ದೇವೇಗೌಡರ ಸಾವು ಬಯಸುವ ಎಲ್ ಆರ್ ಶಿವರಾಮೇಗೌಡರದ್ದು ಹೀನ ಸಂಸ್ಕೃತಿ: ನಿಖಿಲ್ ಕುಮಾರಸ್ವಾಮಿ

Ravi Talawar
ದೇವೇಗೌಡರ ಸಾವು ಬಯಸುವ ಎಲ್ ಆರ್ ಶಿವರಾಮೇಗೌಡರದ್ದು ಹೀನ ಸಂಸ್ಕೃತಿ: ನಿಖಿಲ್ ಕುಮಾರಸ್ವಾಮಿ
WhatsApp Group Join Now
Telegram Group Join Now

ಬೆಂಗಳೂರು,20: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಸಾವು ಬಯಸುವ ಎಲ್ ಆರ್ ಶಿವರಾಮೇಗೌಡ ಅವರದ್ದು ಹೀನ ಸಂಸ್ಕೃತಿ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ನಿಖಿಲ್, ಎಲ್ ಆರ್ ಶಿವರಾಮೇಗೌಡ ಮಾತಾಡುವಾಗ ಸಭ್ಯತೆ ಮರೆಯೋದು ಹೊಸದೇನಲ್ಲ, ಕೇಡು ಬಯಸಿ ಆಡಿರುವ ಮಾತಿನ ಆಡಿಯೋ ವೈರಲ್ ಆಗಿದೆ. ಶಿವರಾಮೇಗೌಡರ ಮಾತುಗಳನ್ನು ಕೇಳಿರುವ ಜನಕ್ಕೆ ಎಂಥ ರಾಜಕಾರಣಿ ಅಂತ ಗೊತ್ತಾಗಿದೆ .ವಿಷಯಾಧಾರಿತ ರಾಜಕಾರಣ ಮಾಡಿ ಗೊತ್ತಿರದ ಮತ್ತು ಒಬ್ಬ ಮಾಜಿ ಪ್ರಧಾನಿಯ ಹಾಗೂ ರಾಜ್ಯದ ಹಿರಿಯ ಮುತ್ಸದ್ದಿಯ ಸಾವು ಬಯಸುವ ಅವರೊಬ್ಬ ಸಂಸ್ಕೃತಿಹೀನ ವ್ಯಕ್ತಿ ಎಂದು ನಿಖಿಲ್ ಹೇಳಿದರು.

ಹೆಚ್ ಡಿ ಕುಮಾರಸ್ವಾಮಿಯವರಿಗೆ ಕೇವಲ ತಮ್ಮ ಮಗನ ಭವಿಷ್ಯದ ಬಗ್ಗೆ ಮಾತ್ರ ಯೋಚನೆ ಇದೆ ಅಂತಲೂ ಅವರು ಹೇಳಿದ್ದಾರೆ, ಆದರೆ ತಮ್ಮ ತಂದೆ ಯಾವತ್ತೂ ಹಾಗೆ ಯೋಚಿಸಿಲ್ಲ. ಬೇರೆಯವರ ಹಾಗೆ ಕುಮಾರಸ್ವಾಮಿಯವರು ಹೊಂದಾಣಿಕೆ ರಾಜಕಾರಣ ಮಾಡಿದ್ದರೆ, ತಾನು ಯಾವುದೋ ಉನ್ನತ ಸ್ಥಾನದಲ್ಲಿರುತ್ತಿದ್ದೆ, ರಾಜಕಾರಣದಲ್ಲಿ ಪರಿಶ್ರಮ ವಹಿಸಿ ತನ್ನ ಐಡೆಂಟಿಟಿ ಸೃಷ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವೆನೆಂದು ಹೇಳಿದರು. ರಾಜಕಾರಣ ಮಾಡಲಿ, ಆದರೆ ಈ ರೀತಿಯ ನೀಚ ರಾಜಕಾರಣ ಮಾಡಬಾರದು ಎಂದು ಹೇಳಿದ್ದಾರೆ.

 

WhatsApp Group Join Now
Telegram Group Join Now
Share This Article