ನವದೆಹಲಿ, ಜುಲೈ 23: ಅಂದು ಅವಮಾನ ಮಾಡಿ ಇಂದು ಪ್ರಧಾನಿ ನರೇಂದ್ರ ಮೋದಿಯನ್ನು ಮಾಲ್ಡೀವ್ಸ್ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿದೆ. ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವ ಚಾಕಚಕ್ಯತೆ ಪ್ರಧಾನಿಗಿದೆ. ಮಾಲ್ಡೀವ್ಸ್ನ 60ನೇ ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ ಮುಖ್ಯ ಅತಿಥಿಯಾಗಿ ತೆರಳಲಿದ್ದಾರೆ. ಎರಡು ವರ್ಷಗಳಿಂದ ಭಾರತ ಹಾಗೂ ಮಾಲ್ಡೀವ್ಸ್ನ ಸಂಬಂಧ ತೀರಾ ಹದಗೆಟ್ಟಿತ್ತು. 2023ರಲ್ಲಿ ಇಂಡಿಯಾ ಔಟ್ ಅಭಿಯಾನವನ್ನು ಮಾಲ್ಡೀವ್ಸ್ ಸರ್ಕಾರ ಆರಂಭಿಸಿತ್ತು.
ಮೋದಿಯನ್ನು ಆಹ್ವಾನಿಸಿ ಗೌರವಿಸಿದ ಮಾಲ್ಡೀವ್ಸ್

ನೇರವಾಗಿಯೇ ಅಲ್ಲಿನ ಸಚಿವರು ಪ್ರಧಾನಿ ಮೋದಿ ವಿರುದ್ಧ ಅಪಪ್ರಚಾರ ಮಾಡಿದ್ದರು. ಅದಕ್ಕೆ ಭಾರತವು ಮಾಲ್ಡೀವ್ಸ್ ಹೆಸರೆತ್ತದೆ ಭಾರತದ ಲಕ್ಷ್ಯದ್ವೀಪ ಮಾಲ್ಡೀವ್ಸ್ಗಿಂತಲೂ ಸುಂದರವಾಗಿ ಹೆಚ್ಚಿನ ಜನರು ಅಲ್ಲಿಗೆ ಭೇಟಿ ನೀಡಬೇಕೆಂದು ಮೋದಿ ಹೇಳಿದ್ದರು. ಅದಾದ ಬಳಿಕ ಮಾಲ್ಡೀವ್ಸ್ ಹೋಗುವ ಭಾರತೀಯರ ಸಂಖ್ಯೆಯಲ್ಲಿ ಗಮನಾರ್ಹ ಕಡಿತ ಉಂಟಾಗಿತ್ತು. ಆದರೆ ಕೇವಲ ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಮಾಲ್ಡೀವ್ಸ್ಗೆ ಇದರಿಂದ ದೊಡ್ಡ ಹೊಡೆತ ಬಿದ್ದಿತ್ತು.