ಬೈಲಹೊಂಗಲ: ರೈತರು ನಮ್ಮ ದೇಶದ ಬೆನ್ನೆಲುಬು ಅವರ ಪ್ರಗತಿಗೆ ವಿವಿದ್ದೋದ್ದೇಶಗಳ ಕೃಷಿ ಗ್ರಾಮೀಣ ಅಭಿವೃದ್ಧಿ ಸಹಕಾರಿ ಸಂಘಗಳು ಉನ್ನತ ಮಟ್ಟದ ಪಾತ್ರ ವಹಿಸುತ್ತಿದ್ದು ಆ ಒಂದು ಸಹಕಾರಿ ರಂಗದ ಕಾರ್ಯನಿರ್ವಾಹಕರು ಒಂದು ದಿನದ ವೃತ್ತಿ ಕೌಶಲ್ಯ ತರಬೇತಿ ಪಡೆದು ರೈತರಿಗೆ ಸೂಕ್ತ ಸಲಹೆ, ಸೂಚನೆ ನೀಡಿ ಅವರ ಬೆಳವಣಿಗೆಗೆ ಸಹಕರಿಸಬೇಕೆಂದು ಮಾಜಿ ಶಾಸಕ, ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು.
ಅವರು ಶುಕ್ರವಾರದಂದು ಪಟ್ಟಣದ ಹೊಸೂರ ರಸ್ತೆಯ ರೋಟರಿ ಭವನದಲ್ಲಿ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು,ಕರ್ನಾಟಕ ಇಸ್ಟುಟಿಟ್ ಅಪ್ ಕೋ ಆಪರೇಟಿವ ಬೆಂಗಳೂರು, ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ, ಬೈಲಹೊಂಗಲ ತಾಲೂಕು ವಿವಿದ್ದೋದ್ದೇಶಗಳ ಕೃಷಿ ಗ್ರಾಮೀಣ ಅಭಿವೃದ್ಧಿ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಗ್ರಾಮೀಣಭಿವೃದ್ಧಿ ಸಂಘಗಳ ಒಂದು ದಿನದ ವೃತ್ತಿ ಕೌಶಲ್ಯ ತರಬೇತಿ ಕಾರ್ಯಾಗಾರ ಉದ್ಘಾಟನೆ ಮಾಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷಯನ್ನು ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರು ಶಂಕರಗೌಡ ದೊಡ್ಡಗೌಡರ, ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ಜಿಲ್ಲಾಧ್ಯಕ್ಷ ಬಸಗೌಡ ಡಿ. ಪಾಟೀಲ, ಬೈಲಹೊಂಗಲ ಟಿ ಎ ಪಿ ಸಿ ಎಮ್ ಎಸ್ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ, ಬೈಲಹೊಂಗಲ ತಾಲೂಕಾ ಸಹಕಾರಿ ಸಂಘಗಳ ನಿಭಂದಕರಾದ ಶಾಹಿನಾ ಅಕ್ತರ, ಬಿಡಿಸಿಸಿ ಬ್ಯಾಂಕ ಉಪ ಪ್ರದಾನ ವ್ಯವಸ್ಥಾಪಕರಾದ ಎಮ್ ಜಿ. ಕಲಾವಂತ, ತಾಲೂಕು ಬಿಡಿಸಿಸಿ ಬ್ಯಾಂಕ ನಿಯಂತ್ರಕ ವಿ ಬಿ. ಗಿರಣ್ಣವರ, ಎಲ್ಲ ಕಾರ್ಯನಿರ್ವಾಹಕರು, ಸಹಕಾರಿ ಇಲಾಖೆ ಸಿಬ್ಬಂದಿ,ಸಹಕಾರ ಮುಖಂಡರು ಪಾಲ್ಗೊಂಡಿದ್ದರು.