ಮ್ಯಾರಥಾನ್ ಓಟ ದೈಹಿಕ ಶಕ್ತಿಗೆ ಮಾತ್ರವಲ್ಲ ಮಾನಸಿಕತೆಗೂ ಪ್ರೇರಣೆ: ಮಹಾಂತೇಶ ಕಿವಡಸಣ್ಣವರ

Ravi Talawar
ಮ್ಯಾರಥಾನ್ ಓಟ ದೈಹಿಕ ಶಕ್ತಿಗೆ ಮಾತ್ರವಲ್ಲ ಮಾನಸಿಕತೆಗೂ ಪ್ರೇರಣೆ: ಮಹಾಂತೇಶ ಕಿವಡಸಣ್ಣವರ
WhatsApp Group Join Now
Telegram Group Join Now
ಬೈಲಹೊಂಗಲ: ಮಾ ಭಾರತಿ ಸೇವಾ ಫೌಂಡೇಶನ್ ರಿ ಆನಿಗೋಳ ಇವರ ನೇತೃತ್ವದಲ್ಲಿ ರೋಟರಿ ಕ್ಲಬ್ ಬೈಲಹೊಂಗಲ ಸಹಯೋಗದಲ್ಲಿ ನಗರದಲ್ಲಿ ದ್ವಿತೀಯ ಬಾರಿಗೆ 7 ಕಿಮೀ ಮ್ಯಾರಥಾನ್ ಸ್ಪರ್ಧೆಯನ್ನು ಕೆ ಆರ್ ಸಿ ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿತು.  ಸಮರ್ಥನಂ ಅಂಗವಿಕಲರ ಸಂಸ್ಥೆ ಬೆಂಗಳೂರು ಸಂಸ್ಥಾಪಕರಾದ ಮಹಾಂತೇಶ ಕಿವಡಸಣ್ಣವರ ಕಾರ್ಯಕ್ರಮದ ಉದ್ಘಾಟಿಸಿ ಮಾ ಭಾರತಿ ಸೇವಾ ಫೌಂಡೇಶನ್ ಕಾರ್ಯವನ್ನು ,ದೃಷ್ಟಿ ಇಲ್ಲದಿದ್ದರೂ ತಾವು ಬೆಳೆದ, ಹಾಗೂ ಬೆಳಸಿದವರೆಲ್ಲರನ್ನು ಕೊಂಡಾಡಿದರು,
ಸಾಧನೆಗೆ ನಮ್ಮ ವೈಫಲಗಳು ಅಡ್ಡಿ ಬರಬಾರದು ಸಾಧಿಸುವ ಛಲ ನಮ್ಮಲ್ಲಿದ್ದರೆ ಎಂತಹ ಗುರಿಯನ್ನಾದರೂ ತಲುಪಲು ಸಾಧ್ಯ, ಆಧುನಿಕ ಪ್ರಪಂಚದಲ್ಲಿ ಅಂಗವಿಕಲರ ಕಡೆಗಣೆ ತೀರಾ ನಡೆಯುತ್ತಿದೆ ಅಂಗವಿಕಲರಿಗೆ ತಮಗೆ ಅವಶ್ಯಕತೆಗೆ ತಕ್ಕಂತೆ ವ್ಯಕ್ತಿಗಳನ್ನು ನಾವು ಒದಗಿಸುತ್ತೇವೆ ಅವರಿಗೆ ಉದ್ಯೋಗವನ್ನು ನೀಡಿ ಎಂದು ಕೇಳಿದರು,
ಮುಂದಿನ ದಿನಗಳಲ್ಲಿ ನಾನು ಕೂಡ ಸ್ಪರ್ಧಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿವೆ ಎಂದು ಪ್ರೇರಣೆಯ ನುಡಿಗಳ ನಾಡಿದರು, ನಂತರ ಮಾತನಾಡಿದ ಆಸ್ಟ್ರೇಲಿಯನ್ ಐರನ್ ಮ್ಯಾನ್ ಬೆಳಗಾವಿಯ ಡಾ. ಸತೀಶ ಚೌಲಗೇರೆ ಅವರು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ನಾಣ್ಣುಡಿಯಂತೆ, ನಿರಂತರ ಪ್ರಯತ್ನದಿಂದ ಒಂದೇ ದಿನದಲ್ಲಿ ಸೈಕ್ಲಿಂಗ್, ಸ್ವಿಮ್ಮಿಂಗ್, ರನ್ನಿಂಗ್, ಮಾಡಿ ಐರನ್ ಮ್ಯಾನ್ ಆಗಿದ್ದೆನೆ ನನ್ನ ಸಾಧನೆ ಇತರರಿಗೆ ಪ್ರೇರಣೆಯಾದರೆ ಈ ಸಾಧನೆಗೆ ಫಲ ಸಿಕ್ಕಂತಾಗುವದು ಎಂದರು,
ಸಿಪಿಐ ಪಂಚಾಕ್ಷರಿ ಸಾಲಿಮಠ ಇಂತಹ ಕಾರ್ಯಕ್ರಮಗಳ ಆಯೋಜನೆಯಿಂದ ದಾರಿ ತಪ್ಪುತ್ತಿರುವ ಜನತೆಗೆ ದಾರಿದೀಪವಾಗುವುದು, ಅಂತರ್ಜಾಲ ಮೋಸ ವಂಚನೆಗಳಿಂದ ಜಾಗೃತಿ ವಹಿಸಿ ಎಂದು ಕರೆ ನೀಡಿದರು. ಪುರುಷ ವಿಭಾಗದಲ್ಲಿ ಪ್ರಥಮ ಸುನೀಲ ದಂಡಾಯಿ, ದ್ವಿತೀಯ ಅಸ್ಲಾಂ ನಸ್ಲಾಪುರೆ,ತೃತೀಯ ಈರಪ್ಪ ಹುಲಗನ್ನವರ,ಚತುರ್ಥ  ಸಿದ್ದಪ್ಪ ನರಸಣ್ಣವರ,ಪಂಚಮ ಬಸಯ್ಯ ಪೂಜೇರ, ಮಹಿಳಾ ವಿಭಾಗದಲ್ಲಿ ಪ್ರಥಮ ನಕೋಶ ಮಂಗನಾಕರ, ದ್ವಿತೀಯ ಎಸ್ ಆರ್ ಶಾಹಿನ, ತೃತೀಯ ಶೋಭಾ ಕಾಕತಕರ, ಚತುರ್ಥ ದನಶ್ರೀ ಪಾಟೀಲ, ಪಂಚಮ ನಿಖಿತಾ ಚವ್ಹಾಣ, ಬಹುಮಾನ ಪಡೆದುಕೊಂಡರು. 64 ವರ್ಷದ ಬೆಳವಡಿಯ ಬಸವರಾಜ ಹುಂಬಿ ಅವರ ಓಟ ನೋಡುಗರ ಮನ ಸೆಳೆಯಿತು,
ಈ ಸಂದರ್ಭದಲ್ಲಿ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ, ಬೈಲಹೊಂಗಲ ಮಾಜಿ ಶಾಸಕರಾದ ವ್ಹಿ ಆಯ್ ಪಾಟೀಲ, ಉದ್ಯಮಿ ವಿಜಯ ಮೆಟಗುಡ್ಡ, ಚಿತ್ರನಟ ಶಿವರಂಜನ ಬೊಳಣ್ಣವರ, ಪುರಸಭೆ ಅಧ್ಯಕ್ಷ ವಿಜಯ ಬೊಳಣ್ಣವರ, ಆಂಗ್ಲ ಮಾಧ್ಯಮ ಶಾಲೆಯ ಚೇರಮನ್ ಸಂಜೀವಗೌಡ ಪಾಟೀಲ, ತಹಶಿಲ್ದಾರ ಎಚ್ ಎನ್ ಸಿರಹಟ್ಟಿ, ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಮಹಾಂತೇಶ ತುರಮರಿ, ಮಾ ಭಾರತಿ ಸೇವಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸುನೀಲ ಮರಕುಂಬಿ, ರೋಟರಿ ಕ್ಲಬ್ ಅಧ್ಯಕ್ಷ ಮಹಾಂತೇಶ ಜಿಗಜಿನ್ನಿ, ಆಯೋಜಕರು, ಮಾ ಭಾರತಿ ಸೇವಾ ಫೌಂಡೇಶನ್ ಹಾಗೂ ರೋಟರಿ ಕ್ಲಬ್ ಪದಾಧಿಕಾರಿಗಳು, ಸದಸ್ಯರು, ಬೈಲಹೊಂಗಲ ಯುವಕರು  ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article