ಬೈಲಹೊಂಗಲ: ಗ್ರಾಮೀಣ ಮಟ್ಟದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಯುವಕರು ಸಾಧನೆಗೈಯಲು ಹಿರಿಯರ ಮಾರ್ಗದರ್ಶನ ಮತ್ತು ಸಮನ ಮನಸ್ಕರ ಸಹಕಾರ ಅತ್ಯವಶ್ಯಕ ಎಂದು ಪಿಕೆಪಿಎಸ್ ನಿರ್ದೇಶಕ ಮಹಾಂತೇಶ ಮತ್ತಿಕೊಪ್ಪ ಹೇಳಿದರು.
ಸಮಿಪದ ಹೊಸೂರ ಗ್ರಾಮದ ಪಿಕೆಪಿಎಸ್ ನಲ್ಲಿ ನಡೆದ ಸಾಧಕರ ಸತ್ಕಾರ ಸಮಾರಂಭದಲ್ಲಿ ಮಾತನಾಡಿ, ನಿಷ್ಠೆ, ಪ್ರಾಮಾಣಿಕತೆ ಮತ್ತು ಸತತ ಪರಿಶ್ರಮದಿಂದ ಇದ್ದರೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ತೊರಬಹುದ. ಗ್ರಾಮದ ಯುವ ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಅವರ ಪಕ್ಷ ನಿಷ್ಠೆ ಮತ್ತು ಶ್ರಮವನ್ನು ಗುರುತಿಸಿ ನೈರುತ್ಯ ರೈಲ್ವೆ ವಿಭಾಗದ ಡಿಆರ್ ಯು ಸಿಸಿ ಗೆ ನೇಮಕವಾಗಿದ್ದಾರೆ. ಉಮೇಶ ಬೋಳೆತ್ತಿನ ಸವದತ್ತಿ ಮತ್ತು ಬೈಲಹೊಂಗಲ ಮತಕ್ಷೇತ್ರವನ್ನೊಳಗೊಂಡ ಸವದತ್ತಿ ತಾಲೂಕಿನ ಕೃಷಿಕ ಸಮಾಜದ ಅಧ್ಯಕ್ಷರಾಗಿರುವದು ಗ್ರಾಮಕ್ಕೆ ಹೆಮ್ಮೆ ತಂದಿದೆ ಎಂದರು.
ಸತ್ಕಾರ ಸ್ವೀಕರಿಸಿದ ಎಫ್ ಎಸ್ ಸಿದ್ದನಗೌಡರ ಮತ್ತು ಉಮೇಶ ಬೋಳೆತ್ತಿನ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಿಕೆಪಿಎಸ್ ಅಧ್ಯಕ್ಷ ಸೋಮಲಿಂಗ್ ಚಳಕೊಪ್ಪ, ವಿಶ್ವನಾಥ ಬುಡಶೆಟ್ಟಿ, ಬಸವರಾಜ ಮಾಕಿ, ಜಗದೀಶ್ ಮದಲಭಾಂವಿ, ರಮೇಶ ಹುರಳಿ,ಯಲ್ಲಪ್ಪ ತಳವಾರ, ಚನ್ನಪ್ಪ ಮಲಮೇತ್ರಿ, ಷಣ್ಮುಖ ಶಿರೆಣ್ಣವರ, ಮಹಾದೇವ ಜಡಿ, ಸಿದ್ದಪ್ಪ ಗುಮಗೋಳ, ಮಡಿವಾಳಪ್ಪ ಚಿಕ್ಕೊಪ್ಪ, ಸಂಜು ಪಾಟೀಲ,ಬಸವಾಣೆಪ್ಪ ಚಳಕೊಪ್ಪ, ಶಿವು ಮಾಕಿ, ಮಲ್ಲಪ್ಪ ಮದಲಬಾಂವಿ ಸಿಬ್ಬಂದಿಗಳಾದ ಕಲ್ಲಪ್ಪ ಚಳಕೊಪ್ಪ, ಸಂತೋಷ ಸುಂಕದ, ಶಂಕರ ಮಲ್ಲಣ್ಣವರ ಇದ್ದರು.