ಅಥಣಿ:ಮಹೇಂದ್ರ ನಿರ್ಮಲಾ ರಾಜಂಗಳೆ, ಅವರನ್ನು ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲೆಯ ಅಥಣಿ ‘ತಾಲೂಕಾ ಸಂಘಟನಾ ಕಾರ್ಯದರ್ಶಿ ಹಾಗೂ ಮಾಧ್ಯಮ ಸಲಹೆಗಾರರಾಗಿ’ ನೇಮಕಾತಿ ಮಾಡಿ ತಾಲೂಕ ಅಧ್ಯಕ್ಷ ಶಬ್ಬೀರ್ ಸಾತಬಚ್ಚೆ ಆದೇಶ ಪತ್ರ ನೀಡಿದರು.
ಈ ವೇಳೆ ಮಾತನಾಡಿದ ಕ. ರ. ವೆ. ಅಧ್ಯಕ್ಷ ಶಬ್ಬೀರ್ ಸಾತಬಚ್ಚೆ ಮಹೇಂದ್ರ ರಾಜಂಗಳೆ ಸಂಘಟನೆಯಲ್ಲಿ ಇಲ್ಲದೆ ಇದ್ದಾಗ ಸಹ ಹೊರಗಿನಿಂದ ನಮ್ಮ ಸಂಘಟನೆಗೆ ಶಕ್ತಿ ತುಂಬುವ ಕೆಲಸ ಮಾಡತಾ ಬಂದಿದ್ದಾರೆ ಅಥಣಿ ತಾಲೂಕಿನಲ್ಲಿ ಹಲವು ವರ್ಷಗಳಿಂದ ದುಡಿಯುತ್ತಾ ಬಂದಿದ್ದಾರೆ ಆದ ಕಾರಣ ಅವರ ಸೇವಾ ಮನೋಭಾವ ವನ್ನೂ ಪರಿಗಣಿಸಿ ಅವರನ್ನು ಕ.ರ.ವೆ.ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಅಥಣಿ ತಾಲೂಕಾ ಸಂಘಟನಾ ಕಾರ್ಯದರ್ಶಿ ಹಾಗೂ ಮಾಧ್ಯಮ ಸಲಹೆಗಾರರಾಗಿ ನೇಮಕ ಮಾಡಲಾಗಿದೆ ಎಂದರು.
ನಂತರ ತಾಲೂಕ ಉಪಾಧ್ಯಕ್ಷ ಮಂಜು ಹೋಳಿಕಟ್ಟಿ ಮಾತನಾಡಿ ಮಹೇಂದ್ರ್ ರಾಜಂಗಳೆ ಅವರು ನಮ್ಮ ಸಂಘಟನೆಯಲ್ಲಿ ಸೇರ್ಪಡೆ ಯಾಗಿದ್ದರಿಂದ ಸಂಘಟನೆಗೆ ಆನೆ ಬಲ ಬಂದಂತಾಗಿದೆ ಇವರ ಸಮಾಜ ಮುಖಿ ಸೇವೆಯನ್ನು ಪರಿಗಣಿಸಿ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲೆಯ ಅಥಣಿ ‘ತಾಲೂಕಾ ಸಂಘಟನಾ ಕಾರ್ಯದರ್ಶಿ ಹಾಗೂ ಮಾಧ್ಯಮ ಸಲಹೆಗಾರರಾಗಿ ನೇಮಕ ಮಾಡಲಾಗಿದೆ ಅವರು ಈ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕೆಯಿಂದ ನಿರ್ವಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಘೋಷವಾಕ್ಯವಾದ “ಸಮಗ್ರ ಕರ್ನಾಟಕದ ಅಭಿವೃದ್ಧಿಯೇ ನಮ್ಮ ಗುರಿ” ಉದ್ದೇಶದ ಈಡೇರಿಕೆಗೆ ಶ್ರಮಿಸಲಿದ್ದಾರೆ ಎಂದರು.
ಕ.ರ.ವೆ.ಅಥಣಿ ‘ತಾಲೂಕಾ ಸಂಘಟನಾ ಕಾರ್ಯದರ್ಶಿ ಹಾಗೂ ಮಾಧ್ಯಮ ಸಲಹೆಗಾರರಾಗಿ ಆದೇಶ ಪತ್ರ ಸ್ವೀಕರಿಸಿ ಮಾತನಾಡಿದ ಮಹೇಂದ್ರ ರಾಜಂಗಳೆ ಕನ್ನಡ ನಾಡು ನುಡಿ ಕನ್ನಡ ನೆಲ ವನ್ನು ನಾನು ನನ್ನ ತಾಯಿ ಎಂದು ಭಾಸುತ್ತೇನೆ ನನ್ನ ಮೇಲೆ ನಂಬಿಕೆ ಇಟ್ಟು ನನ್ನ ಕಾರ್ಯ ವೈಖರಿಯನ್ನು ಪರಿಗಣಿಸಿ ತಾಲೂಕಾ ಸಂಘಟನಾ ಕಾರ್ಯದರ್ಶಿ ಹಾಗೂ ಮಾಧ್ಯಮ ಸಲಹೆಗಾರರಾಗಿ ನೇಮಕ ಮಾಡಿರುವ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ . ಹಾಗೂ ಕನ್ನಡ ನಾಡ ನುಡಿ ಕನ್ನಡ ನೆಲದ ಜಲ ರಕ್ಷಣೆಗೆ ಅತ್ಯಂತ ಪ್ರಾಮಾಣಿಕವಾಗಿ ಹೋರಾಡುತ್ತೇನೆ ಎಂದು ತಿಳಿಸಿದರು.
ನಂತರ ಜಾಫರ ಪಟೇಲ, ಶಿದ್ದಗೌಡ ಹಿಪ್ಪರಗಿ ಹಾಗೂ ಅಪ್ಪು ಪೂಜಾರಿ ಮಾತನಾಡಿದರು. ಈ ವೇಳೆ ಶ್ರೀಶೈಲ ಪೂಜಾರಿ, ಸುಂದರ ಸೌದಾಗರ್, ಅಪ್ಪು ಪೂಜಾರಿ, ಸಚಿನ್ ಪಾಟಿಲ, ವಿನೋದ್ ಕಾಂಬಳೆ, ರಾಹಿದ ಮಾಸ್ಟರ, ಅಫಾನ್ ಮಾಸ್ಟರ ,ಅರುಣ ಶಿಂದೂರ,ಸೇರಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಸಮಸ್ತ ಪದಾಧಿಕಾರಿಗಳು ಭಾಗವಿಸಿದ್ದರು .