ಮದಿಹಳ್ಳಿ ಘಟನೆ: ಸಚಿವ ಸತೀಶ್‌ ಜಾರಕಿಹೊಳಿ ಅವರಲ್ಲಿ ಕ್ಷಮೆಯಾಚಿಸಿದ ಮಹಿಳೆ 

Ravi Talawar
ಮದಿಹಳ್ಳಿ ಘಟನೆ: ಸಚಿವ ಸತೀಶ್‌ ಜಾರಕಿಹೊಳಿ ಅವರಲ್ಲಿ ಕ್ಷಮೆಯಾಚಿಸಿದ ಮಹಿಳೆ 
WhatsApp Group Join Now
Telegram Group Join Now
ಬೆಳಗಾವಿ: ಕಳೆದ ನಾಲ್ಕೈದು ದಿನಗಳ ಹಿಂದೆ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಎದುರು ಗಂಡನ ಕೊರಳಪಟ್ಟಿ ಹಿಡಿದು ಎಳೆದಾಡಿದ ಮಹಿಳೆ, ಇಂದು ಸ್ವತಃ ಸಚಿವ ಸಚತೀಶ ಜಾರಕಿಹೊಳಿ ಅವರಲ್ಲಿ ಕ್ಷಮೆಯಾಚಿಸಿದ್ದಾರೆ.
ಸೆ. 9 ರಂದು ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಮದಿಹಳ್ಳಿ ಗ್ರಾಮದ ಪಿಕೆಪಿಎಸ್ ಸದಸ್ಯರು ಸೇರಿಕೊಂಡು ಒಬ್ಬರಿಗೆ ಮತದಾನ ಮಾಡುವ ಹಕ್ಕು ನೀಡಲು ಸಭೆ ನಿಗದಿ ಮಾಡಿದ್ದರು. ಈ ವೇಳೆ ಪಿಕೆಪಿಎಸ್ ಸದಸ್ಯ ಮಾರುತಿ ಸನದಿ ಪತ್ನಿ ಸಚಿವ ಸತೀಶ್ ಜಾರಕಿಹೊಳಿ ಅವರ ಎದುರೇ ಮಾರುತಿ ಸನದಿ ಕೊರಳು ಪಟ್ಟಿ ಹಿಡಿದು ಎಳೆದಾಡಿದ್ದರು.
ಪಿಕೆಪಿಎಸ್‌ ಸದಸ್ಯ ಮಾರುತಿ ಸನದಿ ಪತ್ನಿ ಲಗಮವ್ವಾ ಸನದಿ ಅವರು ಈಗ ತಮ್ಮ ತಪ್ಪಿನ ಅರಿವಾಗಿ  ಇಂದು ಸ್ವತಃ ಸಚಿವ ಸತೀಶ ಜಾರಕಿಹೊಳಿ ಅವರಲ್ಲಿ ಕ್ಷಮೆಯಾಚಿಸಿದ್ದಾರೆ. ಸಚಿವ ಸತೀಶ್‌ ಜಾರಕಿಹೊಳಿ ಅವರು ಅಲ್ಲಿ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ಸಚಿವರು ನಮ್ಮ ಜಿಲ್ಲೆಯ ನಾಯಕರು. ಅವರ ಮುಂದೆ ನನ್ನ ಪತಿ ಅವರೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದು ನನಗೂ ಬೇಸರ ತರಿಸಿದೆ ಎಂದು ಕ್ಷೇಮೆ ಯಾಚಿಸಿದ್ದಾರೆ.
ಮದಿಹಳ್ಳಿ ಪಿಕೆಪಿಎಸ್‌ ಸದಸ್ಯ ಮಾರುತಿ ಸನದಿ ಪತ್ನಿ ಲಗಮವ್ವಾ ಸನದಿ ಅವರು  ಕ್ಷಮೆಯಾಚಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
WhatsApp Group Join Now
Telegram Group Join Now
Share This Article