ಬೈಲಹೊಂಗಲ. ರೈತರು ಪ್ರಸಕ್ತವಾಗಿ ಅತಿಯಾದ ಮಳೆಯಿಂದ ಹಿನ್ನಡೆ ಅನುಭವಿಸುತ್ತಿರುವ ಕಬ್ಬು ಬೆಳೆಗಾರರಿಗೆ ಕಬ್ಬಿನ ಬಿಲ್ಲು ನಿಗದಿ ಮಾಡಲು ಸರ್ಕಾರಕ್ಕೆ ಮನವಿ ಮಾಡಿ ರೈತರ ಪರ ಕೆಲಸ ಮಾಡಲು ಸಿದ್ದನಿದ್ದೇನೆ ಎಂದು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಅವರು ಸೋಮವಾರದಂದು ಪಟ್ಟಣದ ಚನ್ನಮ್ಮ ಸರ್ಕಲ್ ಮುಂದೆ ರೈತರು ಕಬ್ಬು ಬೆಳೆಗೆ ಸರ್ಕಾರ ರೂ. 3500/- ಗಳ ದರ ನಿಗದಿ ಮಾಡಲು ಒತ್ತಾಯಿಸಿ ನಡೆದ ಧರಣಿ ಸತ್ಯಾಗ್ರಹ, ರಸ್ತಾ ರೋಖೊ ಧರಣಿ ಉದ್ದೇಸಿಸಿ ಮಾತನಾಡಿದರು.
ಅನ್ನದಾತನ ಸಮಸ್ಯೆಯನ್ನು ಸರ್ಕಾರ ಶೀಘ್ರ ಪರಿಹಾರ ಮಾಡಿ : ಮಹಾಂತೇಶ ದೊಡ್ಡಗೌಡರ
ಬೈಲಹೊಂಗಲ. ದೇಶಕ್ಕೆ ಅನ್ನ ನೀಡುವ ರೈತನನ್ನು ಸರ್ಕಾರ ಗೌರವಯುತವಾಗಿ ನಡೆಸಿಕೊಳ್ಳಬೇಕು. ಆತನ ಕಷ್ಟ ಕಾರ್ಪಣ್ಯದಲ್ಲಿ ಮುಂದೆ ಬಂದು ಸರ್ಕಾರ ಪರಿಹಾರ ನೀಡಬೇಕು. ಅದೇ ರೀತಿ ಅನೇಕ ತೊಂದರೆಗಳನ್ನು ಎದುರಿಸಿ ಕಬ್ಬು ಬೆಳೆಯುವ ರೈತನಿಗೆ ಸಕ್ಕರೆ ಕಾರ್ಖಾನೆಗಳು ಪ್ರತಿ ಟನಗೆ ರೂ 3500/- ನೀಡಲು ಸರ್ಕಾರ ದರ ನಿಗದಿ ಮಾಡಿ ರೈತರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು ಮತ್ತು ಅತಿಯಾದ ಮಳೆಗೆ, ವಿದ್ಯುತ್ ಸಮಸ್ಯೆ, ಕೆಲಸಗಾರರ ಕೊರತೆ, ಕೆಟ ಬೀಜ, ರಸಗೊಬ್ಬರ, ಕ್ರಿಮಿನಾಶಕ ಬಳಕೆ ಹತ್ತು ಹಲವಾರು ಸಮಸ್ಯೆಗಳಿಂದ ರೈತ ಸಾಲ ಸೋಲ ಮಾಡಿ ಸಂಕಷ್ಟ ಪರಿಸ್ಥಿತಿಗೆ ಬಂದು ನಿಂತಿದ್ದು,ಕೂಡಲೇ ಸರ್ಕಾರ ಎಚ್ಚೆತು ರೈತರ ಹಾಗೂ ರೈತ ಮುಖಂಡರ ಸಭೆಯನ್ನು ಮುಖ್ಯ ಮಂತ್ರಿಗಳು ಶೀಘ್ರವಾಗಿ ಕರೆದು ಅವರ ಸಮಸ್ಯ ಕೇಳಿ ದರ ನಿಗದಿ ಮಾಡಬೇಕೆಂದು ಹೇಳಿದರು.
ಈ ಹೋರಾಟದಲ್ಲಿ ಮಾಜಿ ಸಚಿವ ಶಶಿಕಾಂತ ನಾಯ್ಕ, ರೈತ ಹೋರಾಟಗಾರ, ರೈತ ಸೇವಾ ಸಂಘದ ಅಧ್ಯಕ್ಷ ಶಂಕರ ಬೋಳನ್ನವರ, ಶಂಕರ ಮಾಡಲಗಿ, ಭೀರಪ್ಪಾ ದೇಶನೂರ, ಮಲ್ಲಿಕಾರ್ಜುನ ಹುಂಬಿ, ಶಿವರಂಜನ ಬೋಳನ್ನವರ, ರಫೀಕ್ ಬಡೇಘರ, ಬಸವರಾಜ ಮೋಕಾಸಿ, ಬಸನಗೌಡ ಪಾಟೀಲ, ಬಸವರಾಜ ಉಪ್ಪಾರ, ಸುರೇಶ ವಾಲಿ, ಮಹಾಂತೇಶ ಕಮತ, ಸೋಮಪ್ಪ ಬೆಳಕೂಡ, ಬಸವರಾಜ ಹಣ್ಣಿಕೇರಿ,ಮಹಾಂತೇಶ ಗೌರಿ, ಶ್ರೀಕಾಂತ ಶಿರಹಟ್ಟಿ, ದಾಸಪ್ಪಗೌಡ ಕುಸಲಾಪುರ, ಸುರೇಶ ಹೊಳಿ ಬೈಲಹೊಂಗಲ ಮತ್ತು ಕಿತ್ತೂರು ತಾಲೂಕುಗಳ ರೈತ ಮುಖಂಡರು, ರೈತರು, ಮಹಿಳಾ ರೈತರು ಭಾಗವಹಿಸಿದ್ದರು. ಈ ಧರಣಿ ಸತ್ಯಾಗ್ರಹದಿಂದ ಸಂಪೂರ್ಣ ಬೈಲಹೊಂಗಲ ರಸ್ತೆ ಬಂದ ಆಗಿತ್ತು. ಬೆಳಿಗ್ಗೆ ಬಂದ ಪ್ರಯಾಣಿಕರು ತಮ್ಮ ಗ್ರಾಮಗಳಿಗೆ ತೆರಳಲು ಹರಸಾಹಸ ಪಟ್ಟರು.


