ಪರಿಶುದ್ಧ ಭಕ್ತಿ ಮಾಡಿದವರ ಕಷ್ಟ ಪರಿಹರಿಸುತ್ತಾನೆ ಭಗವಂತ : ಸಹಜಾನಂದ ಶ್ರೀಗಳು

Sandeep Malannavar
ಪರಿಶುದ್ಧ ಭಕ್ತಿ ಮಾಡಿದವರ ಕಷ್ಟ ಪರಿಹರಿಸುತ್ತಾನೆ ಭಗವಂತ : ಸಹಜಾನಂದ ಶ್ರೀಗಳು
WhatsApp Group Join Now
Telegram Group Join Now

ಬನಶಂಕರಿ ಸಾಂಸ್ಕೃತಿ ಭವನದಲ್ಲಿ ಬಸವಾನಂದ ಸ್ವಾಮಿಗಳ ೫೨ ನೇ ಪುಣ್ಯಾರಾಧನೆ
ಮಹಾಲಿಂಗಪುರ : ಕಷ್ಟಗಳು ಬರುವುದು ಸರ್ವೇ ಸಾಮಾನ್ಯ ಆದರೆ ಅದನ್ನು ಪರಿಹರಿಸುವುದು ಸುಲಭವಿಲ್ಲ ಸಂಕಟ ಬಂದಾಗ ವೆಂಕಟರಮಣ ಎಂದರೆ ದೇವರು ಕರುಣೆ ತೋರುವುದಿಲ್ಲ ಯಾರು ಭಗವಂತನಲ್ಲಿ ಪರಿಶುದ್ಧ ಭಕ್ತಿ ಇಟ್ಟು ದೇವರನ್ನು ನೆನೆಯುತ್ತಾರೆ ಅವರ ಕಷ್ಟಗಳನ್ನು ಭಗವಂತ ಪರಿಹರಿಸುತಾನೆ ಎಂದು ಸ್ಥಳೀಯ ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದ ಪ ಪೂ ಶ್ರೀ ಸಹಜಾನಂದ ಸ್ವಾಮೀಜಿ ಹೇಳಿದರು.
ನಗರದ ಬನಶಂಕರಿ ಸಾಂಸ್ಕೃತಿ ಭವನದಲ್ಲಿ ನಡೆಯುತ್ತಿರುವ ಶ್ರೀ ಬಸವಾನಂದ ಮಹಾಸ್ವಾಮಿಗಳ ೫೨ ನೇ ಪುಣ್ಯಾರಾಧನೆ ಕಾರ್ಯಕ್ರಮದ ಮೊದಲ ದಿನದ ವೇದಾಂತ ಪರಿ?ತ್ತಿನ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿ ಭಗವಂತನಲ್ಲಿ ಬರಿ ಭಕ್ತಿ ಮಾಡಿದರೆ ಸಾಲದು ನಾವು ಮಾಡುವ ಭಕ್ತಿ ಭಗವಂತನ ಪ್ರೀತಿಗೆ ಪಾತ್ರವಾದರೆ ಮಾತ್ರ ಭಕ್ತರ ಕ?ಗಳಿಗೆ ಪರಿಹಾರ ಕರುಣಿಸುತ್ತಾನೆ. ಅದಕ್ಕೆ ನಾವು ಮಾಡುವ ಭಕ್ತಿ ಪರಿ ಶುದ್ಧವಾದಾಗ ಮಾತ್ರ ದೇವರು ಒಲಿಯುತ್ತಾನೆ ಎಂದರು.
ನಂತರ ಮಾತನಾಡಿದ ಕಲಬುರಗಿಯ ಪೂರ್ಣ ಪ್ರಜ್ಞ ಯೋಗಾಶ್ರಮದ ಮಾತೋಶ್ರೀ ಲಕ್ಷ್ಮಿದೇವಿಯವರು ಶಿವ ಶಿವ ಎಂದರೆ ಭಯವಿಲ್ಲ ಶಿವನಾಮಕ್ಕೆ ಸಾಟಿ ಬೆರಿಲ್ಲ ಎಂಬ ನಂಬಿಕೆ ನಮ್ಮೆಲ್ಲರದ್ದು ಪರ ಶಿವ ಎಲ್ಲಾ ಕಷ್ಟಗಳನ್ನು ಪರಿಹರಿಸುವ ದೇವರು. ಶಿವಾರಾಧನೆಯಿಂದ ಬದುಕಿನ ಕಷ್ಟಗಳು ದೂರಾಗುತ್ತವೆ. ಯಶಸ್ಸಿನ ಹಾದಿಗಿದ್ದ ಅಡೆತಡೆಗಳು ದೂರವಾಗುತ್ತವೆ. ಎಂಬುದು ನಂಬಿಕೆ ಎಂದರು.
ನಂತರ ಮಾತನಾಡಿದ ಸಿದ್ದರಾಮ ಶಿವಯೋಗಿ ಮಾತನಾಡಿದರು.
ಈ ಸಂಧರ್ಭದಲ್ಲಿ ಕಲಬುರಗಿಯ ನೀಲಮ್ಮಾ ತಾಯಿ, ಶಂಕರೆಮ್ಮಾ ತಾಯಿ, ಮಾತನಾಡಿದರು.ವಿಜಯಪುರದ ಪ ಪೂ ರಾಮಕೃ? ದೇವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಸಿದ್ದಗಿರಿ ಕಾಗಿ ಬಿ ಡಿ ಸೋರಗಾಂವಿ, ಪ್ರಭು ಬೆಳಗಲಿ, ಈಶ್ವರ ವಂದಾಲ, ಬಸವರಾಜ್ ಪಶ್ಚಾಪುರ, ಕಲ್ಲಪ್ಪ ಚಿಂಚಲಿ, ಅಲ್ಲಪ್ಪ ಗುಂಜಿಗಾಂವಿ, ಚನ್ನಪ್ಪ ಪಟ್ಟಣಶೆಟ್ಟಿ, ಮಲ್ಲಪ್ಪ ಕಟಗಿ, ಶಂಕರ ನಿಲಾರಿ, ಮೆಹಬೂಬ ಸನದಿ, ಶ್ರೀಶೈಲ ಉಳ್ಳಾಗಡ್ಡಿ, ಶಂಕರೆಪ್ಪ ಹಣಗಂಡಿ, ಸೇರಿ ಹಲವರು ಇದ್ದರು. ಕಾರ್ಯಕ್ರಮವನ್ನು ಎಸ್ ಕೆ ಗಿಂಡೆ ಗುರುಗಳು ಸ್ವಾಗತಿಸಿದರು,ಹುಮಾಯಿನ ಸುತಾರ ನಿರೂಪಿಸಿ ವಂದಿಸಿದರು. ಪ್ರಸಾದ ದಾನಿಗಳಾದ ಬಸವಾನಂದ ಜಿಟ್ಟಿ ಅವರನ್ನು ಗೌರವಿಸಲಾಯಿತು.

WhatsApp Group Join Now
Telegram Group Join Now
Share This Article