ಊಹಾಪೋಹದ ವದಂತಿಗಳಿಗೆ ಮಹತ್ವ ನೀಡಿ ವರದಿಗಾರಿಕೆ ಮಾಡಬೇಢಿ: ಮಲ್ಲಿಕಾರ್ಜುನ್‌ ಖರ್ಗೆ ಮನವಿ

Ravi Talawar
ಊಹಾಪೋಹದ ವದಂತಿಗಳಿಗೆ ಮಹತ್ವ ನೀಡಿ ವರದಿಗಾರಿಕೆ ಮಾಡಬೇಢಿ: ಮಲ್ಲಿಕಾರ್ಜುನ್‌ ಖರ್ಗೆ ಮನವಿ
WhatsApp Group Join Now
Telegram Group Join Now

ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿ ಊಹಾಪೋಹದ ವದಂತಿಗಳಿಗೆ ಮಹತ್ವ ನೀಡಿ ವರದಿಗಾರಿಕೆ ಮಾಡದಿರುವಂತೆ ಮನವಿ ಮಾಡಿದರು. ನಿನ್ನೆ ದೆಹಲಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಖರ್ಗೆ ಅವರೊಂದಿಗೆ ಗಂಟೆಗಟ್ಟಲೆ ಮಾತಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಿಂದ ಅನೇಕ ಸಚಿವರು ಬಂದು ಭೇಟಿಯಾಗುತ್ತಾರೆ, ಸತೀಶ್ ಬರುತ್ತಾರೆ, ಪರಮೇಶ್ವರ್ ಬರ್ತಾರೆ, ಶಿವಕುಮಾರ್ ಬರ್ತಾರೆ, ಸಿದ್ದರಾಮಯ್ಯನೂ ಬರುತ್ತಾರೆ, ಕರ್ನಾಟಕದವರು ಎಂಬ ಕಾರಣಕ್ಕೆ ಅವರೊಂದಿಗೆ ಹೆಚ್ಚು ಸಮಯ ಮಾತಾಡುತ್ತೇನೆ, ಅದನ್ನೇ ಮುಂದಿಟ್ಟುಕೊಂಡು ಏನೆಲ್ಲ ಬರೆಯಬೇಡಿ ಎಂದು ಹೇಳಿದರು.

WhatsApp Group Join Now
Telegram Group Join Now
Share This Article