ರೈತರ ಅಭಿವೃದ್ಧಿಗೆ ಮಲ್ಲಾಪೂರ ಪಿಕೆಪಿಎಸ್ ಸಹಕಾರಿ: ಮುತ್ತಣ್ಣ ಹತ್ತರವಾಟ 

Ravi Talawar
ರೈತರ ಅಭಿವೃದ್ಧಿಗೆ ಮಲ್ಲಾಪೂರ ಪಿಕೆಪಿಎಸ್ ಸಹಕಾರಿ: ಮುತ್ತಣ್ಣ ಹತ್ತರವಾಟ 
WhatsApp Group Join Now
Telegram Group Join Now
ಘಟಪ್ರಭಾ: ಕೆಲವು ವರ್ಷಗಳ  ಹಿಂದೆ ನಮ್ಮ ಪ್ರಾಥಮಿಕ ಕೃಷಿ ಸಹಕಾರಿ ಪತ್ತಿನ ಸಂಘ ದಿ. ಭೀಮಪ್ಪ ಹತ್ತರವಾಟ ಅವರ ಆಡಳಿತ ವೈಖರಿ  ಹಾಗೂ ಆಡಳಿತ ಮಂಡಳಿ ಸಹಕಾರ ಸಿಬ್ಬಂದಿಯ ಉನ್ನತ ಮಟ್ಟದ ಸೇವೆಯಿಂದ  ರೈತರ ವಡನಾಡಿ ಆಗಿ ನಮ್ಮ ಸಂಘ ಬೆಳೆದು ಬಂದಿದು, ಮುಂದೆಯೂ ರೈತರ ಸೇವೆಗೆ ನಮ್ಮ ಸಹಕಾರಿ ಸಂಘ ಸದಾ ಕಾರ್ಯನಿರತವಾಗಿ ಇರತ್ತೆ ಎಂದು  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಮಲ್ಲಾಪೂರ ಪಿ ಜಿ  ಇದರ ಅಧ್ಯಕ್ಷರಾದ ಮುತ್ತಣ್ಣ ಹತ್ತರವಾಟ ಹೇಳಿದರು.
   ಅವರು ಶನಿವಾರದಂದು  ಸಂಘದ 2024-25 ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಉದ್ದೇಸಿಸಿ ಮಾತನಾಡಿದರು.    ಕೆ ಆರ್  ಎಚ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಾಮಣ್ಣ ಹುಕ್ಕೇರಿ ಮಾತನಾಡಿ  ಇಂದು ನಮ್ಮ ರೈತರಿಗೆ ಸಹಕಾರಿ ಎಲ್ಲ ಸೇವೆಗಳನ್ನು ನೀಡುತ್ತಿದ್ದು ಅದರ ಸದುಪಯೋಗ ಪಡೆಯಬೇಕೆಂದರು.
    ಸಭೆಯಲ್ಲಿ ಮಲ್ಲಾಪೂರ ಅರ್ಬನ್ ಬ್ಯಾಂಕ ಅಧ್ಯಕ್ಷ ರಮೇಶ ತುಕ್ಕಾನಟ್ಟಿ ಮಾತನಾಡಿ ಇಂದು ಈ ಮಟ್ಟಕ್ಕೆ ಸಹಕಾರಿ ಸಂಘ ಬೆಳೆದಿದ್ದು ನಮ್ಮ ಹೆಮ್ಮೆ ಎಂದರು. ಸಂಘದ  ಉಪಾಧ್ಯಕ್ಷ ಮಲ್ಲಪ್ಪ ಕಮತ, ಸದಸ್ಯ ಶಿವರಾಜ ಬಡಕುಂದ್ರಿ,ಕುಮಾರ ಹುಕ್ಕೇರಿ ಅನೇಕರು ಮಾತನಾಡಿದರು.
   ಸಂಘದ ಕಾರ್ಯನಿರ್ವಾಹಕ ಈರಪ್ಪ ಕಮತ ವರದಿ ವಾಚನ ಮಾಡಿ ಮಾತನಾಡಿ 1125 ಸದಸ್ಯರನ್ನು ಹೊಂದಿ, 7 ಕೋಟಿ ರೂ ಗಳ ಸಾಲ ನೀಡಿ, 11 ಕೋಟಿ ರೂ ಗಳ ದುಡಿಯುವ ಬಂಡವಾಳ ಹೊಂದಿ ಪ್ರಸಕ್ತ 2024-25 ನೇ ಸಾಲಿಗೆ 22. 2  ಲಕ್ಷ ರೂ. ಲಾಭ ಪಡೆದಿದೆ ಎಂದರು.
    ಈ ಸಭೆಯಲ್ಲಿ ಘಟಪ್ರಭಾ ಪಟ್ಟಣದ ಮುಖಂಡರಾದ ಗಂಗಾಧರ ಬಡಕುಂದ್ರಿ, ಸಿ ಎ ಕಾಡದವರ,ಅರವಿಂದ ಬಡಕುಂದ್ರಿ, ಸುಭಾಷ್ ಕಾಡದವರ, ಕೆಂಪಣ್ಣ ಕಾಡದವರ, ಮಲ್ಲಪ್ಪ ಬನ್ನನವರ,ವಿವೇಕಾನಂದ ಹುದ್ದಾರ,  ಸಂಘದ ಸದಸ್ಯರಾದ ಪರಮೇಶ್ವರ್ ತುಕ್ಕಾನಟ್ಟಿ, ಯಲ್ಲಪ್ಪ ಮಾಳ್ಯಗೋಳ, ಶ್ರೀಮತಿ ಗೌರವ್ವ  ಪಾಟೀಲ, ಸಂಗೀತಾ ಬಾಗೇವಾಡಿ, ಬಸಪ್ಪ ಹರಿಜನ, ಸುರೇಶ ಮುಸಲ್ಮಾರಿ, ಸುನೀತಾ ಕರೋಶಿ, ಎಸ್ ಎ ಪಾಟೀಲ  ಸೇರಿದಂತೆ ಸಂಘದ ಸದಸ್ಯರು, ಘಟಪ್ರಭಾ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು, ಮುಖಂಡರು ಭಾಗವಹಿಸಿದ್ದರು.ಇದೆ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಅತೀ ಹೆಚ್ಚು ಅಂಕ ಪಡೆದ ರೈತರ ಮಕ್ಕಳನ್ನು ಸನ್ಮಾನಿಸಲಾಯಿತು.
WhatsApp Group Join Now
Telegram Group Join Now
Share This Article