ಬೆಳಗಾವಿ. ಕಾಂಗ್ರೆಸ್ ಸರ್ಕಾರದ ಸಿಎಂ ಸಿದ್ರಾಮಯ್ಯ ವಿರುದ್ಧದ ಮುಡಾ ನಿವೇಶನ ಹಗರಣ ಮತ್ತು ವಾಲ್ಮೀಕಿ ಹಗರಣ ದುರುಪಯೋಗ, ದಲಿತರ ಹಣ ದುರುಪಯೋಗ ಖಂಡಿಸಿ ಬೆಂಗಳೂರು ಟು ಮೈಸೂರು ಚಲೋ ಪಾದಯಾತ್ರೆಯಲ್ಲಿ ಕಿತ್ತೂರಿನ ಮಾಜಿ ಶಾಸಕ , ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರು ಮತ್ತು ಕಿತ್ತೂರು ಚನ್ನಮ್ಮನ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರ ತಂಡ ಭರ್ಜರಿಯಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಕಾಂಗ್ರೆಸ್ ಸರ್ಕಾರ ತೊಲಗಬೇಕು. ಸಿ ಎಮ್ ಸಿದ್ರಾಮಯ್ಯ ಭ್ರಷ್ಟಾಚಾರ ಸ್ವತಃ ಸಿಲುಕಿದ್ದು ಅದಕ್ಕಾಗಿ ಕೂಡಲೇ ಸಿ ಎಮ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ವಾಲ್ಮೀಕಿ ಹಗರಣದಲ್ಲಿ 179 ಕೋಟಿ ರೂಪಾಯಿಗಳ ಹಗರಣ, ದಲಿತರ ಹಣ ದುರ್ಬಳಕೆ ಮಾಡಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಪಿತಾಮಹ ಆಗಿದೆ ಎಂದು ಮಹಾಂತೇಶ ಈ ಸಂದರ್ಭದಲ್ಲಿ ಘೋಷಣೆ ಕೂಗಿದರು.
ಈ ಪಾದಯಾತ್ರೆಯಲ್ಲಿ ರಾಯಭಾಗ ಶಾಸಕ ಧೂರ್ಯೋಧನ್ ಐಹೋಳೆ, ಮಾಜಿ ಶಾಸಕ ಸಂಜಯ ಪಾಟೀಲ, ಬೈಲಹೊಂಗಲ ಯುವ ಮುಖಂಡ, ಉದ್ಯಮಿ ವಿಜಯ ಮೆಟಗುಡ ಸೇರಿದಂತೆ ಚನ್ನಮ್ಮನ ಕಿತ್ತೂರು ಮತ್ತು ಬೈಲಹೊಂಗಲ ಮತಕ್ಷೇತ್ರದ ಬಿಜೆಪಿ, ಪದಾಧಿಕಾರಿಗಳು, ಕಾರ್ಯಕರ್ತರು ಮೈಸೂರ ಚಲೋ ಬಿಜೆಪಿ ಮತ್ತು ಜೆಡಿಎಸ್ ಸಹಯೋಗದ ಬ್ರಹತ್ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.