ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಅನಾವರಣ!

Ravi Talawar
ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಅನಾವರಣ!
WhatsApp Group Join Now
Telegram Group Join Now

ಬೆಳಗಾವಿ:  ಇಂದು ಸುವರ್ಣ ವಿಧಾನಸೌಧದ ಆವರಣದಲ್ಲಿ  ಬೃಹತ್ ಮಹಾತ್ಮಾ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮ ನೆರವೇರಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಮೆ ಅನಾವರಣಗೊಳಿಸಿದರು.

ಪ್ರತಿಮೆ ಉದ್ಘಾಟಿಸಿ ಮಾತನಾಡಿದ  ಅವರು, ಗಾಂಧೀಜಿ ಪುತಳಿ ಅನಾವರಣ ಕರ್ನಾಟಕ ರಾಜ್ಯಕ್ಕೆ ಅಲ್ಲ ಇಡೀ ದೇಶಕ್ಕೆ ಹೆಮ್ಮೆ ತಂದಿದೆ ಎಂದರು.  1924 ರಲ್ಲಿ  ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದ ಗಾಂಧಿ ಪ್ರತಿಮೆ  ಅನಾವರಣಗೊಳಿಸಿದ್ದು ನನ್ನ ಮತ್ತು ಪಕ್ಷದ ಹೆಮ್ಮೆ ಎಂದರು.

ನಂತರದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,  ಜೈ ಬಾಪು, ಜೈ ಭೀಮ್, ಜೈ ಸಂವಿದಾನ ಕಾರ್ಯಕ್ರಮ ಯಶಸ್ವಿಯಾಗುತ್ತಿದೆ. ಕಾರ್ಯಕ್ರಮಕ್ಕೆ  ರಾಹುಲ ಗಾಂಧಿ ಬರಬೇಕಾಗಿತ್ತು  ಆದರೆ ಅವರಿಗೆ ಅನಾರೋಗ್ಯ  ಎದರಾಗಿದ್ಬದರಿಂದ ಬಂದಿಲ್ಲ ಎಂದರು ತಿಳಿಸಿದರು. 1924 ರಲ್ಲಿ ನಡೆದ ಪ್ರಥಮ ಕಾಂಗ್ರೆಸ್‌ ಅಧಿವೇಶನ ಕರ್ನಾಟಕದಲ್ಲಿ ನಡೆದದ್ದು ಪುಣ್ಯ ಎಂದರು.

ಬಿಜೆಪಿ ಜಾತಿ ಬೀಜ ಬಿತ್ತಿ ಸಮಾಜದ ಸ್ವಾಸ್ಥ್ಯ ಹಾಳುಗೆಡುವುತ್ತಿದೆ. ಸಂವಿಧಾನ ವಿರೋಧಿ ಬಜೆಪಿಗರು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಸಿಎಂ ಮುಗಿಬಿದ್ದರು.

ಡಿಸಿಎಂ ಡಿಕೆ ಶಿವಕುಮಾರ್‌, ಸಂಸದೆ ಪ್ರಿಯಾಂಕ ಗಾಂಧಿ, ಕಾನೂನು ಸಂಸದೀಯ ಸಚಿವ ಹೆಚ್ ಕೆ ಪಾಟೀಲ್, ರಾಷ್ಟ್ರೀಯ ಪ್ರದಾನ್ ಕಾರ್ಯದರ್ಶಿ ಸೂರ್ಜೆವಾಲ್, ವೇಣುಗೋಪಾಲ್, ಸ್ಪೀಕರ್ ಯು ಟಿ ಖಾದರ, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ,ಗೃಹ ಸಚಿವ ಡಾ.ಜಿ. ಪರಮೇಶ್ವರ ಸೇರಿದಂತೆ ಇತರ ಹಲವು ಗಣ್ಯರು, ಅಧಿಕಾರಿಗಳು, ಕಾಯಕರ್ತರು, ಗಾಂಧಿ ಅನುಯಾಯಿಗಳು ಸಮಾರಂಭಕ್ಕೆ ಸಾಕ್ಷಿಯಾದರು.

WhatsApp Group Join Now
Telegram Group Join Now
Share This Article