ಪ್ರಜಾಪ್ರಭುತ್ವ ಮೊದಲಿನ ಸ್ಥಿತಿಗೆ ಮರಳಲು ಹೋರಾಟ ನಡೆಸುತ್ತಿದೆ: ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ

Ravi Talawar
ಪ್ರಜಾಪ್ರಭುತ್ವ ಮೊದಲಿನ ಸ್ಥಿತಿಗೆ ಮರಳಲು ಹೋರಾಟ ನಡೆಸುತ್ತಿದೆ: ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ
WhatsApp Group Join Now
Telegram Group Join Now

ವಾಷಿಂಗ್ಟನ್: ಕಳೆದ 10 ವರ್ಷಗಳಿಂದ ಭಾರತದಲ್ಲಿ ಹದಗೆಟ್ಟು ಹೋಗಿದ್ದ ಪ್ರಜಾಪ್ರಭುತ್ವ ಈಗ ತನ್ನ ಮೊದಲಿನ ಸ್ಥಿತಿಗೆ ಮರಳಲು ಹೋರಾಟ ನಡೆಸುತ್ತಿದೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಅಮೆರಿಕದ ವಾಷಿಂಗ್ಟನ್ ನಲ್ಲಿರುವ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಭಾರತೀಯ ಸ್ಥಳೀಯ ಕಾಲಮಾನ ನಿನ್ನೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಭಾರತೀಯ ಪ್ರಜಾಪ್ರಭುತ್ವವು ಹದಗೆಟ್ಟು ಹೋಗಿತ್ತು, ಈಗ ಮತ್ತೆ ಪುಟಿದೇಳಲು ಹೋರಾಡುತ್ತಿದೆ ಎಂದರು.

ಮಹಾರಾಷ್ಟ್ರ ಸರ್ಕಾರವನ್ನು ನಮ್ಮಿಂದ ಕಿತ್ತುಕೊಂಡರು. ನಾನು ಅದನ್ನು ನನ್ನ ಸ್ವಂತ ಕಣ್ಣುಗಳಿಂದ ನೋಡಿದ್ದೇನೆ. ನಾನು ಅದನ್ನು ನೋಡಿದ್ದೇನೆ, ನಮ್ಮ ಶಾಸಕರನ್ನು ಖರೀದಿಸಿ ಇದ್ದಕ್ಕಿದ್ದಂತೆ ಬಿಜೆಪಿ ನಾಯಕರಾದರು. ಹೀಗೆ ಎಲ್ಲಾ ವಿಷಯದಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವ ಆಕ್ರಮಣಕ್ಕೆ ಒಳಗಾಗಿದೆ. ಅತ್ಯಂತ ಕೆಟ್ಟದಾಗಿ ದುರ್ಬಲಗೊಂಡಿದೆ. ಈಗ ಅದು ಮತ್ತೆ ಹೋರಾಡುತ್ತಿದ್ದು, ಹಿಂದಿನ ಸ್ಥಿತಿಗೆ ಮರಳುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು.

ಈ ಬಾರಿಯ ಲೋಕಸಭೆ ಚುನಾವಣಾ ಫಲಿತಾಂಶಗಳನ್ನು ನೋಡಿದರೆ,ಭಾರತದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ನಿಮಗೆ ಹೆಚ್ಚಿನ ಭರವಸೆ ನೀಡುತ್ತದೆಯೇ ಎಂದು ಸುದ್ದಿಗಾರರು ಕೇಳಿದಾಗ, ಹೌದು, ನನ್ನ ಪ್ರಕಾರ, ಆಗುತ್ತದೆ. ಆದರೆ ಭಾರತೀಯ ಮತದಾರ ಸಾಕಷ್ಟು ಬದಲಾಗಿದ್ದಾನೆ ಮತ್ತು ತಿಳುವಳಿಕೆ ಹೊಂದಿದ್ದಾನೆ ಎಂದು ಹೇಳುವಷ್ಟು ಪರಿಸ್ಥಿತಿ ಸುಧಾರಿಸಿಲ್ಲ, ಏಕೆಂದರೆ ಭಾರತೀಯ ಮತದಾರರು ಸಂಪೂರ್ಣ ವಿಧಾನಗಳ ಮೂಲಕ ಮಾಹಿತಿ ಪಡೆದಿದ್ದಾರೆ ಎಂದರು.

WhatsApp Group Join Now
Telegram Group Join Now
Share This Article