ಬೆಂಗಳೂರು, ಮೇ 24: ನಿರಂತರ ದರ ಏರಿಕೆ ಮತ್ತು ಪರವಾನಗಿ ದರ ಹೆಚ್ಚಳ ವಿರೋಧಿಸಿ ಈ ತಿಂಗಳು 29 ರಿಂದ ಕರ್ನಾಟಕದಾದ್ಯಂತ ಮದ್ಯದಂಗಂಡಿ ಬಂದ್ ಮಾಡಲು ರಾಜ್ಯದ ಮದ್ಯ ಮಾರಾಟಗಾರರು ತೀರ್ಮಾನ ಮಾಡಿದ್ದಾರೆ.
ಈಗಾಗಲೇ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಮೇಲೆ ಮೂರು ಬಾರಿ ಮದ್ಯದ ದರ ಏರಿಕೆ ಮಾಡಿದೆ. ಇದರಿಂದ ಹಿಂದಿನ ರೀತಿಯಲ್ಲಿ ಮದ್ಯ ಮಾರಾಟ ಆಗುತ್ತಿಲ್ಲ. ಇದೇ ಸಂದರ್ಭದಲ್ಲಿ ಮದ್ಯ ಮಾರಾಟಗಾರರ ಲೈಸೆನ್ಸ್ ಶುಲ್ಕ ದುಪ್ಪಟ್ಟು ಏರಿಕೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ, ಮದ್ಯ ಮಾರಾಟಗಾರರ ಸಂಘ ಸಭೆ ಕರೆದು ಸಮಾಲೋಚನೆ ನಡೆಸಿದೆ. ನಂತರ ಮದ್ಯ ಮಾರಾಟಗಾರರು ಈ ತಿಂಗಳು 29 ರಿಂದ ಬಾರ್ ಆ್ಯಂಡ್ ರೆಸ್ಟೋರೆಂಟ್, ವೈನ್ ಸ್ಟೋರ್ ಕ್ಲೋಸ್ ಮಾಡಲು ತೀರ್ಮಾನ ಮಾಡಿದ್ದಾರೆ. ಇದೇ 26 ರಂದು ಮುಖ್ಯಮಂತ್ರಿಗಳ ಜತೆ ಸಭೆ ನಡೆಯಲಿದ್ದು, ಅದು ಫಲಪ್ರದವಾಗದಿದ್ದಲ್ಲಿ ಮದ್ಯದಂಗಡಿಗಳ ಬಂದ್ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.