ಬಳ್ಳಾರಿ, ಜ.29..ಮಗರದ ರೇಡಿಯೋ ಪಾಕ೯ ಶ್ರೀವ್ಯಾಸರಾಜಮಠದಲ್ಲಿ ಶ್ರದ್ದಾ ಭಕ್ತಿ ಯಿಂದ ಮಧ್ವನವಮಿ ಯನ್ನು ಆಚರಿಸಲಾಯಿತು. ಮಧ್ವನವಮಿ ಅಂಗವಾಗಿ ಪಂಡಿತ್ ಜಿತೇಂದ್ರಾಚಾಯ೯ ಜೋಯಿಸ್ಅವರಿಂದ ಮೂರು ದಿನಗಳ ಶ್ರೀಮಧ್ವವಿಜಯ ಅನುವಾದದ ಕುರಿತು ಪ್ರವಚನ ಜರುಗಿತು.
ಬೆಳಿಗ್ಗೆ ಸುಪ್ರಭಾತ, ವಾಯುಸ್ತುತಿ ಪಾರಾಯಣ ಹಾಗೂ ಪಂಚಾಮೃತ ಅಭಿಷೇಕ ನಡೆದವು. ನಂತರ ಶ್ರೀ ಮಧ್ವಾಚಾರ್ಯರ ಚಿತ್ರಪಟದ ಮೆರವಣಿಗೆ ಶ್ರೀಮಠದಿಂದ ರೇಡಿಯೋ ಪಾಕ೯ ಅಭಯಾಂಜನೇಯ ದೇವಸ್ಥಾನ ವರೆಗೆ ಸಾಗಿತು. ದಾರಿ ಉದ್ದಕ್ಕೂ ಜಯಘೋಷ,. ಭಜನಾಮಂಡಳಿಗಳಿಂದ ದೇವರನಾಮಸಂಕೀತ೯ನೆ ಕೋಲಾಟ ನಾನಾವಾದ್ಯ ಮೇಳಗಳು ನಡೆದವು. ಶ್ರೀಮಧ್ವಾಚಾಯ೯ರ ಪಟವನ್ನು ರಜತ ರಥದಲ್ಲಿರಿಸಿಮಠದಪ್ರಾಕಾರದಲ್ಲಿ ರಥೋತ್ಸವ ಜರುಗಿಸಲಾಯಿತು. ಶ್ರೀ ಮಧ್ವ ವಿಜಯದ ಅನುವಾದದ ಪ್ರವಚನ ಮಂಗಳಮಹೋತ್ಸವ ನಡೆಯಿತು.
ಮಧ್ಯಾಹ್ನ ಮಹಾಮಂಗಳಾರತಿ ಅಲಂಕಾರ ಬ್ರಾಹ್ಮಣ ಭೋಜನ, ಭಕ್ತಾದಿಗಳಿಗೆ ತೀರ್ಥಪ್ರಸಾದ ನಡೆಯಿತು. ಮಧ್ವನವಮಿ ಅಂಗವಾಗಿ ಪಂಚಬೃಂದಾವನಗಳಿಗೆ ವಿವಿಧ ಪುಷ್ಪ ಗಳಿಂದ ಅಲಂಕಾರ ಮಾಡಲಾಗಿತ್ತು. ಮಠದಪ್ರಧಾನ ಅಚ೯ಕರಾದ ಶ್ರೀ.ಕೆ. ಪಾಂಡು ರಂಗಾಚಾಯ೯ ಅವರು ಪೂಜಾ ಕೖಂಕಯ೯ ಗಳನ್ನುನೇರವೇರಿಸಿದರು. ಸಾಯಂಕಾಲ ಶ್ರೀವ್ಯಾಸರಾಜ ಭಜನಾ ಮಂಡಳಿಯ ವರಿಂದ ಭಜನಾ ಕಾಯ೯ಕ್ರಮ ನಡೆಯಿತು ನಂತರ ಸ್ವಸ್ತಿವಾಚನ. ಮಂಗಳಾರತಿ ಜರುಗಿತು. ಭಕ್ತಾಧಿಗಳಿಗೆ ತೀರ್ಥ, ಪ್ರಸಾದ ವಿತರಿಸಲಾಯಿತು. ಕಾಯ೯ಕ್ರಮದಲ್ಲಿ ಮಠದ ಹಿತೖಷಿಗಳು ಹಾಗೂನೂರಾರುಭಕ್ತರು ಪಾಲ್ಗೊಂಡಿದ್ದರು.


