ಬಳ್ಳಾರಿ ಮೇ 28. : ಸಿಂಧನೂರಿನಿಂದ ಬೆಂಗಳೂರಿಗೆ ಕಾರಡಗಿ ಗಂಗಾವತಿ, ಹುಬ್ಬಳ್ಳಿಯ ಮೂಲಕ ಓಡಿಸಲು ರೈಲ್ವೆ ಇಲಾಖೆಯ ನಿರ್ಧರಿಸಿದೆ, ಆದರೆ ಸಿಂಧನೂರು ಹುಬ್ಬಳ್ಳಿ, ಬೆಂಗಳೂರು ರೈಲು ಮಾರ್ಗದ ಅಂತರ 681 ಕಿಲೋಮೀಟರ್ ಆಗುತ್ತದೆ. ಇದು ಬಹಳ ಸಮಯವನ್ನು ತೆಗೆದುಕೊಳ್ಳುವುದಲ್ಲದೆ ಪ್ರಯಾಣಿಕರಿಗೆ ಸಹ ಹಣದ ಹೊರೆಯಾಗುತ್ತದೆ, ಸಿಂಧನೂರು ಬೆಂಗಳೂರು ಇದೆ ರೈಲನ್ನು ಬಳ್ಳಾರಿ ಗುಂತಕಲ್ ಮೂಲಕ ಬೆಂಗಳೂರಿಗೆ ಓಡಿಸಿದಲ್ಲಿ ಬೆಂಗಳೂರಿನ ರೈಲು ಮಾರ್ಗದ ಅಂತರ 502 ಕಿ. ಮೀ ಆಗುತ್ತದೆ ಇದರಿಂದ ಪ್ರಯಾಣಿಕರಿಗೆ ಹಣದ ಜೊತೆಗೆ ಸಮಯವು ಉಳಿತವಾಗುತ್ತದೆ ಮತ್ತು ಹೈದರಾಬಾದ್ ಚೆನ್ನೈ ತಿರುಪತಿ ಹೋಗುವ ಪ್ರಯಾಣಿಕರಿಗೆ ಗುಂತಕಲ್ಲಿನಲ್ಲಿ ರೈಲುಗಳ ಲಭ್ಯತೆ ಇರುತ್ತದೆ ಕಾರಣ ಸಿಂಧನೂರು ಬೆಂಗಳೂರು ರೈಲನ್ನು ಗುಂತಕಲ್ಲು ಬಳ್ಳಾರಿಯ ಮೂಲಕ ಓಡಿಸಲು ಈಶಾನ್ಯ ರೈಲ್ವೆ ವಲಯದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ರೈಲ್ವೆ ಕ್ರಿಯಾ ಸಮಿತಿಯ ಸಂಚಾಲಕರಾದ ಕೆಎಂ ಮಹೇಶ್ವರ ಸ್ವಾಮಿ ಮನವಿ ಮಾಡಿದರು.
ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಕೆ ಮೈಸೂರು ಸ್ವಾಮಿ ಅವರು, ಹುಬ್ಬಳ್ಳಿ ಮಾರ್ಗದಲ್ಲಿ ಈ ರೈಲು ಚಲಿಸುವುದರಿಂದ ಅಂದಾಜು 180 ಕಿಲೋಮೀಟರ್ ಹೆಚ್ಚಿನ ಪ್ರಯಾಣ ಮಾಡಿ ಸಿಂಧೂರಿನ ಪ್ರಯಾಣಿಕರು ಬೆಂಗಳೂರು ತಲುಪಬೇಕಾಗುತ್ತದೆ ಇದರಿಂದಾಗಿ ಹೆಚ್ಚಿನ ಪ್ರಯಾಣ ದರ ಹಾಗೂ ಪ್ರಯಾಣದ ಅವಧಿ 3:00 ಗಂಟೆ ಹೆಚ್ಚಾಗುತ್ತದೆಆದ್ದರಿಂದ ಸಿಂಧನೂರ್ ಬೆಂಗಳೂರು ರೈಲನ್ನು ಹುಬ್ಬಳ್ಳಿ ಮಾರ್ಗದ ಬದಲಾಗಿ ಬಳ್ಳಾರಿ ಗುಂತಕಲ್ ಮಾರ್ಗದಲ್ಲಿ ಓಡಿಸಿದರೆ ಪ್ರಯಾಣದ ದರ ಮತ್ತು ಅವಧಿ ಕಡಿಮೆಯಾಗುತ್ತದೆ ಅಲ್ಲದೆ ಸಿಂಧನೂರು ಗಂಗಾವತಿ ಹೊಸಪೇಟೆ ಬಳ್ಳಾರಿಯ ಪ್ರಯಾಣಿಕರು ಯಲಹಂಕ ರೈಲು ನಿಲ್ದಾಣದಲ್ಲಿ ಇಳಿದರೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೇವಲ ಹತ್ತು ಕಿಲೋಮೀಟರ್ ದೂರದಲ್ಲಿ ಇರುತ್ತದೆ. ಈ ಮಾರ್ಗ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಈ ಸಂದರ್ಭದಲ್ಲಿ ಈಶಾನ್ಯ ರೈಲ್ವೆ ವಲಯದ ಅಧಿಕಾರಿಗಳಿಗೆ ತಿಳಿಸಿದರು.