ನೇಸರಗಿ: ಶ್ರೀ ವರದಶ್ರೀ ಫೌಂಡೇಶನ್ ಮಾನವನ ಶರೀರದಲ್ಲಿ ಉಂಟಾಗುವ ನೂನ್ಯತೆಗಳನ್ನು ಸರಿ ಮಾಡಲು ಪ್ರಾಮಾಣಿಕವಾಗಿ ಕೆಲಸ ಮಾಡುತಿದ್ದು ಅದಕ್ಕಾಗಿ ಈ ಪ್ರಮಾಣದಲ್ಲಿ ಜನರು ನಮ್ಮ ಔಷದಿ ಪಡೆಯಲು ಬರುತಿದ್ದು,ಕಣ್ಣು ಮತ್ತು ಶರೀರದ ಆದ್ಯತೆಗಳಿಗೆ ತಕ್ಕಂತೆ ಬರುವ ಜನರಿಗೆ ಸಿದ್ಧ ಕಣ್ಣಿನ ಹನಿ ರಸ ಹಾಗೂ ಅನೇಕ ಅನೇಕ ಕನ್ನೇರಿ ಮಠದ ಔಷದಿಗಳು ನೀಡಿ ಜನರ ಅರೋಗ್ಯ ಸುಧಾರಣೆಗೆ ಪ್ರಾಮಾಣಿಕ ಕೆಲಸ ಮಾಡಲಾಗುವದು ಎಂದು ವರದಶ್ರೀ ಫೌಂಡೇಶನ್ ಸಂಸ್ಥಾಪಕರಾದ ಮಲ್ಲಿಕಾರ್ಜುನ ರೆಡ್ಡೇರ ಹೇಳಿದರು.
ಅವರು ಗ್ರಾಮದ ಶ್ರೀ ಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ ಲೀಲಾಮಠದಲ್ಲಿ ಆಯೋಜಿಸಲಾದ್ದ ಸಿದ್ಧ ಕಣ್ಣಿನ ಹನಿ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಯರಗೋಪ್ಪ ಗ್ರಾಮದ ಶ್ರೀ ಶಿವಪ್ಪ ಅಜ್ಜನವರು ಮಾತನಾಡಿ ಕಣ್ಣು ದೇಹದ ಬಹುಮುಖ್ಯ ಅಂಗ ಆ ಅಂಗಕ್ಕೆ ತೊಂದರೆ ಆದರೆ ನಮಗೆ ಜೀವನ ನಡೆಸಲು ತೊಂದರೆ ಆಗುತ್ತದೆ. ಮೊಬೈಲ್, ಕಂಪ್ಯೂಟರ್ ಬಳಕೆಯಿಂದ ಕಣ್ಣುಗಳ ದ್ರಿಷ್ಟಿ ಹೀನ ಆಗುತ್ತಿದ್ದು ಅದಕ್ಕಾಗಿ ನಮ್ಮ ನೇಸರಗಿ ಅಜ್ಜನ ಮಠಕ್ಕೆ ವರದಶ್ರೀ ಫೌಂಡೇಶನ್ ಸಿದ್ಧ ಹನಿ ರಸ ನೀಡಿ ಅನೇಕರ ಕಣ್ಣುಗಳು ಸ್ಪಷ್ಟವಾಗಿ ಕಾಣುತಿದ್ದು ಅವರ ಸೇವೆ ನಿರಂತರವಾಗಿ ಇರಲಿ ಎಂದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಮಲ್ಲಿಕಾರ್ಜುನ ಮದನಬಾವಿ,ಅಡಿವಪ್ಪ ಮಾಳಣ್ಣವರ, ಮಲ್ಲಿಕಾರ್ಜುನ ಕಲ್ಲೋಳಿ, ಈರಪ್ಪ ಕೌಜಲಗಿ, ಅಶೋಕ ಅಗಸಿಮನಿ, ರಾಚಣ್ಣವರ ಅಜ್ಜ, ಯಲ್ಲಪ್ಪ ರೊಟ್ಟಿ, ಅಣ್ಣಪ್ಪ ಮಾಳಣ್ಣವರ, ವೀರೂಪಾಕ್ಷ ಮಾಳಣ್ಣವರ, ವರದಶ್ರೀ ಸ್ವಯಂ ಸೇವಕರಾದ ವಿಶ್ವನಾಥ ರೆಡ್ಡಿ, ಅಭಿಷೇಕ ಚವಾನ, ಚಿರಂಜೀವಿ ಚಿತ್ರೆ, ಅಭಿಷೇಕ ಪಾಟೀಲ, ಈರಣ್ಣ ಅಂಗಡಿ ಸೇರಿದಂತೆ ರಾಜ್ಯದ ಅನೇಕ ಕಡೆಗಳಿಂದ ಬಂದ ಜನ, ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.