ಘಟಪ್ರಭಾ. ಇಲ್ಲಿನ ಪ್ರತಿಷ್ಠಿತ ದಿ. ಮಲ್ಲಾಪೂರ ಅರ್ಬನ್ ಕೊ, ಅಪ್ ಕ್ರೆಡಿಟ್ ಬ್ಯಾಂಕ ಲಿ. ಘಟಪ್ರಭಾ ಇದರ 2026 ನೇ ವರ್ಷದ ನೂತನ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮ ಸಮವಾರ ದಿನಾಂಕ 29-12-2025 ರಂದು ಬ್ಯಾಂಕ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ
ಸಾನಿಧ್ಯವನ್ನು ಗುಬ್ಬಲಗುಡ್ಡ ಶ್ರೀ ಕೆಂಪಯ್ಯ ಸ್ವಾಮಿ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮತ್ತು ಹೊಸಮಠದ ಶ್ರೀ ವಿರೂಪಾಕ್ಷ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ದಿನದರ್ಶಿಕೆ ಬಿಡುಗಡೆ ಮಾಡಿದರು. ಅನಂತರ ಮಾತನಾಡಿದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಬ್ಯಾಂಕ ದಿನದಿಂದ ದಿನಕ್ಕೆ ಉತ್ತಮ ಗುಣಮಟ್ಟದಲ್ಲಿ ಗ್ರಾಹಕರ ಸೇವೆ ಸಲ್ಲಿಸುತ್ತಿದ್ದು ಆದರ್ಶ ಬ್ಯಾಂಕಾಗಿ ಬೆಳೆಯುತ್ತಿದೆ ಎಂದರು. ಶ್ರೀ ವೀರೂಪಾಕ್ಷ ಮಹಾಸ್ವಾಮಿಗಳು ಮಾತನಾಡಿ ಬ್ಯಾಂಕು ಇನ್ನೂ ಹೆಚ್ಚಿನ ಮಟ್ಟಕ್ಕೆ ಬೆಳೆಯಲಿ ಎಂದರು. ಅಧ್ಯಕ್ಷತೆಯನ್ನು ಬ್ಯಾಂಕ ಅಧ್ಯಕ್ಷರಾದ ರಮೇಶ ತುಕ್ಕಾನಟ್ಟಿ ವಹಿಸಿದ್ದರು, ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ ಮಹಾಜನ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಅಲ್ಲಪ್ಪಾ ಹುಕ್ಕೇರಿ, ಉಪಾಧ್ಯಕ್ಷ ಹೊನ್ನಜ್ಜ ಕೋಳಿ, ನಿರ್ದೇಶಕರಾದ ಮಹಾವೀರ ಹುಲ್ಲೋಳಿ, ಆನಂದ ಕಬಾಡಗಿ ಸುಭಾಷ ಕಾಡದವರ, ಡಾ, ರಾಜಶೇಖರ ತುಕ್ಕಾನಟ್ಟಿ ಮಹಾದೇವ ಬಟನೂರೆ, ರೇವಕ್ಕಾ ಕಮತ, ಶೃತಿ ಮಟಗಾರ , ರಾಮಪ್ಪ ನಾಯಿಕ, ಕಲ್ಲೋಳೆಪ್ಪಾ ಜಮಖಂಡಿ, ರಮೇಶ್ ಬಂಗಾರಿ, ,ಹಿರಿಯರಾದ ಸಿದ್ರಾಮ ಹಿರೇಮಠ, ಮಲ್ಲಾಪುರ ಪಿ ಕೆ ಪಿ ಎಸ್ ಅಧ್ಯಕ್ಷ ಮುತ್ತಣ್ಣ ಹತ್ತರವಾಟ, ಮಲ್ಲಪ್ಪ ಬನನ್ನವರ, ಆನಂದ ಬನನ್ನವರ, ನವೀನ ತುಕ್ಕಾನಟ್ಟಿ, ಸಚಿನ ತುಕ್ಕಾನಟ್ಟಿ ಸೇರಿದಂತೆ ಗಣ್ಯರು ಸಿಬ್ಬಂದಿಗಳು ಭಾಗವಹಿಸಿದ್ದರು.ಬ್ಯಾಂಕ ವ್ಯವಸ್ಥಾಪಕರಾದ ಅಶೋಕ ಮುರಗೋಡ ನಿರೂಪಣೆ ಮಾಡಿದರೆ, ಕಿರಣ ಕಬಾಡಗಿ ವಂದಿಸಿದರು.


