ಘಟಪ್ರಭಾ. ಇಲ್ಲಿನ ಪ್ರತಿಷ್ಠಿತ ದಿ. ಮಲ್ಲಾಪೂರ ಅರ್ಬನ್ ಕೋ ಆಪ ಕ್ರೆಡಿಟ್ ಬ್ಯಾಂಕ ಲಿ. ಘಟಪ್ರಭಾ ಇದರ 13 ಜನರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲ 13 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಅವಿರೋಧ ಆಯ್ಕೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರಾಗಿ ರಮೇಶ ಮ. ತುಕ್ಕಾನಟ್ಟಿ , ಸುಭಾಸಚಂದ್ರ ಶೆ. ಕಾಡದವರ, ರಾಜಶೇಖರ ಗೊ. ತುಕ್ಕಾನಟ್ಟಿ, ಮಹಾದೇವ ಕಾ. ಬಟಾನೂರೆ, ಶ್ರೀಶೈಲ ಮ. ಮಗಡುಮ್ಮ, ಸತೀಶ ಬೀ ಹತ್ತರವಾಟ, ಮಹಾವೀರ ಕಾ ಹುಲ್ಲೋಳಿ, ಶ್ರೀಮತಿ ರೇವಕ್ಕ ಶಂ. ಕಮತ, ಶ್ರೀಮತಿ ಶೃತಿ ಮಂ. ಮಟಗಾರ, ಹೊನ್ನಜ್ಜ ಚ. ಕೋಳಿ, ಆನಂದ ದುಂ. ಕಬಾಡಗಿ, ಹುಲ್ಲೋಳೆಪ್ಪಾ ಹ. ಜಮಖಂಡಿ, ರಾಮಪ್ಪ ಬ. ನಾಯಿಕ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಭರತೇಶ ಶೇಬನ್ನವರ ಕಾರ್ಯನಿರ್ವಹಿಸಿದರು.