ಕಂಬಿ ಹೊತ್ತು ನಂಬಿ ಹೋಗುವವರಿಗೆ ಮಲ್ಲಯ್ಯ ಒಲಿಯುತ್ತಾನೆ: ಮಹಾಲಿಂಗೇಶ್ವರ ಶ್ರೀಗಳು

Sandeep Malannavar
ಕಂಬಿ ಹೊತ್ತು ನಂಬಿ ಹೋಗುವವರಿಗೆ ಮಲ್ಲಯ್ಯ ಒಲಿಯುತ್ತಾನೆ: ಮಹಾಲಿಂಗೇಶ್ವರ ಶ್ರೀಗಳು
WhatsApp Group Join Now
Telegram Group Join Now

ಮಹಾಲಿಂಗಪುರ:ಭಾರತದ ೧೨ ಜ್ಯೋತಿಲಿಂಗಗಳಲ್ಲಿ ಪ್ರಭಾವಿ ಜ್ಯೋತಿಲಿಂಗ ಇರುವ ಸುಕ್ಷೇತ್ರ ಶ್ರೀಶೈಲಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಂಬಿ ಮಲ್ಲಯ್ಯ ಮಂಗಳವಾರ ಮುಂಜಾನೆ ಪ್ರಯಾಣ ಬೆಳೆಸಿದ.
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಿತಗೊಂಡ ಮಲ್ಲಯ್ಯನ ಜೊತೆ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ರನ್ನಬೆಳಗಲಿ ರಸ್ತೆಯಲ್ಲಿರುವ ಅಗಸಿ ಬಾಗಿಲವರೆಗೆ ಸಕಲ ಭಕ್ತವೃಂದ ಹಾಗೂ ವಾದ್ಯಮೇಳಗಳೊಂದಿಗೆ ಕಾಲ್ನಡಿಗೆಯಲ್ಲಿಯೇ ಆಗಮಿಸಿದರು.
ಬೀಳ್ಕೊಡುವ ಮಾರ್ಗದುದ್ದಕ್ಕೂ ಸಾಲಾಗಿ ನಿಂತ ಮುತ್ತೈದೆಯರು ಕೊಡದಿಂದ ನೀರು ಸುರಿದು ಆಶಿರ್ವಾದ ಪಡೆದರು.ಅಗಸಿ ಬಾಗಿಲ ಹತ್ತಿರ ಮಲ್ಲಯ್ಯನಿಗೆ ಮಂಗಳಾರತಿ ಮಾಡಲಾಯಿತು .ಶ್ರೀ ಮಠದ ಹೋರಿ ಮಹಾಲಿಂಗ ಕೂಡಾ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷ.ಇದು ಸತತ ೧೧ ವರ್ಷಗಳಿಂದ ಸದ್ಭಕ್ತರ ಜೊತೆ ಶ್ರೀಶೈಲಕ್ಕೆ ಪ್ರಯಾಣ ಬೆಳೆಸುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಶ್ರೀ ಗುರು ಮಹಾಲಿಂಗೇಶ್ವರರ ಪಾದ ಸ್ಪರ್ಮಶದಿಂದ ಮಹಾಲಿಂಗಪುರ ಸರ್ಮ ಧರ್ಮಗಳ ನಡುವೆ ಬ್ರಾತ್ವತ್ಯ ಹೊಂದಿದ ಪಟ್ಟಣವಾಗಿದೆ. ರಾಜ್ಯದಲ್ಲಿಯೇ ಭಾವ್ಯಕ್ಯತೆಯ ನಗರವೆಂದು
ಪ್ರಸಿದ್ಧಿಯಾಗಿದೆ.ಮನುಕುಲಕ್ಕೆ ಇಂತಹ ಮೇಲ್ಪಂಕ್ತಿ ಹಾಕಿಕೊಟ್ಟ ಮಹಾಲಿಂಗೇಶ್ವರರು ನೆಲೆಸಿದ ನಾಡಿನಲ್ಲಿ ವಾಸಿಸುವವರು ಭಾಗ್ಯವಂತರು.ಮಹಾಲಿಂಗೇಶ್ವರರಲ್ಲಿ ಶುದ್ಧ ನಿರ್ಮಲ ಭಕ್ತಿ ತೋರಿದರೆ ಎಲ್ಲ ರೀತಿಯ ಮನೋಭಿಲಾಷೆಗಳು ನೆರವೇರುತ್ತವೆ.

ಶ್ರೀಶೈಲದ ಜ್ಯೋತಿಲಿಂಗದಲ್ಲಿ ಶಿವ-ಪಾವರ್ತಿ ನೆಲೆಸಿದ್ದಾರೆಂಬ ಪ್ರತೀತಿ ಇದೆ.ಶ್ರೀಶೈಲಕ್ಕೆ ಪಾದಯಾತ್ರೆ ಮಾಡುವದರಿಂದ ಸುಖ,ಸಂಪತ್ತು ವೃದ್ಧಿಸುತ್ತದೆ.ಕಂಬಿ ಹೊತ್ತು ನಂಬಿ ಹೋಗುವವರಿಗೆ ಮಲ್ಲಯ್ಯ ಒಲಿಯುತ್ತಾನೆ ಎಂದು ಹೇಳಿ ಶ್ರೀಶೈಲ ಯಾತ್ರಿಗಳಿಗೆ ಶುಭ ಕೋರಿ ಬೀಳ್ಕೊಟ್ಟರು. ನೆರೆದಿದ್ದ ಸಾವಿರಾರು ಜನ ಭಕ್ತರ ನಡುವೆ ಮಲ್ಲಯ್ಯ ಪ್ರಯಾಣ ಬೆಳೆಸಿದ.  ಮಾರ್ಗಮಧ್ಯ ಯಾತ್ರಿಕರಿಗೆ ಅನೇಕರು ತಿಂಡಿ, ಚಹಾ, ಬಿಸ್ಕತ್ ತಂಪು ಪಾನೀಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು.ಮಹಾಲಿಂಗಪುರ ಔಷಧ ವ್ಯಾಪಾರಸ್ಥರ ಸಂಘದಿಂದ ಪ್ರಥಮ ಚಿಕಿತ್ಸೆಗಾಗಿ ಉಚಿತ ಔಷಧ ವಿತರಿಸಲಾಯಿತು.

ಸಿದ್ದಯ್ಯ ಸ್ವಾಮಿಗಳು,ಶ್ರೀಶೈಲ ಸ್ವಾಮಿಗಳು,ವಿಶ್ವನಾಥ ಮಠ ಇದ್ದರು.

WhatsApp Group Join Now
Telegram Group Join Now
Share This Article