ಮಲಪ್ರಭಾ ಶುಗರ ಚುನಾವಣೆ: ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನಾಮಪತ್ರ ಸಲ್ಲಿಕೆ

Ravi Talawar
ಮಲಪ್ರಭಾ ಶುಗರ ಚುನಾವಣೆ: ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನಾಮಪತ್ರ ಸಲ್ಲಿಕೆ
WhatsApp Group Join Now
Telegram Group Join Now
ಚನ್ನಮ್ಮನ ಕಿತ್ತೂರು. ಇಲ್ಲಿಗೆ ಸಮೀಪದ ಪ್ರತಿಷ್ಠಿತ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಎಮ್ ಕೆ ಹುಬ್ಬಳ್ಳಿ ಇದರ ಐದು ವರ್ಷಗಳ ಅವಧಿಗೆ ನಡೆಯುವ ಚುನಾವಣೆಗೆ  ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ, ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ  ನೇತೃತ್ವದ ಪುನ್ಹಸಚೇತನ ಪೆನಲ್ ನಿಂದ ಎಮ್ ಎಲ್ ಸಿ  ಚನ್ನರಾಜ್ ಹಟ್ಟಿಹೊಳಿ ಸಹಿತ 15 ಜನ ಚುನಾವನಾಧಿಕಾರಿ ಶ್ರೀಮತಿ ಪ್ರಭಾವತಿ ಫಕೀರಪೂರ ಅವರಿಗೆ ನಾಮಪತ್ರ ಸಲ್ಲಿಸಿದರು.
ಸಾಮಾನ್ಯ ಕ್ಷೇತ್ರದಿಂದ  ಚನ್ನರಾಜ ಬಸವರಾಜ  ಹಟ್ಟಿಹೊಳಿ,ಶಿವನಗೌಡ ದೊಡ್ಡನಗೌಡ ಪಾಟೀಲ, ರಾಮನಗೌಡ ಸನಗೌಡ ಪಾಟೀಲ, ಶಂಕರ ಪರಪ್ಪ ಕಿಲ್ಲೆದಾರ, ರಘು ಚಂದ್ರಶೇಖರ ಪಾಟೀಲ, ಶಿವಪುತ್ರಪ್ಪ ಬಸವಣ್ಣೆಪ್ಪ  ಮರಡಿ,ಸುರೇಶ ಯಲ್ಲಪ್ಪ ಹುಲಿಕಟ್ಟಿ, ಶ್ರೀಶೈಲ ಬಸಪ್ಪ ತುರಮರಿ, ಶ್ರೀಕಾಂತ ನಾಗಪ್ಪ ಇಟಗಿ, ಬ ವರ್ಗದಿಂದ ಶಂಕರ ಸದೆಪ್ಪಾ ಹೂಲಿ, ಅ ವರ್ಗದಿಂದ ಫಕೀರಪ್ಪ ಸಂಕ್ರನ್ನವರ, ಮಹಿಳಾ ಕ್ಷೇತ್ರದಿಂದ ಶ್ರೀಮತಿ ಲಲಿತಾ ಬಾಲಚಂದ್ರ ಪಾಟೀಲ, ಶ್ರೀಮತಿ ಸುನೀತಾ ಮಹಾಂತೇಶ ಲಂಗೋಟಿ, ಎಸ್ ಟಿ ವರ್ಗದಿಂದ ಬರಮಪ್ಪ ಕಲ್ಲಪ್ಪ ಶೀಗಿಹಳ್ಳಿ, ಎಸ್ ಸಿ ವರ್ಗದಿಂದ ಬಾಳಪ್ಪ ದುರಗಪ್ಪ ಪೂಜಾರ ಇವರುಗಳು ಚುನಾವಣೆಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಪ್ರಮೋದ ಕೊಚೇರಿ, ಶಂಕರ ಹೊಳಿ, ಶಿವನಗೌಡ ಪಾಟೀಲ,ಬಸನಗೌಡ ಪಾಟೀಲ, ಮುದಕಪ್ಪ ಮರಡಿ, ಶಂಕರಗೌಡ ಪಾಟೀಲ, ಪ್ರಕಾಶಗೌಡ ಪಾಟೀಲ, ಮಹಾಂತೇಶ ಮತ್ತಿಕೊಪ್ಪ ಸೇರಿದಂತೆ ಕಿತ್ತೂರು, ಖಾನಾಪುರ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ ಕ್ಷೇತ್ರದ ರೈತರು, ಮುಖಂಡರು   ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article