ಮಹಾಲಿಂಗಪುರ ಪುರಸಭೆ ಸಾಮಾನ್ಯ ಸಭೆ : ಹುತಾತ್ಮ ಯೋಧನ ಸ್ಮಾರಕಕ್ಕೆ 10 ಲಕ್ಷ ಅನುದಾನ

Ravi Talawar
ಮಹಾಲಿಂಗಪುರ ಪುರಸಭೆ ಸಾಮಾನ್ಯ ಸಭೆ : ಹುತಾತ್ಮ ಯೋಧನ ಸ್ಮಾರಕಕ್ಕೆ 10 ಲಕ್ಷ ಅನುದಾನ
{"remix_data":[],"remix_entry_point":"challenges","source_tags":[],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}
WhatsApp Group Join Now
Telegram Group Join Now

ಮಹಾಲಿಂಗಪುರ : ಗುರುವಾರ ಮುಂಜಾನೆ ಪುರಸಭೆ ಸಭಾಭವನದಲ್ಲಿ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಜರುಗಿತು.

ಈ ಸಂದರ್ಭದಲ್ಲಿ ಜಮ್ಮು ಕಾಶ್ಮೀರ ಪೂಂಚ್ ವಲಯದ ರಸ್ತೆ ಅಪಘಾತದಲ್ಲಿ ಮಡಿದ ಮಹೇಶ್ ಮರೆಗೊಂಡ ಹಾಗೂ ಚಿತ್ರ ನಟ ದಿ. ಸರಿಗಮ ವಿಜಿ ಸ್ಮರಣೆಯಲ್ಲಿ ಸಭೆ ಒಂದು ನಿಮಿಷ ಮೌನ ಆಚರಿಸಿ ಸಭೆ ಮುಂದುವರೆಯಿತು. ನಂತರ ಸೋನಿ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಗದು 50 ಲಕ್ಷ ಪಡೆದು ಮಹಾಲಿಂಗಪುರ ಪಟ್ಟಣದ ಕೀರ್ತಿ ಹೆಚ್ಚಿಸಿದ ಯುವಕ ರಮ್ಜಾನ್ ಪೀರಜಾದೆಯನ್ನು ಹಾಗೂ ಪುರಸಭೆಗೆ ಇತ್ತಿಚೆಗೆ ನಾಮನಿರ್ದೇಶನಗೊಂಡ ಬಸವರಾಜ ಕರೆಹೊನ್ನ, ಪಾಪಾ ನಾಲಬಂದ, ಅನಂತನಾಗ ಬಂಡಿ, ಲಕ್ಕಪ್ಪ ಭಜಂತ್ರಿಯವರನ್ನು ಸಭೆ ಸ್ವಾಗತಿಸಿ ಸನ್ಮಾನಿಸಿತು.

ಈ ಸಭೆಯಲ್ಲಿ ಹಿಂದಿನ ಸಭೆಯ ಠರಾವು, ನವೆಂಬರ್/ ಡಿಸೆಂಬರ್ ತಿಂಗಳುಗಳ ಜಮಾ ವ ಖರ್ಚು, ಮುನ್ನಿರಿಕ್ಷೆಗಳಿಗೆ ಮಂಜುರಾತಿ , ಬಸವೇಶ್ವರ ಪುತ್ಥಳಿ ಟೇರ್ಕೇಸ್ ತೆರುವು ಮತ್ತು ಪುನರ್ ನಿರ್ಮಾಣ, ಗಣರಾಜ್ಯೋತ್ಸವ ಆಚರಣೆ, 2025-26 ರ ವಿವಿಧ ಶಾಖೆಗಳಿಗೆ ಟೆಂಡರ್, ಪುರಸಭೆ ಜಾಗೆಯಲ್ಲಿಯ ದಿನದ ಮತ್ತು ವಾರದ ಸಂತೆಗಳ ಕರ ಹರಾಜು, 2023-24,25 ಎಸ್ಎಫ್ ಸಿ ಗೆ ಫಲಾನುಭವಿಗಳ ಆಯ್ಕೆ ಇನ್ನೂ ಹಲವಾರು ಪಟ್ಟಣ ಅಭಿವೃದ್ಧಿಗೆ ತುರ್ತು ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತಾಗಿ ವಿರೋಧ ಮತ್ತು ಆಡಳಿತ ಪಕ್ಷದ ಸದಸ್ಯರು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಪುರಸಭೆ ವ್ಯವಸ್ಥಾಪಕ ಎಸ್ ಎನ್ ಪಾಟೀಲ್ ಅವರು ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಆಸ್ತಿ ತೆರಿಗೆ, ಕಸ ಸಂಗ್ರಹ ಶುಲ್ಕ, ನೀರಿನ ಕರ, ಅಂಗಡಿ ಬಾಡಿಗೆ, ಎಸ್ ಎಫ್ ಸಿ ಅಧ್ಯುತ್ ಅನುದಾನ ಸೇರಿದಂತೆ ತಲಾ ತಿಂಗಳುಗಳ ಒಟ್ಟು 30 ಕ್ರಮ ಸಂಖ್ಯೆ ಹೊಂದಿದ ಜಮೆ ವಿವರ ನೀಡಿ, ಖರ್ಚಿನ ಬಾಬತ್ತಿನಲ್ಲಿ ಸಿಬ್ಬಂದಿಗಳ ವೇತನ, ಎಸ್ ಎಫ್ ಸಿ ಬೀದಿ ದೀಪಗಳ ಹಾಗೂ ಬೋರವೆಲ್ ಗಳು ವಿದ್ಯುತ್ ಬಿಲ್, ಎಸ್ ಡಬ್ಲ್ಯೂ ಘಟಕದಲ್ಲಿ ಶೆಡ್ ನಿರ್ಮಾಣ, ಗಟಾರ್ ನಿರ್ಮಾಣ, ರಸ್ತೆ ದುರಸ್ತಿ, ಮನೆ ಮನೆ ಕಸ ಸಂಗ್ರಹ ಸಿಬ್ಬಂದಿಗಳ ವೇತನ ಇನ್ನೂ ಅನೇಕ ವಿಧಗಳ ಖರ್ಚಿನ ಬಾಬತ್ತನ್ನು ಸಭೆಗೆ ಮನವರಿಕೆ ಮಾಡಿಕೊಟ್ಟರು.

ವಿವರ: ನವೆಂಬರ್ ತಿಂಗಳಲ್ಲಿ ಅಂದಾಜಿನAತೆ ಆರಂಭಿಕ ಶಿಲ್ಕು 8.89 ಕೋಟಿ, ಪ್ರಸ್ತುತ ಜಮಾ 1.13 ಕೋಟಿ ಒಟ್ಟು 10.2 ಲಕ್ಷ ಜಮಾ ಆಗಿದೆ. ಪ್ರಸ್ತುತ ಖರ್ಚು 1.86 ಕೋಟಿ ಸೇರಿ ಕೊನೆ ಶಿಲ್ಕು 8.16 ಕೋಟಿ ಆಗಿದ್ದರಿಂದ ಒಟ್ಟು 10.2 ಕೋಟಿ ಖರ್ಚಾಗಿದೆ. ಡಿಸೆಂಬರ್ ತಿಂಗಳಲ್ಲಿ ಅಂದಾಜಿನAತೆ ಆರಂಭಿಕ ಶಿಲ್ಕು 8.16 ಕೋಟಿ ಇದ್ದು ವಿವಿಧ ಮೂಲಗಳಿಂದ ಜಮಾ 1.28 ಕೋಟಿ ಇವೆರಡೂ ಸೇರಿ 9.44 ಕೋಟಿ ರಕಮು ಜಮೆ ಆಗಿದೆ.ನಂತರ ಪ್ರಸ್ತುತ ತಿಂಗಳ ಖರ್ಚು 1.35 ಕೋಟಿ, ಕೊನೆಯ ಶಿಲ್ಕಾಗಿ 8.8 ಕೋಟಿ ಹೊಂದಿ ಒಟ್ಟು 9.44 ಕೋಟಿ ಖರ್ಚಾಗಿರುವ ವರದಿಯನ್ನು ಸಭೆಗೆ ಸಾಧರಪಡಿಸಿದರು.

ಇದು ಅಲ್ಲದೆ ಯೋಧ ದಿ.ಮಹೇಶ ಮರೆಗೊಂಡ ಅಂತಿಮ ಸಂಸ್ಕಾರ ನೀಡಿದ ಜಾಗೆಯಲ್ಲಿ 80 ಲಕ್ಷಗಳ ಉಳಿಕೆ ಹಣದಲ್ಲಿ ಸ್ಮಾರಕ ನಿರ್ಮಾಣಕ್ಕೆ 10 ಲಕ್ಷ ಹಣ ನೀಡುವ ಮತ್ತು ಉಳಿದ 70 ಲಕ್ಷಗಳನ್ನು 23 ವಾರ್ಡ್ ಗಳಿಗೆ ಹಂಚಿಕೆ ಕುರಿತ ಪ್ರಸ್ತಾವನೆಗೆ ಸಭೆ ಅನುಮೋದನೆ ನೀಡಿತು. 27 ಕೋಟಿ ವೆಚ್ಚದ 24್ಠ7 ಶುಧ್ಧ ಕುಡಿಯುವ ನೀರಿನ ಯೋಜನೆ ಚರ್ಚೆಯಲ್ಲಿ ಸರ್ವ ಸದಸ್ಯರು ತಕರಾರು ತೆಗೆದು ಈಗಾಗಲೇ ಎರಡು ಹಂತಗಳಲ್ಲಿ 10 ಕೋಟಿ ವೆಚ್ಚವಾಗಿದ್ದು ಅದು ನಿಷ್ಪ್ರಯೋಜಕವಾಗಿದೆ. ಘಟಪ್ರಭಾದಿಂದ ನಿರಂತರ ನೀರು ಪೂರೈಕೆ ಆಗದೆ ಇರುವುದು ಯೋಜನೆಗೆ ಅಡಚಣೆಯಾಗಿದೆ.ಇದಕ್ಕೆ ಡಿಪಿಆರ್ ತಯಾರಿಸಿ ಮಹಿಷವಾಡಗಿಯಿಂದ ನೀರು ಪೂರೈಕೆ ಮಾಡಿಕ್ಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು.

ಕೆಲ ವಾರ್ಡ್ ಗಳಲ್ಲಿ ಕೆಲಸ ಕಾರ್ಯಗಳು ಸ್ಥಗಿತಗೊಂಡು ಸಾರ್ವಜನಿಕರಿಗೆ ತೊಂದರೆಯಾಗಿದೆ. ಇದಕ್ಕೆಲ್ಲ ಕಾರಣ ಅಭಿಯಂತರ ಎಂ ಎಸ್ ಕಲ್ಬುರ್ಗಿ ಕಾರಣ ಇವರನ್ನು ಎತ್ತಂಗಡಿ ಮಾಡಿ ಒಳ್ಳೆಯ ಕೆಲಸಗಾರರನ್ನು ನೇಮಕ ಮಾಡಿ ಎಂದು ಹಲವು ಸದಸ್ಯರು ಪುರ ಸಭೆ ಅಧ್ಯಕ್ಷರನ್ನು ಒತ್ತಾಯಿಸಿದರು.

ಸದಸ್ಯರಾದ ಶೇಖರ ಅಂಗಡಿ, ರವಿ ಜವಳಗಿ, ಮುಸ್ತಾಕ್ ಚಿಕ್ಕೋಡಿ, ಪ್ರಹ್ಲಾದ್ ಸಣ್ಣಕ್ಕಿ, ಬಲವಂತಗೌಡ ಪಾಟೀಲ್, ಬಸವರಾಜ ಯರಗಟ್ಟಿ, ಬಸವರಾಜ ಚಮಕೇರಿ, ಬಸವರಾಜ ಹಿಟ್ಟಿನಮಠ, ಸವಿತಾ ಹುರಕಡ್ಲಿ, ಚಾಂದನಿ ನಾಯಕ ಸಭೆಯಲ್ಲಿ ಸಮಸ್ಯೆಗಳಿಗೆ ಗಮನ ಸೆಳೆದರು. ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ಉಪಾಧ್ಯಕ್ಷೆ ಶೀಲಾ ರಾಜೇಶ ಭಾವಿಕಟ್ಟಿ, ಸ್ಥಾಯಿ ಸಮಿತಿ ಚೇರ್ಮನ್ ಅಬ್ದುಲ್ ರಜಾಕ್ ಭಾಗವಾನ ಹಾಗೂ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಉಪಸ್ಥಿತರಿದ್ದರು. ಸಜನಸಾಬ ಪೆಂಡಾರಿ, ಬಸಪ್ಪ ಬುರುಡ, ರಾಜು ಗೌಡಪ್ಪಗೋಳ, ಸವಿತಾ ಕೋಳಿಗುಡ್ಡ, ಸುಜಾತಾ ಮಾಂಗ, ಸರಸ್ವತಿ ರಾಮೋಜಿ ಹಾಗೂ ಪುರಸಭೆ ಅಧಿಕಾರಿ ವರ್ಗದವರಿದ್ದರು.

16 mಟಠಿ 01 ಠಿhoಣo

WhatsApp Group Join Now
Telegram Group Join Now
Share This Article