ಮಹಾಂತೇಶ ಅರ್ಬನ್ ಕೋ ಆಫ್ ಕ್ರೇಡಿಟ್ ಸೊಸೈಟಿ ಶಾಖೆಯನ್ನು ಉದ್ಘಾಟಿಸಿದ ಮಹಾಬಳೇಶ್ವರ ಹಾದಿಮನಿ

Pratibha Boi
ಮಹಾಂತೇಶ ಅರ್ಬನ್ ಕೋ ಆಫ್ ಕ್ರೇಡಿಟ್ ಸೊಸೈಟಿ ಶಾಖೆಯನ್ನು ಉದ್ಘಾಟಿಸಿದ ಮಹಾಬಳೇಶ್ವರ ಹಾದಿಮನಿ
WhatsApp Group Join Now
Telegram Group Join Now

ಯರಗಟ್ಟಿ: ಸಮೀಪದ ಕಟಕೋಳ ಹಾಗೂ ಯರಗಟ್ಟಿ ಪಟ್ಟಣದಲ್ಲಿ ಆರಂಭಗೊಂಡ ನೂತನ ದಿ. ಮಹಾಂತೇಶ ಅರ್ಬನ್ ಕೋ ಆಫ್ ಕ್ರೇಡಿಟ್ ಸೊಸೈಟಿ ಶಾಖೆಗಳನ್ನು ಮಹಾಬಳೇಶ್ವರ ಹಾದಿಮನಿ ಉದ್ಘಾಟಿಸಿದರು.

ಸಂಘದ ಅಧ್ಯಕ್ಷರಾದ ಶಶಿಧರ ಮಾಳವಾಡ ಇವರ ಅಧ್ಯಕ್ಷತೆಯಲ್ಲಿ ಹಾಗೂ ಕಟಕೋಳ ಹಾಗು ಯರಗಟ್ಟಿ ಶಾಖೆಗಳ ಸಲಹಾ ಸಮಿತಿಯ ಅಧ್ಯಕ್ಷರಾದ ಮಹಾದೇವ ಆತಾರ ಮತ್ತು ಪರುತಗೌಡ ಪಾಟೀಲ ಅವರ ಮುಂದಾಳತ್ವದಲ್ಲಿ ಮಹಾಲಕ್ಷ್ಮೀ ಪೂಜೆಯೊಂದಿಗೆ ನೇರವೇರಿಸವಾಯಿತು.

ಸಂಸ್ಥೆಯ ಪ್ರಧಾನ ಕಛೇರಿ ಪ್ರಸ್ತುತ ವರ್ಷಕ್ಕೆ 12 ಕೋಟಿಗು ಅಧಿಕ ಠೇವು ಸಂಗ್ರಹ ಮಾಡಿದ್ದು 13 ಕೋಟಿಗೂ ಅಧಿಕ ಸಾಲ ನೀಡಲಾಗಿದೆ. ಮತ್ತು 12 ಕೋಟಿಗೂ ಅಧಿಕ ಸಾಲ ವಸೂಲಿ ಮಾಡಲಾಗಿದೆ. ರೂ. 22.58 ಲಕ್ಷ ಲಾಭದಲ್ಲಿದ್ದು 2500ಕ್ಕೂ ಹೆಚ್ಚಿನ ಶೇರುದಾರರನ್ನು ಹೊಂದಿರುವ ಸಂಘದ ದುಡಿಯುವ ಬಂಡವಾಳ ರೂ. 15 ಕೋಟಿಗಿಂತ ಹೆಚ್ಚಾಗಿದೆ. ಸಂಘವು ಪಗ್ರತಿಯತ್ತ ಮುನ್ನಡೆಯುವಲ್ಲಿ ಆಡಳಿತ ಮಂಡಳಿಯವರು ವಿಶೇಷವಾಗಿ ಪ್ರಯತ್ನಿಸುತ್ತಿದ್ದು ಮತ್ತು ಸಂಘದ ಸದಸ್ಯರಿಗೆ ಹಣಕಾಸು ಬೇಡಿಕೆಯನ್ನು ಸಕಾದಲ್ಲಿ ದೊರೆಯುವಂತೆ ಆಸಕ್ತಿ ವಹಿಸಿದ್ದಾರೆಂದು ತಿಳಿಸಿದರು. ಈ ಸಹಕಾರಿ ಸಂಘಗಳು ಉತ್ತಮ ಬೆಳವಣಿಗೆ ಹೊಂದಬೇಕಾದರೆ ಸಾಲಗಾರರು ಸರಿಯಾದ ಸಮಯಕ್ಕೆ ತಾವು ಪಡೆದ ಸಾಲವನ್ನು ಮರುಪಾವತಿ ಮಾಡಬೇಕು . ಸಾಲಗಾರರಷ್ಟೆ ಠೇವುದಾರರು ಸಂಘಕ್ಕೆ ಪ್ರಮುಖವಾಗಿ ಬೇಕು ಮತ್ತು ಸಿಬ್ಬಂದಿ ಹಾಗು ಆಡಳಿತಮಂಡಳಿ ಸದಸ್ಯರು ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಉತ್ತಮ ಬೆಳವಣಿಗೆ ಹೊಂದಲು ಸಾಧ್ಯ ಎಂದು ತಿಳಿಸಿದರು.

ಈ ವೇಳೆ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಬಸವರಾಜ ಯಾದವಾಡ, ನಿರ್ದೇಶಕರಾದ ಮಹಾದೇವಪ್ಪ ಕಲಹಾಳ, ಶಶಿಕಾಂತ ಧಡೇದ, ಶಿವಾನಂದ ಅಂಗಡಿ, ಜಗದೀಶ ಲಾಹೋಟಿ, ಗೋವಿಂದ ಮಡ್ಡಿ, ಶಂಕರ ಸೂಳಿಬಾವಿ, ಶರಣಪ್ಪ ಸಕ್ತಿ, ಅರುಣಕುಮಾರ ಶಿದ್ದಿಬಾವಿ, ಬಾಲಮುಕುಂದ ಮಹಾಲಿಂಗಪೂರಕರ, ಮನೋಹರ ಹೊನ್ನುಂಗರ ಶ್ರೀಮತಿ ಪುಷ್ಪಾ ಇಟ್ಟಂಗಿಹಾಳ, ಶ್ರೀಮತಿ ಮಧು ಜಂಬಗಿ, ದೀಪಕ ಅರಿಬೆಂಚಿ, ಕೃಷ್ಣ ಮೇದಾರ, ಪುಂಡಲೀಕ ಚನ್ನದಾಸರ ಹಾಗೂ ಕಟಕೋಳ ಶಾಖೆಯ ಸಲಹಾ ಸಮಿತಿಯ ಸದಸ್ಯರಾದ ಸಂಗಮೆಶ ಶೆಟ್ಟಿಸದಾವರ್ತಿ, ಸಂಗಮೇಶ ಅಡ್ಡಣಗಿ, ಬಾಳನಗೌಡ ಹೊಸಮನಿ, ನಾಗೇಂದ್ರ ತೋಡಕರ, ಬಸವರಾಜ ದಿವಟಗಿ, ವೇಂಕಟೇಶ ಜಾಧವ, ಶಂಕರಗೌಡ ಪಾಟೀಲ, ಮಹಾಂತೇಶ ತುಪ್ಪದ, ಗಜಾನನ ಪಾರಶೆಟ್ಟಿ ಮತ್ತು ಯರಗಟ್ಟಿ ಶಾಖೆಯ ಸಲಹಾ ಸಮಿತಿಯ ಸದಸ್ಯರಾದ ಶಿವಣ್ಣ ಹಂಜಿ, ಈರಪ್ಪ ಬೆಣ್ಣಿ, ಧರ್ಮಣ್ಣ ಪಡಸಲಗಿ, ದುಂಡಪ್ಪ ದೇವರಡ್ಡಿ, ಭಿಮಪ್ಪ ತಡಸಲೂರ, ಉಮೆಶ ಮಾಗುಂಡನವರ, ಮಹಾಂತೇಶ ಜಕಾತಿ, ಮೋಹನ ಹಾದಿಮನಿ ಹಾಜರಿದ್ದರು.

WhatsApp Group Join Now
Telegram Group Join Now
Share This Article