ಹಸಿರು ಕ್ರಾಂತಿ ವರದಿ,ಜಮಖಂಡಿ: ಭಕ್ತರ ಭವರೋಗ ಕಳೆದು ಸೂರ್ಯ-ಚಂದ್ರರು ಇರುವವರೆಗೆ ಜ್ಞಾನದ ಮುತ್ತಾಗಿ ಹೋಗಿರುವ ವಿಜಯಪುರ ಜ್ಞಾನಯೋಗಾಶ್ರಮದ ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳು ಭಗವಂತನ ಅವತಾರಿಗಳಾಗಿದ್ದರು ಎಂದು ಹಂಚಿನಾಳ ಭಕ್ತಿಯೋಗಾಶ್ರಮದ ಮಹೇಶಾನಂದ ಮಹಾಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಹುಲ್ಯಾಳ ಗುರುದೇವಾಶ್ರಮದ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಪ್ರತಿ ತಿಂಗಳು 4ನೇ ಭಾನುವಾರ ಹಮ್ಮಿಕೊಳ್ಳುವ ಮಾಸಿಕ ಕಾರ್ಯಕ್ರಮ ಶ್ರೀಗುರುದೇವ ಸತ್ಸಂಗದ ಅಂಗವಾಗಿ ಅ.26 ರಂದು ನಡೆದ ವೇದಾಂತಕೇಸರಿ ಮಲಿಕಾರ್ಜುನ ಶಿವಯೋಗಿಗಳು ಹಾಗೂ ಜ್ಞಾನಯೋಗಿ ಸಿದ್ಧೇಶ್ವರ ಮಹಾಸ್ವಾಮಿಗಳ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಅವರು ಮಲ್ಲಿಕಾರ್ಜುನ ಶಿವಯೋಗಿಗಳ ಜೀವನ ಸಂದೇಶ ಕುರಿತು ಆಶೀರ್ವಚನ ನೀಡಿದರು.
ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳು ಆರುವ ದೀಪ ಹಚ್ಚಲಿಲ್ಲ. ಆರದ ಜ್ಞಾನದೀಪ ಹಚ್ಚಿದರು. ಕೆಳಗೆ ಬಿದ್ದವರನ್ನು ಎತ್ತಿಹಿಡಿದು ತಾಯಿ, ಗುರುವಾಗಿದ್ದರು. ಭಕ್ತರಿಗೆ ಸಂಸ್ಕಾರ ನೀಡಿ ಜ್ಞಾನ ಹಂಚಿ ಮನೆ-ಮನಕ್ಕೆ ಜ್ಞಾನದ ದೀಪ ಹಚ್ಚುವ ಕಾಯಕ ಮಾಡಿದ ಯುಗಪುರುಷ ಎನಿಸಿದ್ದಾರೆ ಎಂದರು.
ಜಮಖಂಡಿಯ ಬಸವಜ್ಯೋತಿ ಶಿಕ್ಷಣ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಮಾತನಾಡಿ, ಜ್ಞಾನಯೋಗಿ ಸಿದ್ಧೇಶÀ್ವರ ಮಹಾಸ್ವಾಮಿಗಳು ಉಪಮೆಗೆ ನಿಲುಕದ ಉಪಮಾತೀತರು, ಜೇಬಿಲ್ಲದಂಗಿಯ ವೈರಾಗಿ, ಅರಿವಿನ ಜೋಳಿಗೆ ಹಿಡಿದ ಜಂಗಮಯೋಗಿ, ಸರಳತೆಯ ಸಂತ, ದೈವಿಕತೆಯ ಚರಮೂರ್ತಿ ಆಗಿದ್ದರು ಎಂದರು.
ಸಂಗ್ರಹ ಬುದ್ದಿಯನ್ನು ಅಳಿದು, ಸಂಬAಧಗಳ ವ್ಯಾಮೋಹ ಕಳೆದುಕೊಂಡು, ಅಧಿಕಾರ-ಅಂತಸ್ತಿನ ಬಣ್ಣ ಕಳಚಿಕೊಂಡು ಸದಾ ಪರಮಸುಖಿಯಾಗಿದ್ದರು. ಯಾವ ದೋಷಗಳಿಗೆ ಅಂಟಿಕೊಳ್ಳದ ನಿಜೈಕ್ಯರಾಗಿದ್ದರು. ಜ್ಞಾನದ ಅಗ್ನಿಯ ಸ್ಪರ್ಶದಿಂದ ಯಾವ ಅವಗುಣಗಳು ಅವರಲ್ಲಿರಲಿಲ್ಲ. ದೇಹವನ್ನು ದಂಡಿಸದೆ ಒಳಗಿನ ಪರಮಾತ್ಮನ ಅನುಭವಿಸುವ ಬೆಡಗನ್ನು ಅರಿತಿದ್ದರು ಎಂದರು.
ಮೈಗೂರಿನ ಶಿವಾನಂದ ಮಠದ ಗುರುಪ್ರಸಾದ ಮಹಾಸ್ವಾಮಿಗಳು, ಸಿದ್ದಾಪುರದ ಅಡವಿಸಿದ್ಧೇಶ್ವರ ಮಠದ ಮಾತೋಶ್ರೀ ಮಹಾದೇವಿತಾಯಿ ಸಾನ್ನಿಧ್ಯ ವಹಿಸಿದ್ದರು. ಮಲ್ಲಿಕಾರ್ಜುನ ಶಿವಯೋಗಿಗಳಿಂದ ಲಿಂಗದೀಕ್ಷೆ ಪಡೆದ ದಾಂಡೇಲಿಯ ವಲಯ ಅರಣ್ಯಾಧಿಕಾರಿ ಅಶೋಕ ಪಾಟೀಲ, ಬೆಳಗಾವಿಯ ಶ್ರೀಮಲ್ಲಿಕಾರ್ಜುನ ವಿದ್ಯಾಪೀಠದ ಅಧ್ಯಕ್ಷ ಜಿ.ಎಂ. ಪಾಟೀಲ, ಹುನ್ನೂರಿನ ಚಂದ್ರಶೇಖರ ಸಾವಳಗಿ, ಲಕ್ಷೆö್ಮÃಶ್ವರದ ಚಿದಾನಂದ ಪಾಟೀಲ, ವಿಜಯಲಕ್ಷಿö್ಮÃ ಪಾಟೀಲ, ಜಮಖಂಡಿಯ ವಿಮಲಾ ಬೊಮ್ಮನಹಳ್ಳಿ ಅವರನ್ನು ಸನ್ಮಾನಿಸಲಾಯಿತು.
ಶ್ರೀಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸುಗೌಡ ಪಾಟೀಲ, ಶಿವಾನಂದ ಬಾಡನವರ, ಸಿದ್ದು ಉಪ್ಪಲದಿನ್ನಿ ಸಂಗೀತ ಸೇವೆ ಸಲ್ಲಿಸಿದರು. ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮೇಶ ತೆಲಸಂಗ ನಿರೂಪಿಸಿದರು. ಶ್ರೀಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ಶರಣು ಸಮರ್ಪಿಸಿದರು.


