ಹುಕ್ಕೇರಿ.ರೇರಾ ಅನುಮತಿ ಇಲ್ಲದೆ ಬಡಾವಣೆಗಳ ಪಹಣಿ ಹಂಚಿಕೆ ವಿಚಾರದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಆಗಿರುವ ಶಂಕೆ ವಿಚಾರವಾಗಿ ಹುಕ್ಕೇರಿ ಪುರಸಭೆ ಕಚೇರಿಗೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಹುಕ್ಕೇರಿ ಪೂರಸಭೆ ಕಾರ್ಯಾಲಯದ ಮೇಲೆ ನ್ಯಾಯಾಧೀಶರಾದ ರಾಮನಾಥ ಚವ್ಹಾಣ ನೇತೃತ್ವದ ತಂಡ ದಾಳಿ ನಡೆಸಿತು ನ್ಯಾಯಾಧೀಶರು ಪುರಸಭೆ ಅಧಿಕಾರಿಗಳನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು ಪುರಸಭೆಯ ಪ್ರಮುಖ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ನಂತರ ರೇರಾ ಇಲ್ಲದ ಬಡಾವಣೆಗಳಿಗೆ ಅಭಿವೃದ್ಧಿಪಡಿಸದೆ ಪಹಣಿ ಪತ್ರಿಕೆಯ ನಾಳೆ ಮಧ್ಯಾಹ್ನದ ಒಳಗಾಗಿ ಲೋಕಾಯುಕ್ತ ಕಚೇರಿಗೆ ಸಲ್ಲಿಸುವಂತೆ ಪುರಸಭೆ ಮುಖ್ಯ ಅಧಿಕಾರಿ ಈಶ್ವರ ಸಿದ್ನಾಳ ಹಾಗೂ ಕಿರಿಯ ಅಭಿಯಂತರ ರಾಜಶೇಖರ ಪಟ್ಟಣಶೆಟ್ಟಿ ಅವರಿಗೆ ಸೂಚನೆ ನೀಡಿದರು ಇನ್ನು ಮಾಹಿತಿ ಹಕ್ಕು ಅಡಿ ನೀಡದ ಇರುವುದಕ್ಕೆ ಅಧಿಕಾರಿಗಳನ್ನು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡ ಪ್ರಸಂಗ ಕಂಡು ಬಂತು