ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆ:  ಪುನಶ್ಚೇತನ ಪ್ಯಾನೆಲ್ ಪ್ರಚಾರ ಸಭೆ

Ravi Talawar
ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆ:  ಪುನಶ್ಚೇತನ ಪ್ಯಾನೆಲ್ ಪ್ರಚಾರ ಸಭೆ
WhatsApp Group Join Now
Telegram Group Join Now
ಎಂ.ಕೆ.ಹುಬ್ಬಳ್ಳಿ:ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ (ರಾಣಿ ಶುಗರ್ಸ್) ಸಕ್ಕರೆ ಕಾರ್ಖಾನೆಯ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀ ಮಲಪ್ರಭಾ ಸಹಕಾರಿ ಕಾರ್ಖಾನೆಯ ಪುನಶ್ಚೇತನ ರೈತರ ಪ್ಯಾನಲ್ ಪ್ರಚಾರ ಸಭೆ ಹಿರೆಬಾಗೇವಾಡಿಯಲ್ಲಿ ನಡೆಯಿತು.
ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಪ್ಯಾನಲ್ ನ ಸಾಮಾನ್ಯ ಮತಕ್ಷೇತ್ರದ ಇಟಗಿ ಶ್ರೀಕಾಂತ ನಾಗಪ್ಪ, ಕಿಲ್ಲೇದಾರ ಶಂಕರ್ ಪರಪ್ಪಾ, ತುರಮರಿ ಶ್ರೀಶೈಲ್ ಬಸಪ್ಪ, ಪಾಟೀಲ ರಘು ಚಂದ್ರಶೇಖರ್, ಪಾಟೀಲ ಮರಾಮನಗೌಡ ಸಣಗೌಡ, ಪಾಟೀಲ ಶಿವನಗೌಡ ದೊಡಗೌಡ, ಮರಡಿ ಶಿವಪುತ್ರಪ್ಪ ಬಸವಣ್ಣೆಪ್ಪ, ಮಹಿಳಾ ಮೀಸಲು ಕ್ಷೇತ್ರದ ಲಲಿತಾ ಬಾಲಚಂದ್ರ ಪಾಟೀಲ, ಲಂಗೂಟಿ ಸುನಿತಾ ಮಹಾಂತೇಶ್, ಅ ವರ್ಗದ ಫಕೀರಪ್ಪ ಫಕೀರಪ್ಪ ಸಕ್ರೆಣ್ಣವರ, ಬ ವರ್ಗದ ಹೊಳಿ ಶಂಕರೆಪ್ಪ ಸದೆಪ್ಪ, ಪರಿಶಿಷ್ಟ ಜಾತಿಯಿಂದ ಬಾಳಪ್ಪ ದುರಗಪ್ಪ ಪೂಜಾರ, ಪರಿಶಿಷ್ಟ ಪಂಗಡದಿಂದ ಭರಮಪ್ಪ ಕಲ್ಲಪ್ಪ ಶಿಗೇಹಳ್ಳಿ ಇವರೆಲ್ಲರ ಪರವಾಗಿ ಮತ ಯಾಚಿಸಲಾಯಿತು.
ಪ್ರಚಾರ ಸಭೆಯಲ್ಲಿ ಶ್ರೀ ಮಲಪ್ರಭಾ ಸಹಕಾರಿ ಕಾರ್ಖಾನೆಯ ಪುನಶ್ಚೇತನ ರೈತರ ಪ್ಯಾನಲ್ ನ್ನು ಬೆಂಬಲಿಸುವಂತೆ ಷೇರುದಾರರಲ್ಲಿ ವಿನಂತಿಸಲಾಯಿತು. ಈ ವೇಳೆ ಬೆಳಗಾವಿ ತಾಲೂಕಿನ ವಿವಿಧ ಗ್ರಾಮಗಳ ಷೇರುದಾರರು, ರೈತರು, ಹಿರೇ ಬಾಗೇವಾಡಿ ಗ್ರಾಮದ ಮುಖಂಡರು, ಪ್ಯಾನಲ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article