ಬಾವಿಯಲ್ಲಿ ಈಜಲು ಹೋಗಿ ವ್ಯಕ್ತಿ ಸಾವು

Ravi Talawar
ಬಾವಿಯಲ್ಲಿ ಈಜಲು ಹೋಗಿ ವ್ಯಕ್ತಿ ಸಾವು
WhatsApp Group Join Now
Telegram Group Join Now

ಬೈಲಹೊಂಗಲ: ಬಾವಿಗೆ ಈಜಲು ಹೋಗಿ ವ್ಯಕ್ತಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೊಹರೆ ಗ್ರಾಮದಲ್ಲಿ ನಡೆದಿದೆ.

ಬೋರಪ್ಪ ಯಲ್ಲಪ್ಪ ತಳವಾರ (62) ಬಾವಿಯಲ್ಲಿ ಈಜಲು ಹೋಗಿ ಮೃತಪಟ್ಟ ವ್ಯಕ್ತಿ.

ದಿ.೬ ರಂದು ಬೋರಪ್ಪ ಯಲ್ಲಪ್ಪ ತಳವಾರ ಇವರು ಮೊಹರೆ ಗ್ರಾಮದ ಯಶವಂತಗೌಡ ಪಾಟೀಲ ಎಂಬುವರ ಬಾವಿಯಲ್ಲಿ ಈಜುಲು ಹೋಗಿದ್ದಾನೆ ಸುಮಾರು 30-40 ಅಡಿ ಆಳ ಇದ್ದುದ್ದರಿಂದ ನೀರಿನಲ್ಲಿ ಮುಳುಗಿದ್ದಾರೆನ್ನಲಾಗಿದೆ.

ಅವರ ಬಗ್ಗೆ ಮನೆಯವರು ಹುಡುಕಾಟ ನಡೆಸಿದಾಗ ಬಾವಿಯ ಬಳಿ ಅವರ ಅರಿವೆಗಳು ದೊರಕಿದ್ದರಿಂದ ಬಾವಿಯಲ್ಲಿ ಬಿದ್ದಿದ್ದಾರೆಂದು ಖಾತ್ರಿ ಮಾಡಿಕೊಂಡಿದ್ದಾರೆ.ನಂತರ ಈ ವಿಷಯವನ್ನು ಪೋಲಿಸರಿಗೆ ವಿಷಯವನ್ನು ತಿಳಿಸಿದ್ದಾರೆ.

 

ಪೋಲಿಸರಿಗೆ ಶುಕ್ರವಾರ ಮಾಹಿತಿ ನೀಡಿದ್ದು, ಪೊಲೀಸ್ ಸಿಬ್ಬಂದಿ ಅಗ್ನಿಶಾಮಕ ದಳದ ಜೊತೆ ಬಾವಿಯ ಬಳಿ ಹೋಗಿ ಶವಕ್ಕಾಗಿ ಶೋಧ ಕಾರ್ಯವನ್ನು ಪ್ರಾರಂಭಿಸಿದ್ದಾಗ ಶುಕ್ರವಾರ ಕತ್ತಲಾಗಿದ್ದರಿಂದ ಹುಡುಕಾಟ ಮಾಡಲು ಸಾಧ್ಯವಾಗಿರಲಿಲ್ಲ. ರವಿವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಶವ ಪತ್ತೆಯಾಗಿದೆ.

ವೈದ್ಯರು ಮರಣೋತ್ತರ ಪರೀಕ್ಷೆಯ ನಡೆಸಿದ ನಂತರ ಶವವನ್ನು ಸಂಭಧಿಕರಿಗೆ ನೀಡಲಾಯಿತು. ಈ ಘಟನೆಯ ಸಂಬಂಧ ನೇಸರಗಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ

 

ಈ ಸಂಧರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿ ಎಸ್.ಎಸ್.ವಾಲಿಶೆಟ್ಟಿ, ರಾಮಣ್ಣ ಬಂಡಿವಡ್ಡರ, ಆನಂದ ಮಾದರ, ಬಾಳಪ್ಪ ತಿಳಗಂಜಿ, ಅರುಣ ಅಂಗಡಿ, ಶಿವಪ್ಪ ಅಂಬಗಿ, ಮಲ್ಲಿಕಾರ್ಜುನ ದಮ್ಮಸೂರ, ನೇಸರಗಿ ಪೋಲಿಸ್ ಠಾಣೆಯ ಪಿಎಸ್ಐ ವಾಯ್.ಎಲ್.ಶೀಗಿಹಳ್ಳಿ,ಪೋಲಿಸ್ ಸಿಬ್ಬಂದಿಗಳಾದ ವಿನಾಯಕ ಯರಗಟ್ಡಿಮಠ, ಎಸ್.ಆರ್. ಮುರಗೋಡ, ಬಿ‌.ಎಮ್.ಮಠದ, ಗ್ರಾಮಸ್ಥರಾದ ಅಬ್ಬಾಸ ಅಲಿ ಪೀರಜಾದೆ, ದೊಡ್ಡಪ್ಪ ಬೆಳವಡಿ, ಬಸಪ್ಪ ಮಾರಿಹಾಳ, ಬೋರಪ್ಪ ತಳವಾರ, ದೊಡ್ಡಪ್ಪ ತಳವಾರ, ಅಡಿವೇಪ್ಪ ಸುಲಧಾಳ, ಗ್ರಾಮಸ್ಥರು ಇದ್ದರು.

WhatsApp Group Join Now
Telegram Group Join Now
Share This Article