ನೇಸರಗಿ: ಸಮೀಪದ ಸುತಗಟ್ಟಿ ಗ್ರಾಮದ ಹಾಗೂ ಸರ್ಕಾರಿ ಪ್ರೌಢ ಶಾಲೆ ಕರಡಿಗುದ್ದಿಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಮಹಾಂತೇಶ ಬಸಪ್ಪ. ಬಾಳಿಗಟ್ಟಿ ಇವರು ಸುವರ್ಣ ಮಹೋತ್ಸವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಇವರು ಹವ್ಯಾಸಿ ಕವಿಗಳಾಗಿದ್ದು, ದಿನಾಂಕ. 9/10/2024 ರಂದು ಗ್ಲೋಬಲ್ ವುಮೆನ್ಟೈಸ್ ಫೌಂಡೇಶನ್ ವತಿಯಿಂದ ನಡೆದ ವೀರ ರಾಣಿ ಚೆನ್ನಮ್ಮಾಜಿಯವರ 200 ನೇ ವಿಜಯೋತ್ಸವದ ನಿಮಿತ್ಯ ನಡೆದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.
ಇವರ ಸಾಹಿತ್ಯ, ಭಾಷೆ, ನೆಲ ಜಲ, ಸಂಸ್ಕೃತಿ ಕ್ಷೇತ್ರಗಳಲ್ಲಿ ಗೈದ ಸಾಧನೆ, ಜ್ಞಾನ ಮತ್ತು ಪ್ರೀತಿಯನ್ನು ಪರಿಗಣಿಸಿ‘ಸುವರ್ಣ ಮಹೋತ್ಸವ ಪುರಸ್ಕಾರ’ಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಕಸ್ತೂರಿ ಸಿರಿಕನ್ನಡ ವೇದಿಕೆ(ರಿ) ಬೆಳಗಾವಿ ವೇದಿಕೆಯ ಅಧ್ಯಕ್ಷರಾದ ಕವಿತ್ತ ಕರ್ಮಮಣಿ ಅವರು ತಿಳಿಸಿದ್ದಾರೆ.