ರಾಜ್ಯದ 7 ಮಂದಿ ಸರ್ಕಾರಿ ನೌಕರರ ಮನೆ ಮೇಲೆ ಲೋಕಾ ದಾಳಿ

Ravi Talawar
ರಾಜ್ಯದ 7 ಮಂದಿ ಸರ್ಕಾರಿ ನೌಕರರ ಮನೆ ಮೇಲೆ ಲೋಕಾ ದಾಳಿ
WhatsApp Group Join Now
Telegram Group Join Now

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇರೆಗೆ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದ ಏಳು ಮಂದಿ ಸರ್ಕಾರಿ ಅಧಿಕಾರಿ ಮನೆಗಳ ಮೇಲೆ ಬೆಳ್ಳಂಬೆಳ್ಳಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.  ಏಳು ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 40 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು, ಪರಿಶೀಲನೆ ಕೈಗೊಂಡಿದ್ದಾರೆ.

ದಾಳಿ ನಡೆದಿರುವ ಅಧಿಕಾರಿಗಳ ವಿವರ ಹೀಗಿದೆ: 1. ತುಮಕೂರು: ರಾಜಶೇಖರ್, ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ.2. ಮಂಗಳೂರು: ಮಂಜುನಾಥ್, ಸರ್ವೆ ಮೇಲ್ವಿಚಾರಕರು, ದಕ್ಷಿಣ ಕನ್ನಡ.3. ವಿಜಯಪುರ: ಶ್ರೀಮತಿ ರೇಣುಕಾ, ಸಾತರ್ಲೆ, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ.. ಬೆಂಗಳೂರು ನಗರ: ಮುರಳಿ ಟಿವಿ, ಹೆಚ್ಚುವರಿ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ.. ಬೆಂಗಳೂರು ನಗರ: ಹೆಚ್​ಆರ್​ ನಟರಾಜ್, ಇನ್ಸ್‌ಪೆಕ್ಟರ್, ಕಾನೂನು ಮಾಪನಶಾಸ್ತ್ರ.. ಬೆಂಗಳೂರು ಗ್ರಾಮಾಂತರ, ಅನಂತ್ ಕುಮಾರ್ SDA, ಹೊಸಕೋಟೆ ತಾಲೂಕು ಕಚೇರಿ.7. ಯಾದಗಿರಿ: ಉಮಾಕಾಂತ್, ಶಹಾಪುರ ತಾಲೂಕು, ಯಾದಗಿರಿ.

WhatsApp Group Join Now
Telegram Group Join Now
Share This Article