ಘಟಪ್ರಭಾ: ೧೯ನೇ ಶತಮಾನದ ಆರಂಭದಲ್ಲಿ ಆತ್ಮಕಲ್ಯಾಣ, ಲೋಕಕಲ್ಯಾಣವೆಂಬುವುದು ಜನಮಾನಸಕ್ಕೆ ಮರಚಿಕೆಯಾಗುತ್ತಿದ್ದ ಕಾಲ, ಲಿಂಗದೊಲವು ಮಾಯವಾಗಿ ಅಷ್ಟಾವರಣ ಲಾಂಚನಗಳು ಮರೆಯಾಗಿ ಕತ್ತಲು ಕವಿಯುತ್ತಿದ್ದ ಸಮಯ ಭಕ್ತಿ, ದಾನ,ಧರ್ಮ, ಪೂಜೆ, ಪುರಸ್ಕಾರಗಳೆಲ್ಲವೂ ನವಶೈಲಿಗೆ ಮಾರುಹೋಗಿ ಜನತೆ ನಮ್ಮ ಪರಂಪರೆಯನ್ನೆಲ್ಲ ಧಿಕ್ಕರಿಸಿದ್ದರು. ನೀತಿ, ಧರ್ಮಗಳೆಲ್ಲವೂ ಅಂದಗೆಟ್ಟು ಹೋಗಿದ್ದು ಲಂಡರ ದ್ರೋಹ ಕಾರ್ಯಗಳು ಮಿತಿ ಮೀರಿ ಹೋಗಿದ್ದವು. ಲಿಂಗವಂತರು ಎದೆ ಮೇಲೆ ಧರಿಸಿದ್ದ ತಮ್ಮ ಇಷ್ಟ ಲಿಂಗವನ್ನು ತೆಗೆದೊಗೆದು ನವ ಕೇಶವಿನ್ಯಾಸಕ್ಕೆ ದಾಸರಾಗಿ ನಾಸ್ತಿಕತೆಯ ಕೂಪದಲ್ಲಿ ಬಿದ್ದು ಅಡ್ಡ ದಾರಿ ಹಿಡಿದು ಅಟ್ಟಹಾಸದಿ ತಕದಿಮಿ ನರ್ತನಗೈಯುತ್ತಿದ್ದರು ಪರಕಿಯ ಸಂಸ್ಕೃತಿಯ ಲಾಂಚನಕ್ಕೆ ಮನಸೋತು ತಮ್ಮ ಧರ್ಮದ ನಡೆ-ನುಡಿಗಳನ್ನೆಲ್ಲ ಅಲ್ಲಗಳೆಯುವ ಶೂರರು ತುಂಬಿನಿಂತಿದ್ದರು ಇಂತಹ ಸಮಯದಲ್ಲಿ ಒಬ್ಬೊಬ್ಬ ಮಹಾತ್ಮರ ಉದಯಕ್ಕೆ ಕಾರಣವಾಯಿತು. ೧೨ನೇ ಶತಮಾನದಲ್ಲಿ ಬಸವಾದಿ ಶರಣರು ಉಗಮವಾದರೆ ೧೪ನೇ ಶತಮಾನದಲ್ಲಿ ಪ್ರೌಢದೇವರಾಯನ ಕಾಲದಲ್ಲಿ ನೂರೊಂದು ವಿರಕ್ತರ ಉಗಮವಾದರೆ ೧೬ನೇ ಶತಮಾನದಲ್ಲಿ ಯಡಿಯೂರು ತೊಂಟದ ಸಿದ್ಧಲಿಂಗದ ಉದಯ ೧೯, ೨೦ನೇ ಶತಮಾನದಲ್ಲಿ ಅಥಣಿಯ ಮುರುಗೇಂದ್ರ ಶಿವಯೋಗಿಗಳು, ಬಿದರಿ ಇಳಕಲದ ವಿಜಯಮಹಾಂತ ಮಹಾಸ್ವಾಮಿಗಳು, ಕುಮಾರ ಮಹಾಸ್ವಾಮಿಗಳು, ಹಾನಗಲ್ಲ ಕುಮಾರ ಶಿವಯೋಗಿಗಳು, ದಾರಬಾಡದ ಮೃತ್ಯುಂಜಯ ಅಪ್ಪನವರು, ಬೀಳೂರಿನ ಗುರುಬಸವ ಮಹಾಸ್ವಾಮಿಗಳು, ಹುಬ್ಬಳ್ಳಿಯ ಸಿದ್ಧರೂಢರು, ಅಂಕಲಿಗಿಯ ಅಡವಿಸಿದ್ದರು, ಅರಭಾವಿಯ ದುರದುಂಡೀಶ್ವರರು, ಗರಗದ ಮಡಿವಾಳಪ್ಪ, ನವಲುಗುಂದದ ನಾಗಲಿಂಗಪ್ಪ, ಎಮ್ಮಿಗನೂರು ಜಡೆಸಿದ್ದ ಶಿವಯೋಗಿಗಳು, ಇಂತಹ ಮಹಾತ್ಮರು ನಾಡಿನಲ್ಲಿ ಉದಯಿಸಿ ನಮ್ಮ ಧರ್ಮವನ್ನು, ನಮ್ಮ ಸಂಸ್ಕೃತಿಯನ್ನು ನಮ್ಮ ಇಲ್ಲಾ ನೀತಿಗಳನ್ನು ಉಳಿಸಿ ಭಕ್ತರಿಗೆ ಸನ್ಮಾರ್ಗವನ್ನು ತೋರಿಸಿದರು ಎಂದು ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಆಧ್ಯಾತ್ಮಿಕ ಪ್ರವಚನದ ೯ನೇ ದಿನದಂದು ಪ್ರವಚನಕರರಾದ ಬಳುಟಗಿಯ ಶಿವಕುಮಾರ ದೇವರು ಹೇಳಿದರು.
ಪೋಟೋ: ೦೧ಜಿಪಿಬಿ೨
ಪ್ರವಚನಕರರಾದ ಬಳುಟಗಿಯ ಶಿವಕುಮಾರದೇವರು.
“ನಾಡಿನ ಅನೇಕ ಮಹಾತ್ಮರು ನಮ್ಮ ಸಂಸ್ಕೃತಿ ಮತ್ತು ನೀತಿಗಳನ್ನು ಉಳಿಸಿ ಭಕ್ತರಿಗೆ ಸನ್ಮಾರ್ಗ ತೋರಿದ್ದಾರೆ”


