ಮಹಾಘಟಬಂಧನ್​ ಸಿಎಂ ಅಭ್ಯರ್ಥಿ ಘೋಷಣೆ

Ravi Talawar
ಮಹಾಘಟಬಂಧನ್​ ಸಿಎಂ ಅಭ್ಯರ್ಥಿ ಘೋಷಣೆ
WhatsApp Group Join Now
Telegram Group Join Now
ಪಾಟ್ನಾ:  ಬಿಹಾರದಲ್ಲಿ ಚುನಾವಣೆ  ಕಣ ರಂಗೇರಿದೆ. ಇತ್ತ ಚುನಾವಣೆಗೂ ಮುನ್ನವೇ ಸಿಎಂ ಮತ್ತು ಡಿಸಿಎಂ ಅಭ್ಯರ್ಥಿಗಳನ್ನು ಮಹಾಘಟಬಂಧನ್​ ಘೋಷಣೆ ಮಾಡಿದ್ದಾರೆ. ಬಿಹಾರದ ಮುಂಬರುವ ವಿಧಾನಸಭಾ ಚುನಾವಣೆಗೆ ಗುರುವಾರ ಪಾಟ್ನಾದ ಹೋಟೆಲ್ ಮೌರ್ಯದಲ್ಲಿ ನಡೆದ ಬಹುನಿರೀಕ್ಷಿತ ಪತ್ರಿಕಾಗೋಷ್ಠಿಯಲ್ಲಿ ಮಹಾಮೈತ್ರಿಕೂಟವು ದೊಡ್ಡ ಸಂದೇಶ ನೀಡಿದೆ. ಕಾಂಗ್ರೆಸ್, RJD, ಎಡಪಂಥೀಯ ಪಕ್ಷಗಳು, ಮತ್ತು ಇತರ ಮಿತ್ರರೊಂದಿಗಿನ ಜಂಟಿ ಸಭೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ.
ಮಹಾಮೈತ್ರಿಕೂಟ ಮಹಾಘಟಬಂಧನ್​ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದೆ. ಜೊತೆಗೆ ಇಬ್ಬರು ಉಪಮುಖ್ಯಮಂತ್ರಿಗಳನ್ನು ಸಹ ನೇಮಕ ಮಾಡಲಾಗಿದೆ ಎಂದು ಅಶೋಕ್ ಗೆಹ್ಲೋಟ್ ಘೋಷಣೆ ಮಾಡಿದ್ದಾರೆ.  ಈ ನಿರ್ಧಾರ ಸರ್ವಾನುಮತದಿಂದ ತೆಗೆದುಕೊಳ್ಳಲ್ಪಟ್ಟಿದ್ದು, ಬಿಹಾರದ ರಾಜಕೀಯಕ್ಕೆ ಹೊಸ ತಿರುವು ನೀಡಿದೆ.
ಮಹಾಘಟಬಂಧನ್​ ಸಿಎಂ ಅಭ್ಯರ್ಥಿ ಘೋಷಣೆ!

ಚುನಾವಣೆಗೂ ಮುನ್ನ ಪಾಟ್ನಾದ ಹೋಟೆಲ್ ಮೌರ್ಯದಲ್ಲಿ ನಡೆದ ಪತ್ರಿಕಾಘೋಷ್ಠಿಯಲ್ಲಿ ಮಹಾಮೈತ್ರಿಕೂಟ ಅತೀ ದೊಡ್ಡ ಘೋಷಣೆ ಮಾಡಿದೆ. ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಅವರು ಮುಂದಿನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಅವರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು, ಇದು ತೇಜಸ್ವಿ ಅವರ ಯುವ ಶಕ್ತಿ ಮತ್ತು ಭವಿಷ್ಯದ ನಾಯಕತ್ವವನ್ನು ಒತ್ತಿ ಹೇಳಿದೆ. ಇನ್ನೂ ಮುಖೇಶ್ ಸಾಹ್ನಿ ಅವರನ್ನು ಮೊದಲ ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
WhatsApp Group Join Now
Telegram Group Join Now
Share This Article