ನೇಸರಗಿ: ರೈತರ ಅಭಿವೃದ್ಧಿಗೆ, ಭೀಜ,ಗೊಬ್ಬರ, ಕ್ರಿಮಿನಾಶಕ ವಿತರಣೆ ಮಾಡಲು ಉನ್ನತ ಮಟ್ಟದ ಗೋಡಾವನ ನಿರ್ಮಾಣ ಮಾಡವ ಉದ್ದೇಶ ಹೊಂದಿದ್ದು ಬರುವ ವರ್ಷದಲ್ಲಿ ಕಾರ್ಯಕಲ್ಪ ಮಾಡಲು ಶ್ರಮಿಸುವದಾಗಿ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು.
ಅವರು ಸಮೀಪದ ಮದನಭಾವಿ ಗ್ರಾಮದ ಮುರಕೀಬಾವಿ ವಿವಿದ್ದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿ. ಮದನಭಾವಿ ಇದರ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ ಪ್ರಸಕ್ತ ವರ್ಷ 60 ಲಕ್ಷ ರೂಪಾಯಿಗಳ ಮೊತ್ತದಲ್ಲಿ ಸಂಘಕ್ಕೆ ಸ್ವಂತ ಬಂಡವಾಳದಲ್ಲಿ ಸುಸಜ್ಜಿತ ಕಾರ್ಯಾಲಯ ಕಟ್ಟಡ ನಿರ್ಮಾಣ ಮಾಡಿ ಉದ್ಘಾಟನೆ ಮಾಡಲಾಗಿದೆ ಎಂದರು.
2023-24 ರ ವರದಿ ವಾಚನ ಮಾಡಿ ಮಾತನಾಡಿದ ಸಂಘದ ಕಾರ್ಯನಿರ್ವಾಹಕ ಬಿ ಎಸ್. ಶೇಬನ್ನವರ ಮಾತನಾಡಿ ನಮ್ಮ ಸಹಕಾರಿ ಸಂಘವು ಪ್ರಸಕ್ತ ವರ್ಷ 1 ಕೋಟಿ 40 ಲಕ್ಷ ರೂಪಾಯಿಗಳ ಶೇರ ಬಂಡವಾಳ, 8 ಕೋಟಿ 40 ಲಕ್ಷ ರೂಪಾಯಿಗಳ ಮೆಂಬರ್ ಸಾಲ ನೀಡಿದ್ದು ಪ್ರಸಕ್ತ ವರ್ಷ 10 ಲಕ್ಷ 21 ಸಾವಿರ ರೂಪಾಯಿಗಳ ಲಾಭ ಗಳಿಸಿ ಸಾಧನೆ ಮಾಡಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಈಶ್ವರ ಮಿಡಕನಟ್ಟಿ ವಹಿಸಿದ್ದರು.ಉಪಾಧ್ಯಕ್ಷರಾದ ರುದ್ರಗೌಡ ಪಾಟೀಲ, ಅಡಿವೆಪ್ಪ ಮೋದಗಿ, ಶಿವಪ್ಪ ಗುಜನಾಳ, ಸಕ್ರನಾಯಕ ಸಾವಳಗಿ, ಮಲ್ಲಿಕಾರ್ಜುನ ಕುಲಕರ್ಣಿ, ಮಾಜಿ ಎಪಿಎಮಸಿ ಅಧ್ಯಕ್ಷ ಈರನಗೌಡ ದೊಡ್ಡಗೌಡರ, ಯುವ ಮುಖಂಡ ಪ್ರದೀಪ ದೊಡ್ಡಗೌಡರ ಆಡಳಿತ ಮಂಡಳಿ ಸದಸ್ಯರು, ಸರ್ವ ಸದಸ್ಯರು, ಸಿಬ್ಬಂದಿ, ಮದನಭಾವಿ, ಮುರಕೀಭಾವಿ, ಲಕ್ಕುಂಡಿ ಗ್ರಾಮಗಳ ರೈತರು ಪಾಲ್ಗೊಂಡಿದ್ದರು .