ಬೈಲಹೊಂಗಲ. ಬೈಲಹೊಂಗಲ ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ (ಪಿ ಎಲ್ ಡಿ ) ಇದರ ಅಧ್ಯಕ್ಷರಾಗಿ ವಕ್ಕುಂದ ಗ್ರಾಮದ ಪರ್ವತಗೌಡ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ನೇಸರಗಿ ಗ್ರಾಮದ ಶ್ರೀಮತಿ ಮಾಲತಿ ಶಿವನಗೌಡ ಪಾಟೀಲ ಅವರು ಆಯ್ಕೆಯಾಗಿದ್ದಾರೆ.
ಇವರು ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ,ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾರ್ಗದರ್ಶನದಲ್ಲಿ ಸದಸ್ಯರ ಸಹಕಾರದಿಂದ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸದಸ್ಯರಾದ ಶಂಕರಗೌಡ ಪಾಟೀಲ,ಉಮೇಶ ಪಾಟೀಲ, ಶಂಕರಕುಮಾರ ಚಿಟ್ಟಿ, ಯಲ್ಲಪ್ಪ ಕೌಜಲಗಿ, ಅಕ್ಷರ ಅನಿಕಿವಿ, ಜಗದೀಶ ಬಜೇರಿ, ಶಿವಾನಂದ ಕಲ್ಲೂರ, ಲಕ್ಷ್ಮಪ್ಪ ಮಾಸ್ತಮಾರ್ಡಿ,, ರತ್ನಾವ್ವ ಧಾರವಾಡ, ಗಂಗಾಧರ ಹೊಂಡದ, ಆನಂದ ಮೂಗಿ ಮುಖಂಡರಾದ ರಾಜನಗೌಡ ಪಾಟೀಲ, ರಾಯನಗೌಡ ಪಾಟೀಲ, ವಕ್ಕುಂದ್ ಗ್ರಾ ಪಂ ಅಧ್ಯಕ್ಷ ಸಂಗಪ್ಪ ಭದ್ರಶೆಟ್ಟಿ, ಪಿಕೆ ಪಿಎಸ್ ಅಧ್ಯಕ್ಷ ಗಜದಂಡ ಸುತಗಟ್ಟಿ,ಶಿವನಗೌಡ ಪಾಟೀಲ, ಮಹಾಂತೇಶ್ ಮೋಹರೆ, ಅಶೋಕ ಭದ್ರಶೆಟ್ಟಿ, ಸುರೇಶ ಗಣಾಚಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.