ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ:  ಶ್ರೀಕಾಂತ ವಿ ಮಹಾಜನ 

Ravi Talawar
ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ:  ಶ್ರೀಕಾಂತ ವಿ ಮಹಾಜನ 
WhatsApp Group Join Now
Telegram Group Join Now
ಘಟಪ್ರಭಾ. ಫೆ 11. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಿಗುವ ಬಿಸಿ ಊಟ, ಹಾಲು ಹಣ್ಣು ವಿತರಣೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಘಟಪ್ರಭಾದ  ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ ಹೇಳಿದರು
ಅವರು ಇತ್ತೀಚಿಗೆ ಪಟ್ಟಣದ  ಪಿ ಎಮ್  ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ  ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಶಿಕ್ಷಣಾಧಿಕಾರಿ ಎಸ್ ಎಚ್ ಗಿರಡ್ಡಿ ಅವರು ನೆರವೇರಿಸಿದರು,
ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ದುಂಡಪ್ಪಾ ರಾಜಾಪುರೆ ವಹಿಸಿದ್ದರು.ಸಿ ಆರ್ ಪಿ ರಂಗಪ್ಪ ಗೋಡೆರ, ಪ್ರಧಾನ ಗುರು ಮಾತೆ ಶ್ರೀಮತಿ ಕಳಸಣ್ಣವರ, ,  ಸೇವಾದಳದ ನಿವೃತ್ತ ರಾಜ್ಯ ದಳಪತಿ ಬಸವರಾಜ ಹಟ್ಟೀಗೌಡರ, ಮಹಾನಿಂಗಪ್ಪಾ ಹಳ್ಳೂರ, ಈಶ್ವರ ರಾಜಾಪೂರೆ, ಸುರೇಶ್ ಕರೋಶಿ, ಗಿರೀಶ ಹತ್ತರವಾಟ, ಈರಗೌಡಾ ಪಾಟೀಲ, ಕಚರೆ  ಮುಂತಾದವರು ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ನಂತರ ಮಕ್ಕಳಿಂದ ಆಕರ್ಷಕ ಮನರಂಜನಾ ಕಾರ್ಯಕ್ರಮಗಳು ಜರುಗಿದವು.
WhatsApp Group Join Now
Telegram Group Join Now
Share This Article