ಪಾರಂಪರಿಕವಾಗಿ ಪರಿಸರ ಸ್ನೇಹಿ ಗಣೇಶನ ಮೂರ್ತಿ ತಯಾರಕರ ಮಂಜುನಾಥ ಹಲಗಲಿ

Ravi Talawar
ಪಾರಂಪರಿಕವಾಗಿ ಪರಿಸರ ಸ್ನೇಹಿ  ಗಣೇಶನ ಮೂರ್ತಿ  ತಯಾರಕರ ಮಂಜುನಾಥ  ಹಲಗಲಿ
WhatsApp Group Join Now
Telegram Group Join Now

ವರದಿ:ಮುತ್ತು ಗೋಸಲ

ಬಾದಾಮಿ:ಗಣೇಶ ಚತುರ್ಥಿ ಎಂದ ಮೇಲೆ ನೆನಪಾಗುವುದು ಗಣೇಶನ ಮೂರ್ತಿಗಳು ಸುಂದರ ಹಾಗೂ ಅಲಂ ಕಾರಿತವಾಗಿರತಕ್ಕಂತಹ ಗಣೇಶನ ಮೂರ್ತಿ ತಯಾರಿಸುವುದು ಸುಲಭದ ಕೆಲಸವಲ್ಲ ಅದರಲ್ಲಿಯೂ ವಂಶ ಪಾರಂಪರಿಕವಾಗಿ ಗಣೇಶ ಮೂರ್ತಿಯನ್ನು ತಯಾರಿಸುವುದು ಒಂದು ಸಾಧನೆಯೋ ಸರಿ ಇಂತಹ ಸಾಧನೆಯನ್ನು ಮಾಡುವಲ್ಲಿ ಹಲಗಲಿ ಮನೆತನದವರು ಕಳೆದ ಹಲವಾರು ವ?ಗಳಿಂದ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ತಯಾರಿಸುವುದರ ಮೂಲಕ ಕರ್ನಾಟಕದ ಎಲ್ಲೆಡೆ ಹೆಸರುವಾಸಿಯಾಗಿದ್ದಾರೆ. ಅವರ ಅಜ್ಜನವರಾದ ಸಂಗಪ್ಪ ಗುರುಸಂಗಪ್ಪ ಹಲಗಲಿ ಅವರ ಕಾಲದಿಂದ ಹಿಡಿದು ಅವರ
ತಂದೆಯವರಾದ ಗುರು ಸಂಗಪ್ಪ ಹಲಗಲಿ ಗಣೇಶನ ಮೂರ್ತಿಯನ್ನು ತಯಾರಿಕೆ ಮಾಡುತ್ತಾ ಬಂದಿದ್ದು ಅ ವರ ಮಗನಾದ ಮಂಜುನಾಥ. ಹಡಗಲಿ, ಅವರು ಸಹ ಗಣೇಶನ ಮೂರ್ತಿಯನ್ನು ತಯಾರಿಸುತ್ತಾ ಬಂದಿದ್ದಾರೆ.

ಇವರು ಬಾಗಲಕೋಟೆ. ಜಿಲ್ಲೆಯ ಬಾದಾಮಿ ತಾಲೂಕಿನ ಕೊಂಕಣಕೊಪ್ಪ ಗ್ರಾಮದಲ್ಲಿ ಗಣೇಶನ ಮೂರ್ತಿಗಳನ್ನು ತಯಾರಿಸಿ ಅತಿ ಕಡಿಮೆ ಬೆಲೆಯಲ್ಲಿ ಗಣೇಶನ ಮೂರ್ತಿಗಳನ್ನು ಮಾರಾಟ ಮಾಡುತ್ತಾರೆ ಇವರ ಬಳಿಗೆ ವಿವಿಧ ಜಿಲ್ಲೆಗಳಿಂದ ಜನರು ಬಂದು ಗಣೇಶನ ಮೂರ್ತಿಗಳನ್ನು ಪ್ರತಿ ವ?ವೂ ತೆಗೆದುಕೊಂಡು ಹೋಗುತ್ತಾರೆ..

ಇವರ ಮೂರ್ತಿಗಳಿಗೆ ಎಲ್ಲಿಲ್ಲದ ಬೇಡಿಕೆ : ಗಣೇಶನ  ಮೂರ್ತಿಗಳನ್ನು ಬೆಂಗಳೂರು, ಮಂಗಳೂರು, ಕಾರವಾರ, ತುಮಕೂರ, ದಾವಣಗೆರೆ, ಗದಗ, ಹಾಸನ, ಮಂಡ್ಯ, ಸೇರಿದಂತೆ ಕರ್ನಾಟಕದ ಹಲವಾರು ಜಿಲ್ಲೆ ತಾಲೂಕು ಹಾಗೂ ಹಳ್ಳಿಗಳಿಂದ ಬಂದು ಪ್ರತಿವ?ವೂ ಗಣೇಶನ ಮೂರ್ತಿಗಳನ್ನು ತೆಗೆದುಕೊಂಡು
ಹೋಗುತ್ತಾರೆ.

ಇವರು ತಯಾರಿಸುವ ಗಣೇಶನ ಸುಂದರ ಮೂರ್ತಿಗಳಲ್ಲಿ  ವೈವಿಧ್ಯಮಯವಾಗಿರುವಂತಹ ಆಕ?ಣೀಯವಾಗಿರುವ  ಬಣ್ಣಗಳಿಂದ ಹಾಗೂ ಬಣ್ಣಗಳ ರಹಿತವಾದಂತಹ ಗಣೇಶನ ಮೂರ್ತಿಗಳನ್ನು ಪ್ರತಿ ವ?ವೂ ಭಿನ್ನ-ಭಿನ್ನವಾಗಿ  ಮೂರ್ತಿಯನ್ನು ತಯಾರಿಸುವುದರೊಂದಿಗೆ ಜನರ ಮನಸ್ಸನ್ನು ಸೆಳೆಯುವ ಹಾಗೂ ಪರಿಸರ ಸ್ನೇಹಿ ಗಣೇಶನ ಪ್ರತಿ?ಪನೆಯ ಕುರಿತು ಉತ್ಸಾಹ ಬರುವಂತೆ ಮಾಡುತ್ತಾರೆ.

ವಿವಿಧ ರೀತಿಯ ಗಣಪತಿ ತಯಾರಿಕೆ : ತಲೆಮಾರಿನಿಂದ ಗಣೇಶನ ಮೂರ್ತಿ ತಯಾರಿಕೆಯಲ್ಲಿ ತೊಡಗಿದ ಹಲಗಲಿ ಮನೆತನದವರು ವ?ವಿಡಿ ಗಣೇಶ ಮೂರ್ತಿ ತಯಾರಿಕೆಗೆ ಸಜುಗೊಂಡು, ಜಿಗಿ ಜೇಡಿ ಮಣ್ಣಿನಿಂದ ಗಣೇಶನ ಮೂರ್ತಿ ತಯಾರಿಸುತ್ತಾರೆ. ಸಿಂಹಾಸನ ಗಣಪತಿ, ಬಲಮುರಿ ಗಣಪತಿ, ನಾಗರಹಾವು, ಇಲಿ, ತ್ರಿಶೂಲ, ಕಮಲ, ಕೈ ಹಾಗೂ ಡಮರುಗ ಮೇಲೆ ಕುಳಿತ ಗಣಪತಿ, ನಿಂತ ಗಣಪತಿ, ಗಣೇಶ ಮೂರ್ತಿ ಹೀಗೆ ವಿಶಿ? ರೀತಿಯ ಗಣಪತಿಗಳು ಸಿದ್ಧವಾಡುತ್ತಾರೆ.

ಗಣೇಶನ ಮೂರ್ತಿಗಳನ್ನು ವ?ವಿಡಿ ನಾವು ತಯಾರಿಸುತ್ತೇವೆ ಅದರಲ್ಲಿ ಬಣ್ಣಗಳಿಂದ ಹಾಗೂ ಬಣ್ಣಗಳ ರಹಿತವಾಗಿರುವಂತಹ ಗಣೇಶನ ಮೂರ್ತಿಗಳನ್ನು
ತಯಾರಿಸುತ್ತೇವೆ ಆದರೆ ಆಧುನಿಕ ಯುಗದಲ್ಲಿ ಯುವಕರು ಹಗುರವಾಗುತ್ತವೆ ಎಂದು ಪಿಓಪಿ ಗಣೇಶನ ಮೂರ್ತಿಗಳನ್ನು ಪ್ರತಿ?ಪನೆ ಮಾಡಲು ಮುಂದಾಗುತ್ತಾರೆ..

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಕಾಟಾಚಾರಕ್ಕೆ ಎಂಬಂತೆ ಕೆಲವೊಂದು ಜಾಗದಲ್ಲಿ ಪರಿಶೀಲನೆ ನಡೆಸುತ್ತಾರೆ.. ಸರ್ಕಾರ ಗ್ರಾಮೀಣ
ಪ್ರದೇಶಗಳಲ್ಲಿ ಪಂಚಾಯತ್ ಅಧಿಕಾರಿಗಳು ಮುಖಾಂತರ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.. ಪಿಓಪ ವಿಗ್ರಹಗಳು ಕೆರೆ ಬಾವಿಗಳಲ್ಲಿ ವಿಸರ್ಜನೆ ಮಾಡುವುದರಿಂದ ಅವುಗಳು ಕರಗದೇ ಇರುವುದರಿಂದ ಪರಿಸರ ನಾಶಕ್ಕೆ ಕಾರಣವಾಗುತ್ತಿದೆ, ಮಣ್ಣಿನ ಗಣಪನ ಪೂಜಿಸುವುದು ಶ್ರೇ?ವಾದದ್ದು ಆದ್ದರಿಂದ
ಇಂದಿನ ಯುವಕರು ಹಾಗೂ ಹಿರಿಯರು ಮಣ್ಣಿನ ಗಣಪನ ಪ್ರತಿ?ಪನೆ ಹಾಗೂ ಪೂಜೆಗೆ ಒತ್ತು ಕೊಡಬೇಕೆಂದು ನನ್ನ ಅಭಿಪ್ರಾಯವಾಗಿದೆ

WhatsApp Group Join Now
Telegram Group Join Now
Share This Article