ಶ್ರೀ ಜಡೇಸಿದ್ದೆಶ್ವರ ಸ್ವಾಮಿಯ ಮಠ ಜೀರ್ಣೋದ್ಧಾರಕ್ಕೆ ಎಲ್ಲರೂ ಕೈಜೋಡಿಸಬೇಕು : ಮಹೇಶ್ ಗೌಡ

Sandeep Malannavar
ಶ್ರೀ ಜಡೇಸಿದ್ದೆಶ್ವರ ಸ್ವಾಮಿಯ ಮಠ ಜೀರ್ಣೋದ್ಧಾರಕ್ಕೆ ಎಲ್ಲರೂ ಕೈಜೋಡಿಸಬೇಕು : ಮಹೇಶ್ ಗೌಡ
WhatsApp Group Join Now
Telegram Group Join Now
ಶ್ರೀ ಜಡೇಸಿದ್ದೆಶ್ವರ ಸ್ವಾಮಿಯ ಮಠ ಜೀರ್ಣೋದ್ಧಾರಕ್ಕೆ ಪೂರ್ವಭಾವಿ ಸಭೆ
ಬಳ್ಳಾರಿ. ಫೆ. 17.: (ಕಂಪ್ಲಿ) ಜಿಲ್ಲೆಯ ಕಂಪ್ಲಿ ತಾಲೂಕಿನ ಎಮ್ಮಿಗನೂರು  ಗ್ರಾಮದ ಶ್ರೀ ಜಡೇಸಿದ್ದೆಶ್ವರ ಸ್ವಾಮಿಯ ಮಠದ ಜೀರ್ಣೋದ್ಧಾರ ಕಾರ್ಯಕ್ಕೆ ಪೂರ್ವಭಾವಿ ಸಭೆಯನ್ನು ಮಠದ ಆವರಣದಲ್ಲಿ ನಡೆಸಲಾಯಿತು.
 ಈ ಸಭೆಯಲ್ಲಿ ಗ್ರಾಮದ ಎಲ್ಲಾ ಸಮುದಾಯದ ಮುಖಂಡರು ಹಾಗೂ ಭಕ್ತರು ಸಭೆಯಲ್ಲಿ ಭಾಗವಹಿಸಿ ಮಠದ ಅಭಿವೃದ್ಧಿ ಹಾಗೂ ನವೀಕರಣ ಕಾರ್ಯಗಳ ಬಗ್ಗೆ ಚರ್ಚಿಸಿದರು. ಈ ವೇಳೆ ಗ್ರಾಮ ಮುಖಂಡರಾದ ಬೆರ್ಗಿ ಮಹೇಶ್ ಗೌಡ ಮಾತನಾಡಿ, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಗ್ರಾಮದ ಎಲ್ಲಾ ಭಕ್ತರು ಕೈಜೋಡಿಸಬೇಕು ಎಲ್ಲರೂ ಒಂದಾಗಿ ಸೇರಿ ಶ್ರೀ ಜಡೇಸಿದ್ದೆಶ್ವರ ಸ್ವಾಮಿಯ ನೂತನ ಸಮಿತಿಯನ್ನು ರಚಿಸಿ, ಸ್ವಾಮಿಯ ನೂತನ ರಥ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಮಠದ ಜೀರ್ಣೋದ್ಧಾರ, ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸುವುದು, ನೂತನ ರಥ ನಿರ್ಮಾಣ ಹಾಗೂ ಮುಂದಿನ ಕಾರ್ಯಕ್ರಮಗಳ ರೂಪರೇಖೆ ಬಗ್ಗೆ ಚರ್ಚಿಸಿ, ಶೀಘ್ರದಲ್ಲೇ ಸಮಿತಿ ರಚನೆ ಮಾಡಿ ಕಾರ್ಯಾರಂಭಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ಊರಿನ ಮುಖಂಡರು ಮತ್ತು ಸದ್ಭಕ್ತರು ಸಭೆಯ ತೀರ್ಮಾನಕ್ಕೆ  ಸಮ್ಮತಿಸಿದರು. ಈ ಸಭೆಯಲ್ಲಿ ಸದ್ಭಕ್ತರಾದ ಘನಮಠಸ್ವಾಮಿ, ಎಚ್.ರುದ್ರಪ್ಪ, ಎಮ್ಮೆ ತಿಪ್ಪಯ್ಯ, ಮೀನುಕೆರೆ ಶೇಖಣ್ಣ, ಬಜಾ‌ರ್ ವೆಂಕಟೇಶ, ಆಗಲೂರು ಬಸಪ್ಪ, ವಡ್ಡರ ವೀರೇಶ್, ನಾಯಕರ ಸಿದ್ದಪ್ಪ, ಟಿ.ಪಿ.ಜಡೆಪ್ಪ, ಹೆಬ್ಬಟ್ಟದ ರಾಮಾಂಜಿನಿ, ನಾಗರೆಡ್ಡಿ, ಎಳ್ಳಾರ್ಥಿ ರಾಘವೇಂದ್ರರೆಡ್ಡಿ, ಮರವಾಡಿ ಗಾದಿಲಿಂಗಪ್ಪ, ಕಾಗಿ ಈರಣ್ಣ, ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಹಾಗೂ ವಿವಿಧ ಸಮುದಾಯದ ಪ್ರತಿನಿಧಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article