ನೆನಪುಗಳ ಮಾತು ಮಧುರ – ಈ ವಾರ ತೆರೆಗೆ 

Sandeep Malannavar
ನೆನಪುಗಳ ಮಾತು ಮಧುರ – ಈ ವಾರ ತೆರೆಗೆ 
WhatsApp Group Join Now
Telegram Group Join Now
ಇದು ರೆಡ್ ಅಂಡ್ ವೈಫ್ ಸೆವೆನ್ ರಾಜ್ ನಿರ್ಮಾಣದ ಚಿತ್ರ
     ಸುಪ್ರಸಿದ್ಧ  ರೆಡ್ ಅಂಡ್ ವೈಟ್ ಸೆವೆನ್  ಸೆವೆನ್ ರಾಜ್ ಅವರ  ನಿರ್ಮಾಣದ ವಿಭಿನ್ನ ಕಥಾಹಂದರ ಹೊಂದಿರುವ  ‘ನೆನಪುಗಳ ಮಾತು ಮಧುರ’ ಚಿತ್ರ ರಾಜ್ಯದ್ಯಂತ ಬಿಡುಗಡೆಯಾಗಿದೆ.
ಅಫ್ಜಲ್ ನಿರ್ದೇಶನದ  ‘ನೆನಪುಗಳ ಮಾತುಮಧುರ’ ಚಿತ್ರದಲ್ಲಿ  ನಾಲ್ಕು ಸ್ನೇಹಿತರ ನಡುವೆ ನಡೆಯುವ ನಾಲ್ಕು ಕಥೆಗಳ ಗುಚ್ಛವಿದೆ. “ವಿಭಿನ್ನ ಕಥಾ ಹಂದರದ ಹೊಂದಿರುವ ಈ ಚಿತ್ರದಲ್ಲಿ ಮರ್ಡರ್ ಮಿಸ್ಟ್ರಿ,  ಹಾರರ್ , ಹಾಸ್ಯ,  ಈಗಿನ ಕಾಲದ ಯುವಕರ ಜೀವನದಲ್ಲಿ ನಡೆಯುತ್ತಿರುವ ಕೆಲವು ವಿಭಿನ್ನ ಅಂಶಗಳು ಇರಲಿದೆ” ಎನ್ನುತ್ತಾರೆ ನಿರ್ದೇಶಕ ಅಫ್ಜಲ್.
ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.
ನಿರ್ಮಾಪಕ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರು ” ಕನ್ನಡದಲ್ಲಿ ಇದು ನನ್ನ ನಿರ್ಮಾಣದ ಮೂರನೇ ಚಿತ್ರ. ಪ್ರೇಕ್ಷಕರಿಗೆ ಇಷ್ಟವಾಗುವ ಮತ್ತು ಉತ್ತಮ ಸಂದೇಶವಿರುವ  ಚಿತ್ರಗಳನ್ನು ಕೊಡಬೇಕೆನ್ನುವುದು ನನ್ನ ಉದ್ದೇಶ.
ನಿರ್ದೇಶಕ ಅಫ್ಜಲ್ ಅವರು ತಮ್ಮ ಎರಡ್ಮೂರು ಚಿತ್ರಗಳಲ್ಲಿ ನನಗೆ ನಟಿಸಲು ಅವಕಾಶ  ಕೊಟ್ಟಿದ್ರು. ಅವರ ವರ್ಕಿಂಗ್ ಸ್ಟೈಲ್ ಇಷ್ಟವಾಗಿ ನಾವೇ ಯಾಕೆ ಚಿತ್ರ ಮಾಡಬಾರದು ಅಂತ ನಿರ್ಮಾಣ ಮಾಡಿದ್ದೇ  ‘ನೆನಪುಗಳ ಮಾತು ಮಧುರ’
ಚಿತ್ರ. ವಿಭಿನ್ನವಾಗಿದೆ ಕನ್ನಡ ಪ್ರೇಕ್ಷಕರು ನೋಡಿ ಪ್ರೋತ್ಸಾಹಿಸಿ” ಎಂದು ಕೋರಿದ್ದಾರೆ.
ರೆಡ್ ಅಂಡ್ ವೈಟ್ ಸೆವೆನ್ ರಾಜ್
ಅವರು ಕನ್ನಡದ ಸೇರಿದಂತೆ ತಮಿಳು, ಮಲಯಾಳಂ ಬಹುಭಾಷೆಗಳಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ ಮತ್ತು ನಟಿಸಿದ್ದಾರೆ.
ಈ ಚಿತ್ರಕ್ಕೆ ಸ್ವಾಮಿ ಮೈಸೂರು ಛಾಯಾಗ್ರಹಣ,
ರಾಜು ಎಮ್ಮಿಗನೂರು ಸಂಗೀತ ನಿರ್ದೇಶನ,  ಕಾರ್ತಿಕ್ ಈಶ್ವರಾಚಾರಿ ಸಂಕಲನ ಹಾಗೂ ದೇವರಾಜ ಕುಷ್ಟಗಿ  ಹಿನ್ನೆಲೆ ಸಂಗೀತವಿದೆ‌.
ನಿರ್ದೇಶಕ ಅಫ್ಜಲ್ ಅವರು ಪ್ರಮುಖಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ಮತ್ತೊಂದು ಮುಖ್ಯಪಾತ್ರದಲ್ಲಿ ನಿರ್ಮಾಪಕ ಸೆವೆನ್ ರಾಜ್ ಸಹ ನಟಿಸಿದ್ದಾರೆ. ವಸಿಷ್ಠ ಬಂಟನೂರು, ರಣವೀರ್, ರಾಜಪ್ರಭು, ವಿನಯ್, ಅಂಜಲಿ, ಸೌಮ್ಯ, ರೇಖಾ ರಮೇಶ್, ಶುಭ ತೀರ್ಥ, ವಾದ್ಯಾ, ಗುಬ್ಬಚ್ಚಿ , ಅರವಿಂದ್, ನಾಗೇಂದ್ರ ಅರಸ್ ಮುಂತಾದವರ ತಾರಾಬಳಗವಿದೆ.
WhatsApp Group Join Now
Telegram Group Join Now
Share This Article