ಚನ್ನಮ್ಮನ ಕಿತ್ತೂರಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿಮಾತನಾಡುತ್ತಿರುವ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಬಿಜೆಪಿ ಮುಖಂಡರು ಇದ್ದಾರೆ.ಚನ್ನಮ್ಮನ ಕಿತ್ತೂರು. ನಮ್ಮ ಕ್ಷೇತ್ರವು ಸೇರಿದಂತೆರಾಜ್ಯದಲ್ಲಿ ಸಂಪೂರ್ಣವಾಗಿ ಕಾಂಗ್ರೇಸ್ ಸರಕಾರದ ಆಡಳಿತಯಂತ್ರ ಕುಸಿದಿದ್ದು ರಸ್ತೆಗಳು ತೆಗ್ಗುಗುಂಡಿಗಳುಬಿದ್ದು ಹಾಳಗಿ ಹೋಗಿವೆ ಅವುಗಳ ದುರಸ್ತಿ ಕಾರ್ಯವನ್ನು ಮಾಡಬೇಕೆಂದು ಮಾಜಿ ಶಾಸಕಮಹಾಂತೇಶ ದೊಡ್ಡಗೌಡರ ಆಗ್ರಹಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರಸುದ್ದಿಗಾರರೊಂದಿಗೆ ಮಾತನಾಡಿ, ಕಿತ್ತೂರು ಕ್ಷೇತ್ರದಲ್ಲಿನಮ್ಮ ಸರಕಾರದ ಅವದಿಯಲ್ಲಿ ಜಾರಿಗೆ ತಂದಯೋಜನೆಗಳು ನೆನೆಗುದಿಗೆ ಬಿದ್ದಿವೆ, ೧೦೦ ಹಾಸಿಗೆಯತಾಲೂಕ ಆಸ್ಪತ್ರೆ ಯೋಜನೆ ನೆನೆಗುದಿಗೆ ಬಿದ್ದಿದೆ.
ಚನ್ನಮ್ಮಾಜಿಯ ಅರಮನೆ ಕಟ್ಟುವ ಯೋಜನೆ ಕಟ್ಟುವಕೆಲಸ ಎಕೆ ಆಗುತ್ತಿಲ್ಲ ಈ ಬಾಗದ ಮಠಾಶರ, ಕಿತ್ತೂರುನಾಡಿನ ಜನತೆಯ ಬೇಡಿಕೆಯಾದ ಅರಮನೆ ಕಟ್ಟುವ ಕೆಲಸಯಾವಾಗ ಮಾಡುತ್ತಿರಿ ಎರಡುವರೇ ವ? ಆಗಿದೆ ಆದರುಎಕೆ ಆಗುತ್ತಿಲ್ಲ ಶಾಸಕರು ಹೋರಾಟ ಮಾಡೀದಿರಿ ಈಗಅರಮನೆ ಎಕೆ ಕಟ್ಟುತ್ತಿಲ್ಲ. ಎಂದು ನಾಡಿನ ಜನತೆಗೆ ಉತ್ತರನೀಡಬೇಕು. ನಮ್ಮ ಆಡಳಿತದಲ್ಲಿ ಮಂಜೂರಾಗಿದ್ದ
ಚನ್ನವೃಷಬೇಂದ್ರ ಏತ ನೀರಾವರಿ ಯೋಜನೆಯೂ ಇನ್ನೂವರೆಗೂ ಪೂರ್ಣಗೊಂಡಿರುವದಿಲ್ಲ, ಆಸ್ಪತ್ರೆಗೆ ಸಿಬ್ಬಂದಿಹಾಗೂ ಅಂಬುಲೆನ್ಸ ಕೊರತೆ, ಬಸ್ ಡಿಪೋ ಕಾಮಗಾರಿಯು ಮುಕ್ತಾಯವಾಗಿರುವದಿಲ್ಲ ಸರಕಾರ ಬಂದು ಎರಡುವರೆ ವರ್ಷಗತಿಸಿದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರಕಾರದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ.ಅಕಾರಕ್ಕಾಗಿ ಬಡಿದಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷಅಭಿವೃದ್ಧಿಯನ್ನು ಖಡೆಗಣಿಸಿದೆ. ಎಲ್ಲ ವಿದ್ಯಾರ್ಥಿಗಳಿಗೆಪ್ರತಿವರ್ಷ ಸ್ಕಾಲರ್‌ಶೀಪ್, ಮತ್ತು ವಿದ್ಯಾನಿ ಯೋಜನೆಗಳನ್ನುಸ್ಥಗಿತಗೊಳಿಸಿ ಪರಿಣಾಮ ಬಡ ವಿದ್ಯಾರ್ಥಿಗಳುಪರದಾಡುತ್ತಿದ್ದಾರೆ. ಅಂಗವಿಕಲರ ಸಮಾಜಿಕ ಪಿಂಚಣಿಯೋಜನೆಗಳು ಸರಿಯಾಗಿ ಬರುತ್ತಿಲ್ಲ, ಅತಿವೃಷ್ಠಿ ಮತ್ತುಅನಾವೃಷ್ಠಿಯಿಂದ ರೈತರಿಗೆ ಅನ್ಯಾಯವಾಗಿದೆ. ಸರಕಾರಪರಿಹಾರ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅನುದಾನಬರದೇ ಆಶ್ರಯ ಯೋಜನೆ ಪಲಾನುಭವಿಗಳುಪರದಾಡುತ್ತಿದ್ದಾರೆ ಮತ್ತು ಗೋವಿನ ಜೋಳದ ಬೆಲೆಕುಸಿತ ಕಂಡು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆಕೂಡಲೇ ಬೆಂಬಲ ಬೆಲೆಯೊಂದಿಗೆ ಖರೀ ಕೇಂದ್ರವನ್ನುತೆರೆದು ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ,ಬಿಜೆಪಿ ಬ್ಲಾಕ್ ಅಧ್ಯಕ್ಷ ಶೀಕರ ಕುಲಕರ್ಣಿ, ಮುಖಂಡರಾದಲಕ್ಷ್ಮೀ ಇನಾಮದಾರ, ಬಸವರಾಜ ಮಹಾಂತನವರ, ಕಿರಣಪಾಟೀಲ, ಶಿವಾನಂದ ಹನುಮಸಾಗರ, ದವಲತ್ತಪರಂಡೇಕರ, ಪ್ರಮೋದ ಕಾಜಗಾರ,ಈರಣ್ಣಾ ವಾರದ,ಮಹಾಂತೇಶ ಗಿರನಟ್ಟಿ, ಬಸವರಾಜ ಬಡಿಗೇರ, ಪಾಪುನರಗುಂದ ಇತರರು ಇದ್ದರು.


