ಬೆಂಗಳೂರು, ಏಪ್ರಿಲ್ 02: ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಇನ್ಸ್ಪೆಕ್ಟರ್ಗೆ ಲೋಕಾಯುಕ್ತ ಶಾಕ್ ನೀಡಿದ್ದು ಬಂಧನ ಭೀತಿ ಹಿನ್ನೆಲೆ ಪರಾರಿಯಾಗಿರುವಂತಹ ಘಟನೆ ನಡೆದಿದೆ. ಸುಳ್ಳು ಕೇಸ್ ದಾಖಲಿಸಿ 4 ಕೋಟಿ ರೂ. ಮೌಲ್ಯದ ಮನೆ ಮಾರಾಟಕ್ಕೆ ನಾಗರಬಾವಿಯ ಖಾಸಗಿ ಹೋಟೆಲ್ನಲ್ಲಿ ಡೀಲ್ ನಡೆದಿತ್ತು. ಈ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ವಿಚಾರ ತಿಳಿದು ಮನೆಯಲ್ಲೇ ಪೊಲೀಸ್ ಜೀಪ್ ಬಿಟ್ಟು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಪರಾರಿ ಆಗಿದ್ದಾರೆ. ನಿನ್ನೆ ಸಂಜೆ 5 ಗಂಟೆಯಿಂದ ಮುಂಜಾನೆ 3 ಗಂಟೆವರೆಗೆ ಕಾರ್ಯಾಚರಣೆ ಮಾಡಲಾಗಿದೆ.
ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಇನ್ಸ್ಪೆಕ್ಟರ್ಗೆ ಲೋಕಾಯುಕ್ತ ಶಾಕ್

4 ಕೋಟಿ ರೂ ಮೌಲ್ಯದ ಮನೆ ಮಾರಾಟಕ್ಕೆ ಒತ್ತಡ ಆರೋಪ: ಸಿವಿಲ್ ಕಂಟ್ರ್ಯಾಕ್ಟರ್ ಚನ್ನೇಗೌಡ ಪತ್ನಿ ಅನುಷಾ ಎಂಬುವವರಿಗೆ ಅನ್ನಪೂರ್ಣೇಶ್ವರಿ ನಗರ ಠಾಣೆ ಪಿಐ ಕುಮಾರ್ನಿಂದ ಕಿರುಕುಳ ಆರೋಪ ಕೇಳಿಬಂದಿದೆ. ಸುಳ್ಳು ಕೇಸ್ ದಾಖಲಿಸಿ ಚನ್ನೇಗೌಡಗೆ ಸೇರಿದ 4 ಕೋಟಿ ರೂ ಮೌಲ್ಯದ ಮನೆ ಮಾರಾಟಕ್ಕೆ ಒತ್ತಡ ಹಾಕಿದ್ದು, ಕಡಿಮೆ ಮೊತ್ತಕ್ಕೆ ನೋಂದಣಿ ಮಾಡಿಕೊಡುವಂತೆ ಪಿಐ ಕಿರುಕುಳ ಆರೋಪ ಮಾಡಲಾಗಿದೆ.