ಹುಕ್ಕೇರಿ : ನಮ್ಮ ಸೈನಿಕರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವ ಕಾರ್ಗಿಲ್ ವಿಜಯದ ಸುವರ್ಣಾಕ್ಷರಗಳಿಂದ ಬರೆದಿಡುವ ಐತಿಹಾಸಿಕ ಕ್ಷಣ ಕ್ಯಾರಗುಡ್ಡದ ಅವುಜಿಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮಿಗಳು ಹೇಳಿದರು.
ಪಟ್ಟಣದ ಬಸವ ಸರ್ಕಲದಲ್ಲಿ ಶನಿವಾರ ಹಾಲಿ ಮತ್ತು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ಹುಕ್ಕೇರಿ ಹಾಗೂ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ (ರಿ) ಕರ್ನಾಟಕ ಇವರ ಸಹಯೋಗದಲ್ಲಿ ಕಾರ್ಗಿಲ್ ವಿಜಯದ ರಜತ ಮಹೋತ್ಸವ ಸಂಭ್ರಮ ಹಾಗೂ ಅಪರೇಷನ್ ಸಿಂಧೂರ ಯಶಸ್ವಿ ಸಮಾರಂಭದ ವೀರ ಯೋಧರಿಗೆ ಗೌರವ ಸಲ್ಲಿಸಿದ ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತನಾಡಿದರು. ಸ್ವಾತಂತ್ರ ಭಾರತದಲ್ಲಿ ಸೈನಿಕರ ತ್ಯಾಗ ಶೌರ್ಯ, ಸಾಮರ್ಥ್ಯ ಅಪ್ರತಿಮ ಹೋರಾಟ ಇಡಿ ಜಗತ್ತಿಗೆ ತೋರಿಸಿದ ನಮ್ಮ ವೀರ ಸೈನಿಕರ ಶಕ್ತಿ, ಬಲಿಷ್ಟ ಭಾರತ ಕಟ್ಟುವಲ್ಲಿ ಶ್ರಮ ಅನನ್ಯವೆಂದರು. ತಮ್ಮ ಸಿಂದೂರ ಮೂಲಕ ಸೈನಿಕರಿಗೆ ಸ್ಪೂರ್ತಿಯಾಗಿ ಶತ್ರುರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದು. ಅವಿಸ್ಮರಣಿಯ
ಅಧ್ಯಕ್ಷ ರಾಯಪ್ಪ ಬನ್ನಕ್ಕಗೋಳ ಮಾತನಾಡಿ ಕಾರ್ಗಿಲ್ ಯುದ್ದದಲ್ಲಿಯ ಸೈನಿಕರ ತ್ಯಾಗ ಸ್ಮರಣೆ ಹಾಗೂ ಭಾಗವಹಿಸಿದ ಯೋಧರಿಗೆ ಅಭಿನಂದನೆ ಸಲ್ಲಿಸುವದು ನಮ್ಮ ಕರ್ತವ್ಯವೆಂದರು.
ಮಾಜಿ ಸೈನಿಕರ ಸಂಘದ ಕ್ಷೇಮಾಭಿವೃಧ್ದಿ ಸಂಘದ ಅಧ್ಯಕ್ಷ ಮಹಾದೇವ ಬನ್ನಕ್ಕಗೋಳ, ನಮ್ಮ ದೇಶದ ಸೈನಿಕರ ಶಕ್ತಿ. ತ್ಯಾಗ ಬಲಿದಾನಗಳು ಯುವಕರಿಗೆ ಸ್ಪೂರ್ತಿಯಾಗಬೇಕು ಎಂದರು.
ಸಂಘದ ಕಾರ್ಯದರ್ಶೀ ರಮೇಶ ಕುಂದನ್ನವರ, ಶ್ರೀಪಾಲ ಕಮತೆ, ಯಾಶೀನ ನಧಾಪ, ಬಸವರಾಜ ಮಾನಗಾವಿ, ನಿರಂಜನ ಕುರಬೇಟ, ಶಶಿಕಾಂತ ಮಾನಸ, ಸುಧಾಕರ ಬೋಸಲೆ, ಕ್ಷೇತ್ರ ಸಮನ್ವಯಧಿಕಾರಿ ಎ.ಎಸ್ ಪದ್ಮನ್ನವರ, ದೈಹಿಕ ಶಿಕ್ಷಣಾಧಿಕಾರಿ ಎ.ಎಸ. ಕೋಟಿವಾಲೆ. ಎ.ಎಸ,ಐ ಸಿಎಲ್ ಘಸ್ತಿ, ಮಂಜುನಾಥ ಕಬ್ಬೂರ, ವಿವಿಧ ಕಾಲೀಜಿನ ಕಾಲೇಜಿನ ಸ್ಕೌಟ್ಸ ಎನ.ಸಿಸಿ. ಹಾಲಿ, ಮಾಜಿ ಸೈನಿಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.