ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂದೂ ಧಾರ್ಮಿಕ ಮೆರವಣಿಗೆಗೆ ದಾಳಿ ಹೆಚ್ಚಳ : ಮಹೇಶ ತೆಂಗಿನಕಾಯಿ 

Ravi Talawar
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂದೂ ಧಾರ್ಮಿಕ ಮೆರವಣಿಗೆಗೆ ದಾಳಿ ಹೆಚ್ಚಳ : ಮಹೇಶ ತೆಂಗಿನಕಾಯಿ 
WhatsApp Group Join Now
Telegram Group Join Now
ಬೆಳಗಾವಿ. ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ದಾಳಿ ಹೆಚ್ಚಾಗಿದ್ದು, ಮಂಡ್ಯ ಜಿಲ್ಲೆಯ ಮದ್ದೂರ ಪಟ್ಟಣದಲ್ಲಿ  ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದ್ದು ಸರ್ಕಾರದ ಕಾನೂನು ಸುವ್ಯವಸ್ಥೆ ವೈಫಲ್ಯವನ್ನು ತೋರಿಸುತ್ತದೆ. ಪೊಲೀಸರು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದೇ ಇದ್ದುದರಿಂದ ೮ ಜನರು ಗಾಯಗೊಂಡಿದ್ದು, ೨೧ ಮಂದಿಯನ್ನು ಬಂಧಿಸಲು ತಡವಾಗಿದೆ. ಇದು ಅಲ್ಪಸಂಖ್ಯಾತ ತುಷ್ಟೀಕರಣ ನೀತಿಯ ಪರಿಣಾಮ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಹಿಂದೂಗಳ ಉತ್ಸವಗಳು ಅಸುರಕ್ಷಿತವಾಗಿದ್ದು, ಇದು ಕಾಂಗ್ರೆಸ್‌ನ ಹಿಂದೂ ವಿರೋಧಿ ಮನಸ್ಥಿತಿಯನ್ನು ಬಯಲು ಮಾಡುತ್ತದೆ.- ಮದ್ದೂರ್ ಪ್ರದೇಶದಲ್ಲಿ ನಡೆದ ಈ ಘಟನೆಯ ನಂತರ ಸೆಕ್ಷನ್ ೧೪೪ ಜಾರಿ ಮಾಡಬೇಕಾಯಿತು, ಆದರೆ ಸರ್ಕಾರ ಮೊದಲೇ ಎಚ್ಚರಿಕೆ ವಹಿಸದೇ ಹೋಗಿದ್ದು ದೊಡ್ಡ ತಪ್ಪು ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಶಾಸಕರಾದ ಮಹೇಶ ತೆಂಗಿನಕಾಯಿ ಹೇಳಿದರು.
    ಅವರು ಬುಧವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 2024 ರಲ್ಲಿ  ಕೋಲಾರದಲ್ಲಿ ಪ್ಯಾಲೆಸ್ಟೈನ್ ಧ್ವಜ ಪ್ರದರ್ಶನ,ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ಟೈನ್ ಧ್ವಜ ಹಾರಾಟ ನಡೆದಿದ್ದು, ರಾಷ್ಟ್ರೀಯ ಭಾವನೆಗಳನ್ನು ಅವಮಾನಿಸಿದೆ; ಸರ್ಕಾರ ಇದನ್ನು ತಡೆಯಲು ವಿಫಲವಾಗಿದೆ.ಸರ್ಕಾರದ ಮಂತ್ರಿಗಳೇ “ಪ್ಯಾಲೆಸ್ಟೈನ್ ಧ್ವಜ ಹಿಡಿಯುವುದರಲ್ಲಿ ತಪ್ಪಿಲ್ಲ” ಎಂದು ಹೇಳಿ ಇಂತಹ ಘಟನೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ, ಇದು ದೇಶಭಕ್ತಿ ಕಡಿಮೆಯಾಗುವಂತೆ ಮಾಡುತ್ತದೆ.
– ಚಿತ್ರದುರ್ಗ, ದಾವಣಗೆರೆ ಮತ್ತು ಕೋಲಾರದಲ್ಲಿ ಇಂತಹ ಧ್ವಜಗಳು ಕಾಣಿಸಿಕೊಂಡಿದ್ದರೂ ಸರ್ಕಾರ ಕ್ರಮ ಕೈಗೊಳ್ಳದೇ ಇರುವುದು ಅದರ ನಿರ್ಲಕ್ಷ್ಯವನ್ನು ತೋರಿಸುತ್ತದೆ. 2022 ರಲ್ಲಿ  ಹುಬ್ಬಳ್ಳಿ ಪೊಲೀಸ್ಠಾಣೆ, ಜೀಪ್ ಮೇಲೆ ದಾಳಿ ಮಾಡಿದವರಿಗೆ ಕೇಸ್   ಕಾಂಗ್ರೆಸ್ ಸರ್ಕಾರ ಹಿಂಪಡೆದಿದ್ದು  ಪೊಲೀಸರ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳ ವಿರುದ್ಧದ ಕೇಸ್ ಹಿಂಪಡೆದಿದ್ದು, ಈ ಕೇಸ್ ನಲ್ಲಿ  ೨೦೨೨ರಲ್ಲಿ ನಡೆದ ಘಟನೆಯಲ್ಲಿ ೮೮ ಮಂದಿ ಬಂಧನಕ್ಕೊಳಗಾಗಿದ್ದರು, ಆದರೆ ಸರ್ಕಾರ ಇದನ್ನು ಹಿಂಪಡೆಯುವ ಮೂಲಕ ಪೊಲೀಸರ ಮನೋಬಲ ಕುಗ್ಗಿಸಿದೆ.
– ಹುಬ್ಬಳ್ಳಿಯಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಿಂದ ಉಂಟಾದ ಹಿಂಸೆಯನ್ನು ಸರ್ಕಾರ ತುಷ್ಟೀಕರಣಕ್ಕಾಗಿ ಮರೆಮಾಚುತ್ತಿದ್ದು, ಹಿಂದೂಗಳ ಮೇಲಿನ ದಾಳಿಗಳನ್ನು ಪ್ರೋತ್ಸಾಹಿಸುತ್ತಿದೆ.ಹಾಗೂ ಶಿವಮೊಗ್ಗದಲ್ಲಿ ಔರಂಗಜೇಬ್ ಗೇಟ್ ಗ್ರೇಸ್  ಸರ್ಕಾರದಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಔರಂಗಜೇಬ್ ಪೋಸ್ಟರ್‌ಗಳು ಮತ್ತು ಟಿಪ್ಪು ಸುಲ್ತಾನ ಕಟೌಟ್‌ಗಳು ಪ್ರದರ್ಶನಗೊಂಡಿದ್ದು, ಹಿಂದೂಗಳ ಭಾವನೆಗಳನ್ನು ಗಾಯಗೊಳಿಸಿದೆ  ಸರ್ಕಾರ ಇದನ್ನು ತಡೆಯಲಿಲ್ಲ.
– ಶಿವಮೊಗ್ಗದಲ್ಲಿ ನಡೆದ ಈ ಘಟನೆಯಲ್ಲಿ ಕಲ್ಲು ತೂರಾಟ ಮತ್ತು ಕತ್ತಿ ಬೀಸುವಿಕೆ ನಡೆದಿದ್ದು, ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸಾಮಾಜಿಕ ಉದ್ವಿಗ್ನತೆ ಉಂಟಾಯಿತು.ಸರ್ಕಾರ ಸೆಕ್ಷನ್ ೧೪೪ ಜಾರಿ ಮಾಡಿದರೂ ಮೊದಲೇ ಎಚ್ಚರಿಕೆ ವಹಿಸದೇ ಹೋಗಿದ್ದು, ಕಾನೂನು ಸುವ್ಯವಸ್ಥೆ ವೈಫಲ್ಯವನ್ನು ತೋರಿಸುತ್ತದೆ. ಕಾಂಗ್ರೆಸ್ ಸರ್ಕಾರದಲ್ಲಿ ಕೆರಗೋಡು ಗ್ರಾಮದಲ್ಲಿ ಹನುಮಾನ್ ಧ್ವಜವನ್ನು ಕೆಳಗಿಳಿಸಿ ರಾಷ್ಟ್ರಧ್ವಜ ಹಾರಾಟ ಮಾಡಿದ್ದು, ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ.
– ಈ ವಿವಾದದಿಂದ ಮಂಡ್ಯದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಸರ್ಕಾರ ಜನರ ಭಾವನೆಗಳನ್ನು ಗೌರವಿಸದೇ ಇರುವುದು ಅದರ ವೈಫಲ್ಯ.   ಬಿಜೆಪಿ ಮುಖಂಡ ಎಮ್ ಬಿ ಜಿರಲಿ ಮಾತನಾಡಿ   ಕಾಂಗ್ರೆಸ್ ಸರ್ಕಾರದಲ್ಲಿ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ಸಂದರ್ಭದಲ್ಲಿ ಸಾಮುದಾಯಿಕ ಹಿಂಸೆ ನಡೆದಿದ್ದು, ೫೨ ಮಂದಿ ಬಂಧನಕ್ಕೊಳಗಾಗಿದ್ದಾರೆ; ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ.
– ಕಲ್ಲು ತೂರಾಟ, ವಾಹನಗಳ ಧ್ವಂಸ ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚುವ ಘಟನೆಗಳು ನಡೆದಿದ್ದು, ಸರ್ಕಾರದ ನಿರ್ಲಕ್ಷ್ಯದಿಂದಾಗಿ ₹೨.೬೬ ಕೋಟಿ ನಷ್ಟ ಉಂಟಾಗಿದೆ.
– ಮಂಡ್ಯ ಜಿಲ್ಲೆಯಲ್ಲಿ ನಡೆದ ಈ ಹಿಂಸೆಯ ನಂತರ ಸೆಕ್ಷನ್ ೧೪೪ ಜಾರಿ ಮಾಡಬೇಕಾಯಿತು, ಆದರೆ ಸರ್ಕಾರ ಮೊದಲೇ ಎಚ್ಚರಿಕೆ ವಹಿಸದೇ ಹೋಗಿದ್ದು ತುಷ್ಟೀಕರಣದ ಪರಿಣಾಮ. ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷಗೌಡ ಪಾಟೀಲ ಮಾತನಾಡಿ  ಹಿಂದೂಗಳ ಉತ್ಸವಗಳ ಮೇಲೆ ದಾಳಿ ಹೆಚ್ಚಾಗುತ್ತಿರುವುದು ಕಾಂಗ್ರೆಸ್‌ನ ಹಿಂದೂ ವಿರೋಧಿ ರಾಜಕೀಯವನ್ನು ತೋರಿಸುತ್ತದೆ. ಕಾಂಗ್ರೆಸ್ ಸರ್ಕಾರದಲ್ಲಿ ಭದ್ರಾವತಿಯ ಈದ್ ಮಿಲಾದ್ ಮೆರವಣಿಗೆಯಲ್ಲಿ “ಪಾಕಿಸ್ತಾನ್ ಜಿಂದಾಬಾದ್” ಘೋಷಣೆಗಳು ಕೇಳಿಬಂದಿದ್ದು ಇದರ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ  ಮಹಾನಗರ ಅಧ್ಯಕ್ಷರಾದ ಗೀತಾ ಸುತಾರ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಮಾದಮ್ಮನವರ, ಸಂದೀಪ್ ದೇಶಪಾಂಡೆ, ರಾಜಶೇಖರ್ ಡೋಣಿ, ಜಿಲ್ಲಾ ಮಾಧ್ಯಮ ಪ್ರಮುಖರಾದ ಸಚಿನ್ ಕಡಿ, ಹನುಮಂತ ಕೊಂಗಾಲಿ, ಸಾಮಾಜಿಕ ಜಾಲತಾಣ ಸಂಚಾಲಕ ಸುಭಾಷ್ ಸಣ್ಣವೀರಪ್ಪನವರ, ಮುಖಂಡ ಮುರುಘೇಂದ್ರಗೌಡ ಪಾಟೀಲ,ದಾದಾಗೌಡ ಬಿರಾದಾರ, ಬಸವರಾಜ ಮಾತನ್ನವರ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article