ಬಳ್ಳಾರಿ, ಮಾ.23: ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಪಕ್ಷದಲ್ಲಿ ಶ್ರಮಿಸುತ್ತಾ ಬಂದಿರುವ ನೇಕಾರ ಸಮುದಾಯದ ಎಂ.ಎಸ್.ಮಂಜುಳ ಮತ್ತೆ ಬಳ್ಳಾರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯನ್ನಾಗಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷೆ ಸೌಮ್ಯಾರೆಡ್ಡಿ ನೇಮಕ ಮಾಡಿದ್ದಾರೆ.
ತಮಗೆ ನೀಡಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತಾ, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಮತ್ತು ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕೆಪಿಸಿಸಿ, ಹಾಗೂ ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಮತ್ತು ಸ್ಥಳೀಯ ನಾಯಕರ ಸಹಯೋಗದಲ್ಲಿ ಮಹಿಳೆಯರನ್ನು ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ದೇಶದ ಆಡಳಿತದ ಮುಖ್ಯವಾಹಿನಿಗೆ ತರುವ ಹಾಗೂ ಮಹಿಳಾ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸುವ ಮೂಲಕ ಪಕ್ಷದ ಬಲವರ್ಧನೆಗಾಗಿ ಕಾರ್ಯೋನ್ಮುಖರಾಗಬೇಕೆಂದು ಸೌಮ್ಯರೆಡ್ಡಿ ಸೂಚಿಸಿದ್ದಾರೆ.
ಅಡ್ಡಿ ಆತಂಕ:
ಒಂದು ಬಾರಿ ಅಧ್ಯಕ್ಷೆಯಾಗಿದ್ದ ಮಂಜುಳ ಅವರನ್ನು ಈ ಬಾರಿ ಬದಲು ಮಾಡಿ, ಮಾಜಿ ಮೇಯರ್ ರಾಜೇಶ್ವರಿ, ಪಾಲಿಕೆ ಸದಸ್ಯೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಹೊನ್ನಪ್ಪ ಮತ್ತು ಈ ಹಿಂದೆ ಅಧ್ಯಕ್ಷೆಯಾಗಿದ್ದ ಪದ್ಮಾ ಇವರಲ್ಲಿ ಒಬ್ಬರನ್ನು ಮಾಡಲು ಪ್ರಭಾವಿ ಮುಖಂಡರೊಬ್ಬರು ಭಾರಿ ಪ್ರಯತ್ನ ಮಾಡಿದ್ದರು. ಅದರಲ್ಲೂ ಕವಿತಾ ಹೊನ್ನಪ್ಪ ಅವರ ಹೆಸರು ಮುಂ ಚೂಣಿಯಲ್ಲಿತ್ತು.
ಆದರೆ ತಾನು ಪಕ್ಷದ ಬೆಳವಣಿಗೆ ಮಾಡಿರುವ ಕೆಲಸವನ್ನು ತಿಳಿಸಿ. ಛಲಬಿಡದೆ ತನ್ನ ಸ್ಥಾನವನ್ನು ಮತ್ತೊಮ್ಮೆ ಭದ್ರಪಡೊಸಿಕೊಂಡಿದ್ದಾರೆ ಮಂಜುಳಾ ಅವರು.
ನನಗನ ಮೇಲೆ ಅನೇಕ ಪಿತೂರಿಗಳು ನಡೆದವು. ಕೆಲವರು ನನ್ನು ವಿರುದ್ದ ಮಾಡಿದ ತಂತ್ರ ಫಲಿಸಲಿಲ್ಲ. ಪಕ್ಷದ ನಾಯಕರಿಗೆ ನನ್ನ ಪಕ್ಷ ನಿಷ್ಟೆ ಗೊತ್ತಿದೆ. ಅದಕ್ಕಾಗಿ ಮುಂದುವರೆಸಿದ್ದಾರೆ. ಪಕ್ಷವೇ ನನ್ನ ಉಸಿರು. ನಮಗೂ ಸರ್ಕಾರದಲ್ಲಿ ನಾಮ ನಿರ್ದೇಶನದ ಹುದ್ದೆ ನೀಡಬೇಕಿದೆ ಎಂದು ತಿಳಿಸಿದ್ದಾರೆ.
ಪಕ್ಷದ ಹಿರಿಯರಾದ ನಾಸೀರ್ ಹುಸೇನ್, ನಾಗೇಂದ್ರ, ಹುಮಾಯೂನ್ ಖಾನ್ ಮೊದಲಾದವರ ಸಹಕಾರವನ್ನು ಸ್ಮರಿಸಿದ್ದಾರೆ.


