ಕ್ರೀಡಾಕೂಟಲ್ಲಿ ಮಾಧವಾನಂದ ಶಾಲೆಗೆ ಪ್ರಶಸ್ತಿಗಳ ಸುರಿಮಳೆ

Ravi Talawar
ಕ್ರೀಡಾಕೂಟಲ್ಲಿ ಮಾಧವಾನಂದ ಶಾಲೆಗೆ ಪ್ರಶಸ್ತಿಗಳ ಸುರಿಮಳೆ
WhatsApp Group Join Now
Telegram Group Join Now

ರನ್ನ ಬೆಳಗಲಿ: ಪಟ್ಟಣದ ಸಮೀಪದ ನಾಗರಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಮ್.ಪಿ.ಎಸ್ ಕ್ಲಸ್ಟರ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಮಾಧವಾನಂದ ಕನ್ನಡ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನಾಗರಾಳ ಶಾಲೆಯ ಮಕ್ಕಳು ಕ್ರೀಡೆಯಲ್ಲಿ ಗಂಡು ಮಕ್ಕಳ ಥ್ರೋ ಬಾಲ್ ಪ್ರಥಮ, ಗಂಡು ಮಕ್ಕಳ ಗುಂಡು ಎಸೆತ ಪ್ರಥಮ,೧೦೦ ಮೀಟರ್ ಓಟ ತೃತೀಯ ಸ್ಥಾನ, ಎರಡು ಮೀಟರ ಓಟ ದ್ವಿತೀಯ ಸ್ಥಾನ, ಕಬ್ಬಡಿ ದ್ವಿತೀಯ ಸ್ಥಾನ, ೪೦೦ ಮೀಟರ್ ದ್ವಿತೀಯ, ರಿಲೇ ದ್ವಿತೀಯ, ಎತ್ತರ ಜಿಗಿತ ದ್ವಿತೀಯ ಸ್ಥಾನ, ಪಡೆದು ಶಾಲೆಗೆ
ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಈ ಮಕ್ಕಳನ್ನು ಸಂಸ್ಥೆಯ ಅಧ್ಯಕ್ಷರಾದ ಆರ್ . ಟಿ.ಪಾಟೀಲ, ಕಾರ್ಯದರ್ಶಿಗಳಾದ ಈರಣ್ಣ ಅರಗಂಜಿ, ಸದಸ್ಯರಾದ ಮೌನೇಶ್ ಪತ್ತಾರ, ಶ್ರೀಶೈಲಗೌಡ ಪಾಟೀಲ, ವಿಠ್ಠಲಗೌಡ ನ್ಯಾಮಗೌಡ್ರ ಮತ್ತು ಮುಖ್ಯ ಗುರುಗಳಾದ ಅಶೋಕ ಯಡಹಳ್ಳಿ, ಹಾಗೂ ಶಾಲೆಯ ಸಿಬ್ಬಂದಿ ವರ್ಗ ವಿಜೇತಗೊಂಡ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.

WhatsApp Group Join Now
Telegram Group Join Now
Share This Article