ನೇಸರಗಿ: ರಾಷ್ಟ್ರೀಯ ಅಹಿಂದ ಒಕ್ಕೂಟ ಬೆಂಗಳೂರು ಇದರ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಸಮೀಪದ ವನ್ನೂರ ಗ್ರಾಮದ ಮನೋಜ ಕೆಳಗೇರಿ ಇವರನ್ನು ಆಯ್ಕೆ ಮಾಡಲಾಗಿದೆ.
ಇತ್ತೀಚಿಗೆ ಬೆಂಗಳೂರು ರಾಷ್ಟ್ರೀಯ ಅಹಿಂದ ಒಕ್ಕೂಟದ ರಾಜ್ಯ ಕಾರ್ಯಕಾರಣಿ ಸಮಿತಿಯ ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಂದ ಆಯ್ಕೆ ಮಾಡಲಾಗಿದೆ.
     ಈ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ  ಮುತ್ತಣ್ಣ ಶಿವಳ್ಳಿ,ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ  ಪ್ರೊ. ಬೀರಲಿಂಗೇಶ್ವರ ಪೂಜಾರಿ,ಡಾ,ಬೆಳಗಾವಿ ಜಿಲ್ಲಾ ಅಧ್ಯಕ್ಷ   ಸಂಗಪ್ಪ  ಜಿ ಹಡಪದ,ರಾಜ್ಯ ಕಾರ್ಯಧ್ಯಕ್ಷರುಗಳಾದ ಗುರನಗೌಡ  ಎಸ್ ಪಾಟೀಲ, ಬಿ .ಶಿವಣ್ಣ ಮೈಸೂರು, ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

 
		 
		 
		
