜ ಗಲಬಿ, ಚನ್ನಬಸಯ್ಯ ಇನಾಮದಾರ, ಮಲ್ಲಯ್ಯ ಹಲಸಿನಮರದ, ಗುರಯ್ಯ ಯರೇಹಂಚಿನಾಳ ಸೇರಿದಂತೆ ಗ್ರಾಮದ ಗುರು, ಹಿರಿಯರು, ಯುವಕರು, ಮಹಿಳೆಯರು ಇದ್ದರು.
 *ಬಾಕ್ಸ್,,*
ಗುದ್ನೇಶ್ವರಮಠದ ಜಂಗಮರು ಬೇಡುವ ಜಂಗಮರಲ್ಲಾ ಇವರು ಕೊಡುವ ಜಂಗಮರಾಗಿದ್ದು, ಪ್ರತಿ ವರ್ಷ ಹತ್ತಾರು ನವ ಜೋಡಿಗಳ ಸಾಮೂಹಿಕ ವಿವಾಹ ನಡೆಸುತ್ತಿರುವುದ ಸಂತೋಷ ಮೂಡಿಸಿದೆ.
ಇಲ್ಲಿನ ನೀಲಗುಂದ ಗುದ್ನೇಪ್ಪನಮಠದ ಪ್ರಭುಲಿಂಗ ದೇವರು ಇಲ್ಲಿ ನೆಲೆ ನಿಂತು ಧರ್ಮ ಜಾಗೃತಿಯೊಂದಿಗೆ, ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ.
ಈ ಗುದ್ನೇಶ್ವರ ಮಠಕ್ಕೆ, ಗುದ್ನೇಶ್ವರನಲ್ಲಿ ಸಾಕಷ್ಟು ಶಕ್ತಿ ಅಡಗಿದೆ. ಈ ಜಾಗದಲ್ಲಿ ಕೇಡು ಬಗೆದರೇ ತಮ್ಮ ಕರ್ಮ ತಾವು ಅನುಭವಿಸುವರು.
*ಮಹಾದೇವ ಸ್ವಾಮಿಗಳು ಅನ್ನದಾನೀಶ್ವರ ಮಠ ಕುಕನೂರು.*
 *2,,,* *ಬಾಕ್ಸ್,,*
ಸಾಮೂಹಿಕ ವಿವಾಹಗಳನ್ನು ಆಯೋಜಿಸುವುದು ಮಠ, ಮಾನ್ಯಗಳ ಸಂಸ್ಕೃತಿಯಾಗಿದ್ದು, ಇಂತಹ ಮಠಾಧೀಶರ ಹಾಗೂ ಸಾವಿರಾರು ಜನರ ಶುಭಾಶಿರ್ವಾದ ಪಡೆದ ನೂತನ ದಂಪತಿಗಳು ಪುಣ್ಯವಂತರಾಗಿದ್ದು, ಪರಸ್ಪರ ಅನ್ಯೂನ್ಯವಾಗಿ ಹಿರಿಯೊರೊಂದಿಗೆ ಗೌರವದಿಂದ ಜೀವನ ನಡೆಸಬೇಕು.
*ಕಳಕಪ್ಪ ಕಂಬಳಿ ತಾಪಂ ಮಾಜಿ ಉಪಾಧ್ಯಕ್ಷ.*
WhatsApp Group Join Now
Telegram Group Join Now
Share This Article