ಮಧ್ಯವರ್ಜನ ಶಿಬಿರಗಳಲ್ಲಿ ಪಾಲ್ಗೊಂಡು ಉತ್ತಮ ಜೀವನ ನಡೆಸಿ: ಮಲ್ಲಗೌಡ ಪಾಟೀಲ್ ಸಲಹೆ

Ravi Talawar
ಮಧ್ಯವರ್ಜನ ಶಿಬಿರಗಳಲ್ಲಿ ಪಾಲ್ಗೊಂಡು ಉತ್ತಮ ಜೀವನ ನಡೆಸಿ: ಮಲ್ಲಗೌಡ ಪಾಟೀಲ್ ಸಲಹೆ
WhatsApp Group Join Now
Telegram Group Join Now
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ   1951ನೇ ಮಧ್ಯವರ್ಜನ ಶಿಬಿರ ಕಾರ್ಯಕ್ರಮಬೆಳಗಾವಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ದಶಕಗಳಿಂದ ಮಧ್ಯವರ್ಜನ ಶಿಬಿರ ನಡೆಸಿ ಕುಡಿತದ ಚಟಕ್ಕೆ ಬಲಿಯಾದವರನ್ನು ಸರಿ ದಾರಿಗೆ ತರುತ್ತಿರುವುದು ಶ್ಲಾಘನೀಯ ಕೆಲಸ ಎಂದು ಕೆಪಿಸಿಸಿ ಸದಸ್ಯರಾದ ಮಲ್ಲಗೌಡ ಕಲ್ಲಗೌಡ ಪಾಟೀಲ್ ಅವರು ಹೇಳಿದರು.

ತಾಲೂಕಿನ ಕಡೋಲಿ ವಲಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ್  ಕಾರ್ಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ  ಮಧ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಆಶ್ರಯದಲ್ಲಿ ನಡೆದ  1951ನೇ ಮಧ್ಯವರ್ಜನ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದುಶ್ಚಟಕ್ಕೆ ಬಲಿಯಾಗುವವರು ಇಂತಹ ಶಿಬಿರಗಳಿಗೆ ಭಾಗವಹಿಸಿ ತಮ್ಮ ಬದುಕಿನ ದಿಕ್ಕನ್ನು ಬದಲಿಸಿಕೊಂಡು ಉತ್ತಮ ಜೀವನ ನಡೆಸಬೇಕೆಂದು ಸಲಹೆ ನೀಡಿದರು.

ಮಧ್ಯವರ್ಜನ ಶಿಬಿರಗಳು ಸಾಮಾನ್ಯವಾಗಿ ಮದ್ಯಪಾನ, ಮಾದಕವಸ್ತುಗಳು ಮತ್ತು ಇತರ ವ್ಯಸನಗಳಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡಲು ಆಯೋಜಿಸಿರುವ ಸಹಕಾರಿ ಕಾರ್ಯಕ್ರಮ,  ಶಿಬಿರದಲ್ಲಿ ವೈದ್ಯಕೀಯ ಚಿಕಿತ್ಸೆ, ಕೌನ್ಸೆಲಿಂಗ್, ಮತ್ತು ಇತರ ಚಟುವಟಿಕೆಗಳ ಮೂಲಕ ವ್ಯಸನಗಳನ್ನು ನಿವಾರಿಸಲು ಸಹಾಯ ಮಾಡಲಾಗುತ್ತದೆ. ಜನರು ಇದರ ಸದ್ಬಳಿಕೆ ಮಾಡಿಕೊಳ್ಳಬೇಕು ಎಂದರು ಹೇಳಿದರು.

ಪೂಜ್ಯರ ಈ ಕಾರ್ಯಕ್ರಮ ಬಹಳ ಅದ್ಭುತವಾದಂತಹ ಕಾರ್ಯಕ್ರಮವಾಗಿದ್ದು ಸಾವಿರಾರು ಕುಟುಂಬದ ಏಳಿಗೆಗೆ ದಾರಿ ದೀಪವಾಗಿದೆ ಎಂದು ಶ್ಲಾಘಿಸಿದರು‌.

ಜಿಲ್ಲಾ ನಿರ್ದೇಶಕರಾದ  ಸತೀಶ್ ನಾಯ್ಕ್ ಅವರು ಮಾತನಾಡಿ,   ದುಶ್ಚಟಗಳಿಂದ ದೂರವಿದ್ದಲ್ಲಿ ಪ್ರಗತಿ ಸಾಧ್ಯ. ವ್ಯಸನ ಮುಕ್ತ ಸಮಾಜದ ನಿರ್ಮಾಣವೇ ಶಿಬಿರದ ಉದ್ದೇಶವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಮದ್ಯವರ್ಜನ ಶಿಬಿರ ಇಂದು ದೇಶದ ಮೂಲೆ ಮೂಲೆಗಳಲ್ಲಿ ನಡೆಯುತ್ತಿದೆ. ಈವರೆಗೆ 1952  ಶಿಬಿರಗಳು ನಡೆದಿದ್ದು ಈವರೆಗೆ ಲಕ್ಷಾಂತರ ಜನರನ್ನು ವ್ಯಸನ ಮುಕ್ತರನ್ನಾಗಿಸಲಾಗಿದೆ ಎಂದು
ಶಿಬಿರಾರ್ಥಿಗಳಿಗೆ ಮಾಹಿತಿ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ  ಅಧ್ಯಕ್ಷತೆಯನ್ನು  ರಾಜು ಹೂವಪ್ಪ,  ಮಾಯಣ್ಣ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ವಹಿಸಿಕೊಂಡಿದ್ದರು.  ಜಿ ಆರ್ ಸೋನಿಯಾರ್ , ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರಾದ ಬಸವರಾಜ ಸೊಪ್ಪಿಮಠ,   ಪ್ರಾದೇಶಿಕ ಕಚೇರಿಯ ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್ ಅವರು ಪ್ರಾಸ್ತಾವಿಕ ಮಾತನಾಡಿದರು. ವ್ಯವಸ್ಥಾಪನಾ ಸಮಿತಿ ಪದಮದಾಧಿಕಗಳು, ಕ್ಷೇತ್ರ ಯೋಜನಾಧಿಕಾರಿ, ಶಿಬಿರದಿಕಾರಿ, ಆರೋಗ್ಯ ಸಹಾಯಕಿ, ವಲಯದ ಮೇಲ್ವಿಚಾರಕರು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article