ನವೆಂಬರ್ 20ರಂದು ರಾಜ್ಯೋದಲ್ಲಿ ಮದ್ಯ ಮಾರಾಟ ಬಂದ್! ಮದ್ಯ ಪ್ರಿಯರಿಗೆ ಶಾಕ್

Ravi Talawar
ನವೆಂಬರ್ 20ರಂದು ರಾಜ್ಯೋದಲ್ಲಿ ಮದ್ಯ ಮಾರಾಟ ಬಂದ್! ಮದ್ಯ ಪ್ರಿಯರಿಗೆ ಶಾಕ್
WhatsApp Group Join Now
Telegram Group Join Now

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ  ಮಿತಿಮೀರಿದ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ.

ವರ್ಗಾವಣೆ, ಪ್ರಮೋಷನ್​ಗೆ ಸನ್ನದುದಾರರಿಂದ ಮನಸೋ ಇಚ್ಛೆ ಕೋಟಿ ಕೋಟಿ ರೂ. ಲಂಚ ಕೇಳಲಾಗುತ್ತಿದೆ. ಅಧಿಕಾರಿಗಳ ಲಂಚಾವತಾರದಿಂದ‌ ನಕಲಿ ಅಂತಾರಾಜ್ಯ ಮದ್ಯ ಹೆಚ್ಚಳವಾಗಿದೆ.

ಹೀಗಾಗಿ ಅಬಕಾರಿ ಅಧಿಕಾರಿಗಳ ವಿರುದ್ಧ ಮದ್ಯದಂಗಡಿ ಮಾಲೀಕರು ಸಮರಕ್ಕೆ ಮುಂದಾಗಿದ್ದು, ನವೆಂಬರ್ 20ರಂದು ಕರ್ನಾಟಕದಾದ್ಯಂತ ಮದ್ಯ ಮಾರಾಟ ಬಂದ್​ಗೆ ಕರೆ ನೀಡಲಾಗಿದೆ.

ರಾಜ್ಯ ವೈನ್ ಮರ್ಚೆಂಟ್​ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್​ ಹೆಗ್ಡೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವೆಂಬರ್ 20ರಂದು ಕರ್ನಾಟಕದಾದ್ಯಂತ ಎಂಎಸ್​​ಐಎಲ್​ ಹೊರತುಪಡಿಸಿ ಎಲ್ಲಾ ಬಾರ್​ಗಳು ಬಂದ್​ಗೆ ಕರೆ ನೀಡಿರುವುದಾಗಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article