ಹುಕ್ಕೇರಿ : ಇಂಚಗೇರಿ ಆಧ್ಯಾತ್ಮ ಸಂಪ್ರದಾಯದ ಕ್ಯಾರಗುಡ್ಡ್ ಅವಜೀಕರ ಧ್ಯಾನಯೋಗಾಶ್ರಮದಲ್ಲಿ ಆ. ೨೯ ಮತ್ತು ೩೦ ರಂದು ಎರಡು ದಿನಗಳ ಕಾಲ ಸಮರ್ಥ ಸದ್ಗುರು ಅವಜೀಕರ ಮಹಾರಾಜರು, ಸಮರ್ಥ ಸದ್ಗುರು ಜಗನ್ನಾಥ ಮಹಾರಾಜರ ಸ್ಮರಣಾರ್ಥ ಸಪ್ತಾಹ, ಮಠದ ಜಾತ್ರಾ ಮಹೋತ್ಸವ ಆಯೋಜಿಸಲಾಗಿದೆ ಎಂದು ಶ್ರೀಮಠದ ಉತ್ತರಾಧಿಕಾರಿ ಅಭಿನವ ಮಂಜುನಾಥ ಸ್ವಾಮೀಜಿ ಹೇಳಿದರು.
ಪಟ್ಟಣ ಹೊರವಲಯದ ಕ್ಯಾರಗುಡ್ಡ್ ಶ್ರೀಮಠದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಆಧ್ಯಾತ್ಮಿಕ, ಹಿಂದೂ ಧರ್ಮದ ರಕ್ಷಣೆ-ಪ್ರಚಾರಕ್ಕೆ ತನ್ನದೇಯಾದ ವಿಭಿನ್ನ ಮತ್ತು ವಿಶಿ? ಕಾಯಕದಲ್ಲಿ ಅವಜೀಕರ ಧ್ಯಾನಯೋಗಾಶ್ರಮ ತೊಡಗಿಸಿಕೊಂಡಿದೆ.
ಇಂಚಗೇರಿಯ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಸಮರ್ಥ ಮಲ್ಲೇಶ್ವರ ಮಹಾರಾಜರ ನೇತೃತ್ವದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕಂತಿಕ ಕಾರ್ಯಕ್ರಮಗಳು ಜರುಗಲಿವೆ.
. ಆ. ೨೯ ರಂದು ಬೆಳಗ್ಗೆ ೧೦ ಕ್ಕೆ ಧ್ವಜಾರೋಹಣ, ಸಂಜೆ ೫ಕ್ಕೆ ದಿಂಡಿ ಪಾದಯಾತ್ರೆ, ಸಂಜೆ ೬ಕ್ಕೆ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಸುಕ್ಷೇತ್ರ ಇಂಚಗೇರಿ ಮಠದ ರೇವಣಸಿದ್ದೇಶ್ವರ ಮಹಾರಾಜರ ದಾಸಬೋದ ಹಾಗೂ ವೀಣಾ ಪೂಜೆಯೊಂದಿಗೆ ಸಪ್ತಾಹ ಅರಂಭವಾಗಲಿದೆ. ರಾತ್ರಿ ೧೦ ಕ್ಕೆ ವಿವಿಧ ಗ್ರಾಮಗಳ ಭಜನಾ ಮಂಡಳಿಗಳಿಂದ ಜಾಗರಣೆ ನಡೆಯಲಿದೆ
ಆ. ೩೦ ರಂದು ಬೆಳಗ್ಗೆ ೫ಕ್ಕೆ ಕಾಕಡಾರತಿ, ೮ ಕ್ಕೆ ಅವಜೀಕರ ಮಹಾರಾಜರ ಗದ್ದುಗೆಗೆ ಅಲಂಕಾರ ಮತ್ತು ಪೂಜೆ, ೯ಕ್ಕೆ ಮುರಗೋಡ ದುರುದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಅವರು ಸದ್ಗುರು ಮಲ್ಲೇಶ್ವರ ಗೋಶಾಲೆ ಉದ್ಘಾಟಿಸುವರು. ಬೆಳಗ್ಗೆ ೧೦ ಕ್ಕೆ ಗೋಪುರದ ಮೇಲೆ ಸ್ವರ್ಣಲೇಪಿತ ಕಳಸಾರೋಹಣ ನೆರವೇರಲಿದೆ.
ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಘೋಡಗೇರಿ ಮಲ್ಲಯ್ಯ ಸ್ವಾಮೀಜಿ, ನಂದಗಾಂವ ಮಹಾದೇವ ಮಹಾರಾಜರು, ಯರನಾಳ ಬ್ರಹ್ಮಾನಂದ ಸ್ವಾಮೀಜಿ, ಬೆಳವಿ ಮೃತ್ಯಂಜಯ ಮಹಾಸ್ವಾಮಿಗಳು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ನಿಖಿಲ್ ಕತ್ತಿ, ಮುಖಂಡ ಮಹಾವೀರ ನಿಲಜಗಿ, ತಹಸೀಲ್ದಾರ ಬಲರಾಮ ಕಟ್ಟಿಮನಿ ಸೇರಿದಂತೆ ಮತ್ತಿತರರು ಭಾಗವಹಿಸುವರು
ಆ. ೩೦ ರಂದು ಉತ್ತರಾಧಿsಕಾರಿ ಅಭಿನವ ಮಂಜುನಾಥ ಮಹಾಸ್ವಾಮಿಗಳ ಕಲ್ಯಾಣ ಮಹೋತ್ಸವ ಮಹೋತ್ಸವ ಜರುಗಲಿದ್ದು ಮಧ್ಯಾಹ್ನ ೧೨.೪೫ಕ್ಕೆ ನಡೆಯುವ ಶುಭ ಮುಹೂರ್ತದಲ್ಲಿ ಕಾರಿಮನಿಯ ಶ್ರೀದೇವಿ ಮಲ್ಲಯ್ಯ ಹಿರೇಮಠ ಅವರ ಸುಪುತ್ರಿ ಮಹಾನಂದಾ (ಅನ್ನಪೂರ್ಣಾ) ಅವರನ್ನು ವಿವಾಹವಾಗುವ ಮೂಲಕ ಅಭಿನವ ಮಂಜುನಾಥ ಸ್ವಾಮೀಜಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
ಈ ಸುದ್ಧಿಗೋಷ್ಠಿಯಲ್ಲಿ ಮಲ್ಲೇಶ್ವರ ಸ್ವಾಮೀಜಿ, ಶಾಂತಿನಾಥ ಚೌಗಲಾ, ಶಿವಾನಂದ ಪಾಟೀಲ, ಪ್ರಭು ಹಳಿಗೌಡರ, ಶಿವಾನಂದ ಪರೀಟ, ಕೆಂಪಣ್ಣಾ ಬೇವಿನಗೀಡದ, ಶಿವಪ್ಪ ಮಗದುಮ್ಮ, ರಾಮಣ್ಣಾ ನಾಯಿಕ, ನೇಮಿನಾಥ ಸೊಲ್ಲಾಪುರೆ ಮತ್ತಿತರರು ಉಪಸ್ಥಿತರಿದ್ದರು.
ಹುಕ್ಕೇರಿಯಲ್ಲಿ ಗೋಶಾಲೆ ಉದ್ಘಾಟನೆ, ಮಂಜುನಾಥ ಸ್ವಾಮೀಜಿ ಕಲ್ಯಾಣ ಮಹೋತ್ಸವ
